Advertisement

Mangaluru: ಫೈಂಜಾಲ್‌ ಅಬ್ಬರಕ್ಕೆ ಮುಂದುವರಿದ ಮಳೆ; ಕುಸಿದ ಏರ್ಪೋರ್ಟ್‌ ಬಳಿಯ ರಸ್ತೆ

10:21 AM Dec 03, 2024 | Team Udayavani |

ಮಂಗಳೂರು: ಫೈಂಜಾಲ್ ಚಂಡಮಾರುತ (Fengal cyclone) ಪರಿಣಾಮ ಸುರಿಯುತ್ತಿರುವ ಮಳೆ ಮುಂದುವರಿದಿದೆ. ಮಂಗಳೂರು ನಗರದಲ್ಲಿ ಮಂಗಳವಾರ (ಡಿ.03) ಮುಂಜಾನೆಯಿಂದಲೇ ಮೋಡ ಕವಿದ ಆಕಾಶದೊಂದಿದೆ ನಿರಂತರವಾಗಿ ಸಾಮಾನ್ಯ ಮಳೆಯಾಗುತ್ತಿದೆ.

Advertisement

ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ ಮತ್ತು ಪ.ಪೂ ಕಾಲೇಜುಗಳಿಗೆ ರಜೆ ಜಿಲ್ಲಾಡಳಿತ ರಜೆ ಘೋಷಿಸಿರುವ ಹಿನ್ನೆಲೆಯಲ್ಲಿ ಬೆಳಗ್ಗಿನ ವೇಳೆ ನಗರದಲ್ಲಿ ಎಂದಿನ ದಟ್ಟನೆ ಇರಲಿಲ್ಲ.

ನಗರದ ‌ಕೊಡಿಯಾಲಗುತ್ತು‌ ಪ್ರದೇಶದಲ್ಲಿ ಒಳ ರಸ್ತೆಗಳು ಜಲಾವೃತಗೊಂಡು ಕೆಲ ಹೊತ್ತು ಸಂಚಾರಕ್ಕೆ ಅಡ್ಡಿಯಾಯಿತು. ಪಾಲಿಕೆ ಪೌರ ಕಾರ್ಮಿಕರು ಚರಂಡಿಗಳನ್ನು ಸ್ವಚ್ಛಗೊಳಿಸಿ ನೀರು ಹರಿದು ಹೋಗುವಂತೆ ಮಾಡಿದರು. ಕೊಡಿಯಾಲಬೈಲ್ ನ ಮಾಲ್ ಒಂದರ ಪಾರ್ಕಿಂಗ್ ಪ್ರದೇಶದಲ್ಲಿ ಸುಮಾರು 2 ಅಡಿಗಳಷ್ಟು ‌ನೀರು ಸಂಗ್ರಹಗೊಂಡಿದ್ದು ಅಗ್ನಿಶಾಮಕ ದಳದ ಸಿಬಂದಿ‌ ಎರಡು ಪಂಪ್ ಬಳಸಿ ನೀರು ಖಾಲಿ ಮಾಡುವ ಕೆಲಸ ಮಾಡುತ್ತಿದ್ದಾರೆ.

ಜಲಸಿರಿ ಸೇರಿದಂತೆ ವಿವಿಧ ಕಾಮಗಾರಿಗಳ ಹಿನ್ನೆಲೆಯಲ್ಲಿ ಕಾಂಕ್ರೀಟ್ ರಸ್ತೆಯನ್ನು ತುಂಡರಿಸಿ, ಕಾಮಗಾರಿ ನಡೆಸಿ ಗುಂಡಿಗೆ ತುಂಬಿಸಿದ್ದ ಮಣ್ಣು ರಸ್ತೆಗೆ ಬಂದಿದ್ದು, ದ್ವಿಚಕ್ರ ವಾಹನ ಸವಾರರಿಗೆ ಅಪಾಯ ತಂದೊಡ್ಡಿತು. ಸೋಮವಾರ ಸಂಜೆ ವೇಳೆ ಸುರಿದ ಧಾರಾಕಾರ ಮಳೆಗೆ ಹೊಟೇಲು, ಅಂಗಡಿಗಳಿಗೆ ನುಗ್ಗಿದ ನೀರನ್ನು ತೆರವುಗೊಳಿಸುವ ಕಾರ್ಯವೂ ಕೆಲವೆಡೆ ನಡೆಯಿತು. ಸದ್ಯ ಕರಾವಳಿಗೆ ಆರೆಂಜ್ ಅಲರ್ಟ್ ಮುಂದುವರಿದಿದ್ದು, ಮಳೆ ಮುಂದುವರಿಯುವ ನಿರೀಕ್ಷೆಯಿದೆ.

ಜರಿದ ಅವರಣ ಗೋಡೆ

Advertisement

ಫಳ್ನೀರ್ ನ ಮಥಾಯಿಸ್ ಕಂಪೌಂಡ್ ಪ್ರದೇಶದಲ್ಲಿ ಒಂಟಿ ಮಹಿಳೆಯೊಬ್ಬರು ವಾಸವಿದ್ದ ಮನೆಯೊಂದರ ಆವರಣ ಗೋಡೆ ಜರಿದು ಬಿದ್ದಿದೆ. ಸ್ಥಳಕ್ಕೆ ಮನಪಾ ಸಿಬಂದಿ, ಅಗ್ನಿಶಾಮಕ ದಳದ ಸಿಬಂದಿ, ಭೇಟಿ ನೀಡಿದ್ದು, ಮಹಿಳೆ ಮನೆಯಿಂದ ಸ್ಥಳಾಂತರಗೊಳ್ಳಲು ನಿರಾಕರಿಸಿದ್ದಾರೆ. ಮಹಿಳೆಗೆ ಯಾವುದೇ ಅಪಾಯವಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next