Advertisement

Air India; ಮಂಗಳೂರಿನಿಂದ ಜೆಡ್ಡಾಕ್ಕೆ ಸಂಪರ್ಕ ಬೆಸೆಯಲು ಸಜ್ಜು: ಎ.3 ರಿಂದ ಹಾರಾಟ

06:07 PM Feb 02, 2024 | Team Udayavani |

ಮಂಗಳೂರು: ಮಂಗಳೂರಿನಿಂದ ಜೆಡ್ಡಾಕ್ಕೆ ಸಂಪರ್ಕ ಬೆಸೆಯಲು ಏರ್‌ಇಂಡಿಯಾ ಸಜ್ಜಾಗಿದೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಜೆಡ್ಡಾಕ್ಕೆ ಎಪ್ರಿಲ್ 3 ರಿಂದ ವಿಮಾನ ಹಾರಾಟ ಆರಂಭಗೊಳ್ಳಲಿದೆ.ಈ ಸಾಪ್ತಾಹಿಕ ವಿಮಾನವು ಪ್ರತಿ ಬುಧವಾರ ಸಂಚರಿಸುವುದು.

Advertisement

IX 499 ವಿಮಾನವು ಮಂಗಳೂರಿನಿಂದ ಮಧ್ಯಾಹ್ನ 2.50 ಕ್ಕೆ ಹೊರಟು 6.25 ಸಂಜೆ(ಜೆಡ್ಡಾ ಸಮಯ) ಜೆಡ್ಡಾ ತಲಪಲಿದೆ. ಹಿಂಪ್ರಯಾಣದಲ್ಲಿ IX 498 ವಿಮಾನವು ಜೆಡ್ಡಾದಿಂದ 7.25 ರಾತ್ರಿ ಹೊರಟು ಮಂಗಳೂರಿಗೆ ಗುರುವಾರ ಮುಂಜಾನೆ 3.40ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ತಲಪುವುದು.

ಈಗಾಗಲೇ ಏರ್‌ಇಂಡಿಯಾ ಎಕ್ಸ್ ಪ್ರೆಸ್‌ ಇದಕ್ಕೆ ಬುಕಿಂಗ್‌ ಆರಂಭಿಸಿದೆ. ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ಕಂಪನಿಯು ಇದಕ್ಕಾಗಿ 186 ಸೀಟ್‌ಗಳ ಬೋಯಿಂಗ್‌ 737- 800 ವಿಮಾನವನ್ನು ಸಜ್ಜುಗೊಳಿಸಿದೆ.

ಪ್ರಸ್ತುತ ಮಂಗಳೂರು ವಿಮಾನ ನಿಲ್ದಾಣವು ಅಬುದಾಭಿ, ಬಹ್ರೇನ್‌, ದಮ್ಮಾಮ್‌, ದೋಹಾ, ದುಬೈ, ಕುವೈಟ್‌, ಮಸ್ಕತ್ ವಿಮಾನ ನಿಲ್ದಾಣಗಳಿಗೆ ವಿಮಾನ ಸೇವೆಯನ್ನು ಹೊಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next