Advertisement
ಜಂಕ್ಷನ್‌ನಲ್ಲಿ ವೃತ್ತದೊಂದಿಗೆ ಡಾ| ಬಿ. ಆರ್. ಅಂಬೇಡ್ಕರ್ ಅವರ ಪ್ರತಿಮೆ ನಿರ್ಮಾಣ ಮಾಡಬೇಕೆನ್ನುವುದು ದಶಕದ ಕೂಗು. ವಿವಿಧ ಸಂಘಟನೆಗಳು ಪಾಲಿಕೆಗೆ ಮನವಿ ಸಲ್ಲಿಸಿದ ಬಳಿಕ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವಾದ ಸೆ. 15ರಂದು ವೃತ್ತ ಹಾಗೂ ಪ್ರತಿಮೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನಡೆಸಲಾಗಿತ್ತು.
ಅಂಬೇಡ್ಕರ್ ವೃತ್ತದಲ್ಲಿ ವಾಹನ ಸಂಚಾರ ಅತ್ಯಧಿಕ. ಸ್ಟೇಟ್‌ಬ್ಯಾಂಕ್‌ನಿಂದ ಆಗಮಿಸುವ ವಾಹನಗಳು, ಬಂಟ್ಸ್ ಹಾಸ್ಟೆಲ್, ಬಲ್ಮಠ ಕಡೆಯಿಂದ ಬರುವ ವಾಹನಗಳು ಸೇರಿದಂತೆ ಅತ್ಯಧಿಕ ವಾಹನ ದಟ್ಟನೆ ಇದೆ. ದಿನದ ಹೆಚ್ಚಿನ ಸಮಯ ಇಲ್ಲಿ ಟ್ರಾಫಿಕ್ ಜಾಂ ಇರುತ್ತದೆ. ಬಲ್ಮಠದತ್ತ ತೆರಳುವ ಬಸ್‌ಗಳಿಗೆ ಇಲ್ಲೇ ಪಕ್ಕದಲ್ಲಿ ಬಸ್ ನಿಲ್ದಾಣವಿದ್ದು, ಇದು ಕೂಡ ವಾಹನ ದಟ್ಟನೆಗೆ ಕಾರಣ. 1994ರಲ್ಲಿ ನಾಮಕರಣ
1994ರಲ್ಲಿ ಅಂದಿನ ಜಿಲ್ಲಾ ಧಿಕಾರಿ ಭರತ್ ಲಾಲ್ ಮೀನಾ ಅವರ ಮೂಲಕ ಕೆಎಂಸಿ ಆಸ್ಪತ್ರೆಯ ಬಳಿ ಜ್ಯೋತಿ ಜಂಕ್ಷನ್‌ಗೆ ಡಾ| ಬಿ.ಆರ್. ಅಂಬೇಡ್ಕರ್ ವೃತ್ತವೆಂದು ನಾಮಕರಣ ಮಾಡಿದ್ದರು. ದಲಿತ ಸಂಘಟನೆಗಳು ಈ ಸಂದರ್ಭದಲ್ಲಿ ನಡೆಸಿದ ಹಕ್ಕೊತ್ತಾಯದ ಪ್ರತಿಧ್ವನಿಗೆ ಸೂಕ್ತ ಮನ್ನಣೆ ದೊರಕಿ ನಗರ ಪಾಲಿಕೆಗೆ ವೃತ್ತ ನಿರ್ಮಾಣದ ಕಾರ್ಯ ನಡೆಸಲು ನಿರ್ದೇಶನ ನೀಡಲಾಗಿತ್ತು. ಆದರೆ ತಾಂತ್ರಿಕ ಕಾರಣ ನೀಡಿ ವೃತ್ತ ನಿರ್ಮಾಣ ವಿಳಂಬವಾಗಿತ್ತು.
Related Articles
ಬಾವುಟಗುಡ್ಡೆಯಿಂದ ಮಿಲಾಗ್ರಿಸ್‌ನತ್ತ ತೆರಳುವವರಿಗೆ ಫ್ರೀಲೆಫ್ಟ್ ಇದೆ. ಈ ಭಾಗದಲ್ಲಿ ಐಲ್ಯಾಂಡ್ ನಿರ್ಮಿಸಲಾಗಿದೆ. ಪ್ರಸ್ತುತ ಸಂಚಾರ ಸಮಸ್ಯೆ ಹಾಗೂ ಜಾಗದ ಕೊರತೆ ಇರುವ ಕಾರಣದಿಂದಾಗಿ ಐಲ್ಯಾಂಡ್‌ನಲ್ಲಿ ಸರ್ಕಲ್ ನಿರ್ಮಿಸುವ ಪ್ರಸ್ತಾವನೆಯೂ ಕೂಡ ಪಾಲಿಕೆಯ ಮುಂದಿದೆ. ಸಾಧಕ ಬಾಧಕಗಳನ್ನು ಅರಿತುಕೊಂಡು ನಿರ್ಧಾರ ಕೈಗೊಳ್ಳುತ್ತೇವೆ ಎನ್ನುತ್ತಾರೆ ಅಧಿಕಾರಿಗಳು.
