Advertisement
ರಾಹುಲ್ ಗಾಂಧಿ ಇಂತಹ ಬೇಜವಾಬ್ದಾರಿ ಹೇಳಿಕೆ ನೀಡುವುದು ಇದು ಮೊದಲಲ್ಲ. ಕಾಂಗ್ರೆಸ್ ನೈತಿಕವಾಗಿ, ರಾಜಕೀಯವಾಗಿ ಮಾತ್ರವಲ್ಲ, ಈಗ ಕಾನೂನುರೀತ್ಯಾ ಕೂಡ ಸೋತಿದೆ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಹೇಳಿದರು.
ಹಿಂದೆ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರೇ ಸರಕಾರ ಕೊಡುವ 1 ರೂ. ಪರಿಹಾರದಲ್ಲಿ 15 ಪೈಸೆ ಮಾತ್ರ ಫಲಾನುಭವಿಗೆ ಹೋಗುತ್ತದೆ ಎಂದಿದ್ದರು. ಇದರಿಂದ ಶೇ 85 ಅವರ ಕಮಿಷನ್ ಆದಂತಾಗಲಿಲ್ಲವೇ ಎಂದು ತ್ರಿವೇದಿ ಪ್ರಶ್ನಿಸಿದರು. ಲೋಕಾಯುಕ್ತವನ್ನು ಬಲಗುಂದಿಸಿದ್ದು ಕಾಂಗ್ರೆಸ್ ಎಂದು ಆರೋಪಿಸಿದರು. ಮೋದಿ ಸರಕಾರ ಜಾರಿ ನಿರ್ದೇಶನಾಲಯ (ಇ.ಡಿ.) ಹಾಗೂ ಸಿಬಿಐಗಳನ್ನು ದುರುಪಯೋಗ ಮಾಡುತ್ತಿಲ್ಲ. ಭ್ರಷ್ಟಾಚಾರದ ಪ್ರಕರಣಗಳು ಹಿಂದಿನಿಂದಲೂ ಇದ್ದವು ಎಂದು ತ್ರಿವೇದಿ ಹೇಳಿದರು.
Related Articles
Advertisement