Advertisement

Mangaluru: ಹರೇಕಳ ಸೇತುವೆ ಜಲಾವೃತ, ಕಾಸರಗೋಡಿನಲ್ಲಿ ಗಾಳಿ, ಮಳೆ ಮನೆಗಳಿಗೆ ಹಾನಿ

12:55 AM Jul 31, 2024 | Team Udayavani |

ಉಳ್ಳಾಲ: ಅಡ್ಯಾರಿನಿಂದ ಹರೇ ಕಳವನ್ನು ಸಂಪರ್ಕಿಸುವ ಹರೇಕಳ ಸೇತುವೆ ಅಡ್ಯಾರು ಬಳಿ ಜಲಾ ವೃತಗೊಂಡಿದ್ದು, ವಾಹನ
ಸಂಚಾರ ಸ್ಥಗಿತಗೊಂಡಿದೆ. ಈಗ ಜನ ಸುತ್ತುಬಳಸಿ ತೊಕ್ಕೊಟ್ಟು-ಕೊಣಾಜೆ ಮಾರ್ಗವಾಗಿ ತೆರಳಬೇಕಾಗಿದೆ. ಒಂದು ಕೀ.ಮೀ. ಬದಲು ಈಗ 25 ಕಿ.ಮೀ. ಕ್ರಮಿಸಬೇಕಾಗಿದೆ.

Advertisement

50 ಮನೆಗಳು ಜಲಾವೃತ:
ಉಳ್ಳಾಲ ವ್ಯಾಪ್ತಿಯ ನೇತ್ರಾವತಿ ನದಿ ತೀರದ ಎಲ್ಲ ತಗ್ಗು ಪ್ರದೇಶಗಳು ಮುಳುಗಡೆ, ಪಾವೂರು, ಹರೇಕಳ, ಮುನೂºರು, ಅಂಬ್ಲಿಮೊಗರು, ಉಳ್ಳಾಲ ನದಿ ತೀರ ಪ್ರದೇಶಗಳು ಮುಳುಗಡೆ ಸುಮಾರು 50ಕ್ಕೂ ಹೆಚ್ಚುಮನೆಗಳು ಜಲಾವೃತ. ಪಾವೂರು ವ್ಯಾಪ್ತಿಯಲ್ಲಿ 12 ಮನೆ‌ಗಳ ನಿವಾಸಿಗಳನ್ನು ಎನ್‌ಡಿಆರ್‌ಎಫ್ ತಂಡ ಆಗಮಿಸಿ ಸ್ಥಳಾಂತರಿಸಿದೆ.

ಕಾಸರಗೋಡು: ಗಾಳಿ, ಮಳೆ ಮನೆಗಳಿಗೆ ಹಾನಿ, ಕಡಲ್ಕೊರೆತ
ಕಾಸರಗೋಡು: ಜಿಲ್ಲೆಯಾದ್ಯಂತ ಭಾರೀ ಗಾಳಿ ಸಹಿತ ಧಾರಾಕಾರ ಮಳೆಯಾಗುತ್ತಿದೆ. ಮಳೆ ಹಾಗೂ ಗಾಳಿಗೆ ಕುಂಬಳೆ ಬದ್ರಿಯಾ ನಗರ ನಡುಕುನ್ನಿನ ಇಬ್ರಾಹಿಂ ವಳವಿಲ್‌ ಅವರ ಮನೆ ಹಾನಿಗೀಡಾಗಿದೆ. ಈ ಸಂದರ್ಭ ಮನೆಯಲ್ಲಿದ್ದ ಇಬ್ರಾಹಿಂ ಅವರ ಪತ್ನಿ ಹಾಗೂ ಮಗು ಹೊರಗೆ ಓಡಿದ್ದರಿಂದ ಅಪಾಯದಿಂದ ಪಾರಾಗಿದ್ದಾರೆ.

ಪೆರ್ವಾಡ್‌ ಕಡಪುರದಲ್ಲಿ ತೆಂಗಿನ ಮರ ಬಿದ್ದು ಮರಿಯಮ್ಮ ಅವರ ಮನೆ ಹಾನಿಗೀಡಾಗಿದೆ. ಶಬ್ದ ಕೇಳಿ ಮನೆಯಿಂದ ಹೊರಗೆ ಓಡಿದ್ದರಿಂದ ಅಪಾಯದಿಂದ ಪಾರಾದರು. ಗಾಳಿ ಮಳೆಯಿಂದ ಜಿಲ್ಲೆಯ ವಿವಿಧೆಡೆ ಕಡಲ್ಕೊರೆತ ತೀವ್ರಗೊಂಡಿದೆ. ತಗ್ಗು ಪ್ರದೇಶದಲ್ಲಿ ನೀರು ತುಂಬಿಕೊಂಡು ಅಪಾಯದ ಸ್ಥಿತಿಯಲ್ಲಿದೆ. ಅಲ್ಲಲ್ಲಿ ವಾಹನ ಸಂಚಾರಕ್ಕೂ ಸಮಸ್ಯೆ ಉಂಟಾಗಿದೆ.

ಮುಂದಿನ 48 ಗಂಟೆಗಳ ವರೆಗೆ ಭಾರೀ ಗಾಳಿ ಮಳೆಯಾಗಲಿದೆ ಎಂದು ಕೇಂದ್ರ ಹವಾಮಾನ ಇಲಾಖೆ ತಿಳಿಸಿದೆ. ಭೂಕುಸಿತ, ಮಣ್ಣು ಕುಸಿತ, ನೀರು ನಿಲ್ಲುವ ಪ್ರದೇಶಗಳಲ್ಲಿರುವವರು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳಬೇಕೆಂದು ಮುನ್ನೆಚ್ಚರಿಕೆ ನೀಡಿದೆ. ನದಿ ತಟಗಳ ಬದಿಯಲ್ಲಿ, ಅಣೆಕಟ್ಟು ಪ್ರದೇಶಗಳಲ್ಲಿ ವಾಸಿಸುವವರು ಸುರಕ್ಷಿತ ಸ್ಥಳಕ್ಕೆ ವಾಸ್ತವ್ಯ ಸ್ಥಳಾಂತರಗೊಳ್ಳಲು ತಿಳಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next