Advertisement
ಪಾಂಡೇಶ್ವರ, ಹೊಗೆಬಜಾರ್, ಮಹಾಕಾಳಿಪಡ್ಪು, ಜೋಕಟ್ಟೆ, ಸೋಮೇಶ್ವರ, ಉಚ್ಚಿಲ, ವಳಚ್ಚಿಲ್, ಅರ್ಕಳ ಸಹಿತ ವಿವಿಧ ಕಡೆಗಳಲ್ಲಿರುವ ರೈಲ್ವೇ ಗೇಟ್‌ಗಳು ಒಂದೊಂದು ರೀತಿಯ ಸಮಸ್ಯೆ ಎದುರಿಸುತ್ತಿವೆ.
ಮುಖ್ಯ ರಸ್ತೆಯ ಮಧ್ಯೆ ರೈಲು ಹಳಿ ಇದ್ದು ಗೇಟ್ ಹಾಕುವ ಜಾಗ ಇರುವಲ್ಲಿ ರೈಲ್ವೇ ಮತ್ತು ಸ್ಥಳೀಯಾಡಳಿತದ ಸಂವಹನ ಕೊರತೆಯಿಂದ ಸಮಸ್ಯೆಗಳಿಗೆ ಪರಿಹಾರವೇ ಸಿಗುತ್ತಿಲ್ಲ.
Related Articles
Advertisement
ದಂಡ ವಸೂಲಿಯಾದರೂ, ಹೊಸ ಗೇಟ್ ಇಲ್ಲ!ರೈಲ್ವೇ ಗೇಟ್‌ಗೆ ವಾಹನದವರು ಹಾನಿ ಮಾಡಿದರೆ ಅಂತಹವರ ಮೇಲೆ ರೈಲ್ವೇ ಇಲಾಖೆ ದಂಡ ಪ್ರಯೋಗ ಮಾಡುತ್ತದೆ. ನಗರದ ವಿವಿಧ ಕಡೆಯಲ್ಲಿ ಇಂತಹ ಘಟನೆ ನಡೆದಿದೆ. ಹೆಚ್ಚಾ ಕಡಿಮೆ ಲಕ್ಷಾಂತರ ರೂ. ಇದೇ ರೀತಿ ರೈಲ್ವೇ ಇಲಾಖೆ ದಂಡ ಸಂಗ್ರಹಿಸುತ್ತದೆ. ಆ ಹಣವನ್ನೇ ಉಪಯೋಗಿಸಿ ಹೊಸ ಗೇಟ್ ಅಳವಡಿಸಬಹುದು. ಆದರೆ ಹೊಸತು ತರುವ ಬದಲು ಹಳೆಯದನ್ನೇ ಜೋಪಾನ ಮಾಡಲಾಗುತ್ತಿದೆ!
ವಳಚ್ಚಿಲ್ ಹಾಗೂ ಅರ್ಕುಳದಲ್ಲಿರುವ ರೈಲ್ವೇ ಗೇಟ್‌ಗಳು ಕಾಣಲು ಚಂದವಾಗಿ ಕಂಡರೂ ತುಂಬ ಹಳೆಯದಾಗಿದ್ದು, ತುಕ್ಕು ಹಿಡಿದಿದೆ. ಇದಕ್ಕೆ ಬಣ್ಣ ಬಳಿದು ಹೊಸ ರೂಪ ನೀಡಲಾಗಿದೆ. ಕೆಲವು ಸಲ ಗೇಟ್ ಹಾಕುವಾಗ ಅಥವಾ ತೆಗೆಯುವಾಗ ಅರ್ಧದಲ್ಲೇ ಗೇಟ್ ಬಾಕಿಯಾದ ಉದಾಹರಣೆಯೂ ಇಲ್ಲಿದೆ. ಕೊಂಚ ಹೊತ್ತು ಮಾನವ ಶ್ರಮವಹಿಸಿ ಈ ಗೇಟ್‌ಗಳನ್ನು ನಿರ್ವಹಣೆ ಮಾಡಬೇಕಿದೆ. ರೈಲ್ವೇ ಇಲಾಖೆಯ ಗಮನಕ್ಕೆ ತರಲಾಗುವುದು
ಮಂಗಳೂರು ನಗರ ವ್ಯಾಪ್ತಿಯಲ್ಲಿರುವ ರೈಲ್ವೇ ಗೇಟ್‌ಗಳ ಸಮಸ್ಯೆ ಬಗ್ಗೆ ದೂರು ಬಂದಿದೆ. ಮುಂಬರುವ ರೈಲ್ವೇ ಇಲಾಖೆಯ ಸಂಬಂಧಿತ ಸಭೆಯಲ್ಲಿ ಅಧಿಕಾರಿಗಳ ಜತೆಗೆ ಇದನ್ನು ಪ್ರಸ್ತಾವಿಸಿ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಸಲಾಗುವುದು. ರೈಲ್ವೇ ಇಲಾಖೆಯ ಗಮನಕ್ಕೆ ಇದನ್ನು ಪಾಲಿಕೆ ಅಧಿಕಾರಿಗಳ ಮೂಲಕ ತರಲಾಗುವುದು.
-ಸುಧೀರ್ ಶೆಟ್ಟಿ ಕಣ್ಣೂರು, ಮೇಯರ್, ಪಾಲಿಕೆ ಹಳೆ ಗೇಟ್ ಹಾಗೆಯೇ ಇದೆ!
ಜಪ್ಪು ಮಹಾಕಾಳಿಪಡ್ಪು ಸಹಿತ ಹಲವು ಕಡೆಯಲ್ಲಿ ರೈಲ್ವೇ ಗೇಟ್ ಹಳೆಯ ಕಾಲದ್ದನ್ನೇ ದುರಸ್ತಿ ಮಾಡಿ ಮತ್ತೆ ಮತ್ತೆ ಬಳಕೆ ಮಾಡಲಾಗುತ್ತಿದೆ. ಇಲ್ಲಿ ರೈಲ್ವೆಯಿಂದ ಬೇರೆ ಬೇರೆ ಕೆಲಸ ಆಗಿದ್ದರೂ ಗೇಟ್ ಮಾತ್ರ ಪೂರ್ಣವಾಗಿ ಬದಲಾಗಿಲ್ಲ. ಕೊಂಚ ಬದಲಾದರೂ ಆಧುನಿಕ ಸ್ವರೂಪದಲ್ಲಿ ಅವು ಇಲ್ಲ. ಗೇಟ್‌ನಲ್ಲಿರುವ ಕಬ್ಬಿಣದ ಸರಳು ಆಗಲೋ-ಈಗಲೋ ಬೀಳುವ ಸ್ಥಿತಿಯಲ್ಲಿದೆ. -ದಿನೇಶ್ ಇರಾ