ಮಂಗಳೂರು: ನಗರದ ಸ್ಟೇಟ್ ಬ್ಯಾಂಕ್ ಬಸ್ ನಿಲ್ದಾಣದ ಬಳಿ ರಸ್ತೆ ಒತ್ತುವರಿ ಮಾಡಿಕೊಂಡಿದ್ದ ಹಲವು ಗೂಡಂಗಡಿಗಳನ್ನು ಮಂಗಳೂರು ಮಹಾನಗರ ಪಾಲಿಕೆ ಗುರುವಾರ ತೆರವುಗೊಳಿಸಿದೆ.
ಸ್ಮಾರ್ಟ್ ಸಿಟಿ ಯೋಜನೆಯ ಭಾಗವಾಗಿ, ಎಂಸಿಸಿಯಿಂದ ಹಲವಾರು ಸಣ್ಣಪುಟ್ಟ ಗೂಡಂಗಡಿಗಳು ಮತ್ತು ಕಟ್ಟಡಗಳನ್ನು ಕೆಡವಲಾಗುತ್ತಿದೆ.
ಸ್ಮಾರ್ಟ್ ಸಿಟಿ ಯೋಜನೆಗೆ ಸಂಬಂಧಿಸಿದ ವಿವಿಧ ಕಾಮಗಾರಿಗಳು ಭರದಿಂದ ಸಾಗುತ್ತಿದ್ದು, 2024-25ರ ವೇಳೆಗೆ ನಗರದ ಸ್ವರೂಪ ಸಂಪೂರ್ಣ ಬದಲಾಗಲಿದೆ.
ಯೋಜನೆಯಡಿ, ಕೇಂದ್ರ ಸರಕಾರ ಕೆಲವು ನಗರಗಳನ್ನು ಗುರುತಿಸಿ ನಗರದ ಮುಂದಿನ ಅಭಿವೃದ್ಧಿಗೆ ಹಣವನ್ನು ಬಿಡುಗಡೆ ಮಾಡಿದೆ. ಮೂಲಸೌಕರ್ಯ, ಸ್ವಚ್ಛ ಮತ್ತು ಸುಸ್ಥಿರ ಪರಿಸರವನ್ನು ಒದಗಿಸುವ ನಗರಗಳನ್ನು ಉತ್ತೇಜಿಸುವುದು ಮತ್ತು ‘ಸ್ಮಾರ್ಟ್ ಪರಿಹಾರಗಳ’ ಅನ್ವಯದ ಮೂಲಕ ಅವರ ನಾಗರಿಕರಿಗೆ ಯೋಗ್ಯ ಗುಣಮಟ್ಟದ ಜೀವನವನ್ನು ನೀಡುವುದು ಯೋಜನೆಯ ಗುರಿಯಾಗಿದೆ. ರಾಜ್ಯದ ಇತರೆ ನಗರಗಳಿಗೆ ಹೋಲಿಸಿದಲ್ಲಿ ಮಂಗಳೂರಿಗೆ ಹೆಚ್ಚಿನ ಅನುದಾನ ಬಂದಿದೆ ಎಂದು ಹೇಳಲಾಗುತ್ತಿದೆ.