Advertisement
ಬಾಗಲಕೋಟೆಯ ದಾವಲ್ ಸಾಬ್ (34) ಶಿಕ್ಷೆಗೊಳಗಾದವನು. ಘಟನೆ 2023ರ ಮಾರ್ಚ್‌ನಲ್ಲಿ ನಡೆದಿತ್ತು.
ಬಾಲಕಿ ಶಾಲೆಯಿಂದ ಬಿ.ಸಿ. ರೋಡ್‌ನಲ್ಲಿನ ತನ್ನ ಮನೆಗೆ ಬರಲು ಕಲ್ಲಡ್ಕದಲ್ಲಿ ಬಸ್ ಹತ್ತಿದ್ದಳು. ಬಸ್‌ನಲ್ಲಿ ನಾಲ್ಕೈದು ಪ್ರಯಾಣಿಕರಷ್ಟೇ ಇದ್ದರು. ಮುಂದಿನ ನಿಲ್ದಾಣದಲ್ಲಿ ಅವರೂ ಇಳಿದರು. ಆಗ ನಿರ್ವಾಹಕ ಬಾಲಕಿ ಬಳಿ ಬಂದು ಅಶ್ಲೀಲವಾಗಿ ವರ್ತಿಸಿದ್ದ. ಹೆತ್ತವರು, ಪೊಲೀಸರಿಗೆ ತಿಳಿಸುವುದಾಗಿ ಬಾಲಕಿ ಹೇಳಿದರೂ ಆರೋಪಿ ನೀಡಿದ್ದ. ಅಸಭ್ಯ ವರ್ತನೆ ಮುಂದುವರಿಸಿದ್ದ. ಇದರಿಂದ ತೀವ್ರವಾಗಿ ನೊಂದಿದ್ದ ಬಾಲಕಿ ಬಸ್‌ನ ಸಂಖ್ಯೆಯ ಸಮೇತ ಮನೆ ಯಲ್ಲಿ ತಾಯಿ ಬಳಿ ಎಲ್ಲವನ್ನೂ ವಿವರಿಸಿದ್ದಳು. ಬಳಿಕ ತಾಯಿ ಮತ್ತು ಬಾಲಕಿ ಬಂಟ್ವಾಳ ನಗರ ಠಾಣೆಗೆ ತೆರಳಿ ದೂರು ನೀಡಿದ್ದರು. ಪೊಲೀಸರು ಕೂಡಲೇ ಕಾರ್ಯಾಚರಣೆ ನಡೆಸಿ ಮಂಗಳೂರಿಗೆ ವಾಪಸು ಹೊರಟಿದ್ದ ಬಸ್‌ನಲ್ಲಿನ ನಿರ್ವಾಹಕನನ್ನು ವಶಕ್ಕೆ ಪಡೆದಿದ್ದರು. ಇನ್‌ಸ್ಪೆಕ್ಟರ್ ನಂದಿನಿ ಎಸ್. ಶೆಟ್ಟಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ (ಎಫ್ಟಿಎಸ್‌ಸಿ-1 ಪೋಕ್ಸೋ )ದ ನ್ಯಾಯಾಧೀಶರಾದ ಮಂಜುಳಾ ಇಟ್ಟಿ ಅವರು ಶುಕ್ರವಾರ ಆರೋಪಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
Related Articles
Advertisement