Advertisement

Mangaluru: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: 1.15 ಕೋ.ರೂ. ಚಿನ್ನ, ಕೇಸರಿ ಪತ್ತೆ

01:39 AM Dec 19, 2024 | Team Udayavani |

ಮಂಗಳೂರು: ದುಬಾೖ ಮತ್ತು ಅಬುಧಾಬಿಯಿಂದ ಮಂಗಳೂರಿಗೆ ಅಕ್ರಮವಾಗಿ ಸಾಗಿಸು ತ್ತಿದ್ದ 1.15 ಕೋ.ರೂಮೌಲ್ಯದ ಚಿನ್ನ, ಕೇಸರಿಯನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಪಡಿಸಿಕೊಳ್ಳಲಾಗಿದೆ.

Advertisement

ಡಿ.8 ಮತ್ತು 11ರ ನಡುವೆ ಏರ್‌ ಇಂಡಿಯಾ ಮತ್ತು ಇಂಡಿಗೋ ವಿಮಾನಗಳಲ್ಲಿಬಂದ ಕಾಸರಗೋಡು ಮತ್ತು ಹೊನ್ನಾವರದ ಮೂವರುಪ್ರಯಾಣಿಕರ ಅನುಮಾ ನಾಸ್ಪದ ಚಲನ ವಲನಗಳನ್ನು ಗಮನಿಸಿದ ಅಧಿಕಾರಿಗಳು ಅವರನ್ನು ವಶಕ್ಕೆ ಪಡೆದು ತಪಾಸಣೆಗೆ ಒಳಪಡಿಸಿದಾಗ ಒಳ ಉಡುಪುಗಳಲ್ಲಿ ಬಚ್ಚಿಟ್ಟಿದ್ದ ಚಿನ್ನ ಪತ್ತೆಯಾಗಿದೆ.

ಇನ್ನೊಂದು ಪ್ರಕರಣದಲ್ಲಿ ಗುದದ್ವಾರದಲ್ಲಿ ಅಡಗಿಸಿಟ್ಟಿದ್ದ ಚಿನ್ನ ಪತ್ತೆಯಾಗಿದೆ. ರಟ್ಟಿನಪೆಟ್ಟಿಗೆಯ ತಳದಲ್ಲಿ ಅಂಟಿಸಿ ಪುಡಿ ರೂಪದಲ್ಲಿ ಚಿನ್ನ ಸಾಗಿಸುತ್ತಿರುವುದನ್ನು ಪತ್ತೆ ಮಾಡಲಾಗಿದೆ. 1,429 ಗ್ರಾಂ ಚಿನ್ನದ ಆಭರ ಣಗಳು ಮತ್ತು 478 ಗ್ರಾಂ ತೂಕದ ಕೇಸರಿ ವಶಪಡಿಸಿಕೊಳ್ಳಲಾಗಿದೆ ಎಂದು ಕಸ್ಟಮ್ಸ್‌ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next