Advertisement
ವಾಹನ ಸಂಚಾರಕ್ಕೆ ಸಮಸ್ಯೆಯಾಗದಂತೆ ವೃತ್ತ ನಿರ್ಮಿಸಲು ಉದ್ದೇಶಿಸಲಾಗಿದೆ. ಪ್ರಸ್ತಾವಿತ ವೃತ್ತ ನಿರ್ಮಾಣಕ್ಕೆ ರಸ್ತೆಯ ಎರಡೂ ಭಾಗದಲ್ಲಿ 3 ಮೀ.ನಷ್ಟು ವಿಸ್ತ ರ ಣೆವಾದಲ್ಲಿ ಉದ್ದೇಶಿತ ವೃತ್ತ ನಿರ್ಮಾಣ ಮಾಡಬಹುದು. ಸದ್ಯ ಪ್ರಾಯೋಗಿಕ ನೆಲೆಯಲ್ಲಿ ವೃತ್ತ ನಿರ್ಮಿಸಿ ಸಂಚಾರ ಸಮಸ್ಯೆಯ ಬಗ್ಗೆ ಅರಿತುಕೊಳ್ಳಲಾಗುವುದು.– ಮನೋಜ್ ಕುಮಾರ್, ಮೇಯರ್ ಜಂಕ್ಷನ್‌ನಲ್ಲಿ ಅಂಬೇಡ್ಕರ್ ಪ್ರತಿಮೆಯೊಂದಿಗೆ ವೃತ್ತ ನಿರ್ಮಾಣಕ್ಕೆ ಪಾಲಿಕೆ ಮುಂದಾಗಿದ್ದು, ಅಲ್ಲಿ ಕಂಚಿನ ಪ್ರತಿಮೆಯನ್ನು ಪೂರ್ವ ದಿಕ್ಕಿಗೆ ಅಭಿಮುಖವಾಗಿ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಒತ್ತಾ ಯಿಸಲಾಗಿದೆ. ಸಾರ್ವಜನಿಕರಿಗೆ, ವಾಹನ ಸಂಚಾರಕ್ಕೆ ತೊಂದರೆ ಆಗದಂತೆ ಸೂಕ್ತ ಸುರಕ್ಷಾ ಕ್ರಮಗಳೊಂದಿಗೆ ಪ್ರತಿಮೆ ನಿರ್ಮಾಣಕ್ಕೆ ಹೋರಾಟ ಸಮಿತಿಯ ಪ್ರಮುಖರು ಒತ್ತಾಯಿಸಿದ್ದಾರೆ. ಡಾ| ಬಿ.ಆರ್. ಅಂಬೇಡ್ಕರ್ ವೃತ್ತವನ್ನು 15 ಮೀಟರ್ ಅಂದರೆ ಸರಿಸುಮಾರು 50 ಚದರ ಅಡಿಯಷ್ಟು ನಿರ್ಮಿಸಬೇಕು ಎನ್ನುವುದು ದಲಿತ ಹಿತರಕ್ಷಣಾ ವೇದಿಕೆಯ ಒತ್ತಾಯ ಹಾಗೂ ಇದೇ ವೃತ್ತದಲ್ಲಿ ಅಂಬೇಡ್ಕರ್ ಅವರ ಪ್ರತಿಮೆಯನ್ನು ನಿರ್ಮಿಸುವುದು ಒಳಗೊಂಡಿದೆ. ಇದಕ್ಕೆ ಸಂಬಂಧಿಸಿದ ವಿವರವನ್ನು ಸಮಿತಿ ಪಾಲಿಕೆಗೆ ಸಲ್ಲಿಸಿದ್ದು , ಸುಮಾರು 75 ಲಕ್ಷ ರೂ. ಅನುದಾನ ಅಂದಾಜಿಸಲಾಗಿದೆ. -ಸಂತೋಷ್ ಮೊಂತೇರೊ