Advertisement
ನಿರಂತರ ಮಳೆಯ ಸವಾಲಿನ ನಡುವೆಯೂ ದುರಸ್ತಿ ಕಾರ್ಯ ನಡೆಸಲಾಗುತ್ತಿದೆ. ಅಗತ್ಯ ಸಲಕರಣೆಗಳೊಂದಿಗೆ ಒಟ್ಟು 430 ಸಿಬಂದಿ, ಕಾರ್ಮಿಕರನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ. ಹಗಲು ಪಾಳಿಯಲ್ಲಿ 200, ರಾತ್ರಿ ಪಾಳಿಯಲ್ಲಿ 120 ಹಾಗೂ ಇತರ 110 ಸಿಬಂದಿ ಯನ್ನು ನಿಯೋಜಿಸಲಾಗಿದೆ. ಸುರಕ್ಷೆಗೆ ಆದ್ಯತೆ ನೀಡಿ ಕಾಮಗಾರಿ ನಿರ್ವಹಿಸ ಲಾಗುತ್ತಿದೆ. ಶುಕ್ರವಾರ ಸಂಜೆ ವೇಳೆ ಭಾರೀ ಪ್ರಮಾಣದಲ್ಲಿ ಭೂ ಕುಸಿತ ಉಂಟಾಗಿ ರೈಲು ಹಳಿಗೆ ಅಪಾಯ ಉಂಟಾಗಿದೆ.
ಆರು ಹಿಟಾಚಿ ಯಂತ್ರಗಳು, ಐದು ಪೋಕ್ಲೈನ್ ಯಂತ್ರಗಳೂ ಸ್ಥಳದಲ್ಲಿವೆ. ಒಟ್ಟು ಅಗತ್ಯವಿರುವ 3870 ಕ್ಯುಬಿಕ್ ಮೀಟರ್‌ನಷ್ಟು ಬಂಡೆ ಕಲ್ಲುಗಳ ಪೈಕಿ 670 ಕ್ಯು.ಮೀ. ಈಗಾಗಲೇ ಸ್ಥಳಕ್ಕೆ ತಲುಪಿದೆ. 20 ವ್ಯಾಗನ್ ದೊಡ್ಡ ಬಂಡೆಗಳು ಸುಬ್ರಹ್ಮಣ್ಯ ರೋಡ್‌ಗೆ ಬಂದು ತಲುಪಿದೆ. 50 ಕ್ಯು.ಮೀ. ಬಂಡೆ ಕಲ್ಲುಗಳು ಅಮರಾವತಿ ಕಾಲನಿಯಿಂದ ಹೊರಟಿದೆ. ಒಟ್ಟು 1 ಲಕ್ಷ ಮರಳಿನ ಚೀಲ ಅಗತ್ಯವಿದ್ದು, ಈಗಾಗಲೇ 15 ಸಾವಿರ ಚೀಲಗಳನ್ನು ವ್ಯವಸ್ಥೆ ಮಾಡಲಾಗಿದ್ದು, 35 ಸಾವಿರ ಮರಳು ಚೀಲಗಳು ಆಗಮಿಸುತ್ತಿವೆ. ಆಹಾರ, ನೀರು, ಬೆಳಕಿನ ವ್ಯವಸ್ಥೆ
ಆಹಾರ ತಯಾರಿ, ಪೂರೈಕೆ ಹಾಗೂ ವೈದ್ಯಕೀಯ ತಂಡಗಳೂ ಸ್ಥಳದಲ್ಲಿವೆ. ಸುಬ್ರಹ್ಮಣ್ಯ ನಿಲ್ದಾಣದಿಂದ ಆಹಾರ, ನೀರು ಸರಬರಾಜು ಮಾಡಲಾಗುತ್ತಿದೆ. ದುರಸ್ತಿಗೆ ಬೇಕಾಗಿರುವ 8 ಜನರೇಟರ್‌ಗಳು, ಸಮರ್ಪಕ ಬೆಳಕಿನ ವ್ಯವಸ್ಥೆಯೊಂದಿಗೆ ಸಂಪರ್ಕ ನೆಟ್‌ವರ್ಕ್, ಇಂಟರ್‌ನೆಟ್ ವ್ಯವಸ್ಥೆಯನ್ನೂ ಮಾಡಲಾಗಿದೆ. ಸಂವಹನ ವ್ಯವಸ್ಥೆಗಳಾದ ಆಟೋ ಫೋನ್‌ಗಳು, ಕಂಟ್ರೋಲ್ ಫೋನ್, ಸ್ಯಾಟಲೈಟ್ ಫೋನ್, ವಿಎಸ್‌ಟಿಎ ಸಂವಹನ (ಲೈವ್ ಸ್ಟ್ರೀಮಿಂಗ್‌ಗಾಗಿ) ವ್ಯವಸ್ಥೆಗಳನ್ನು ಬಳಸಲಾಗುತ್ತಿದ್ದು, ಹುಬ್ಬಳ್ಳಿಯ ಕೇಂದ್ರ ಕಚೇರಿಯ ವಾರ್ ರೂಮ್‌ನಿಂದ ಸಂವಹನ ನಡೆಸಲಾಗುತ್ತಿದೆ.
Related Articles
ಮೈಸೂರಿನ ವಿಭಾಗೀಯ ರೈಲ್ವೇ ಪ್ರಬಂಧಕಿ ಶಿಲ್ಪಿ ಅಗರ್‌ವಾಲ್ ಮತ್ತು ಇತರ ಹಿರಿಯ ಅಧಿಕಾರಿ ಗಳು ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ. ನೈಋತ್ಯ ರೈಲ್ವೇಯ ಮಹಾ ಪ್ರಬಂಧಕ ಅರವಿಂದ ಶ್ರೀವಾಸ್ತವ, ಉಪಮಹಾ ಪ್ರಬಂಧಕ ಕೆ.ಎಸ್.ಜೈನ್ ಮತ್ತು ಇತರ ಹಿರಿಯ ಅಧಿಕಾರಿಗಳು ಕಾಮಗಾರಿ ಮಾಹಿತಿ ಪಡೆಯುತ್ತಿದ್ದಾರೆ. ದುರಸ್ತಿ ಪೂರ್ಣ ಗೊಳ್ಳಲು ಇನ್ನೂ 4-5 ದಿನ ಬೇಕಾ ದೀತು ಎನ್ನುತ್ತಾರೆ ಅಧಿಕಾರಿಗಳು.
Advertisement
ದುರಸ್ತಿ ಕಾರ್ಯ ಹೇಗೆ?ಭೂಕುಸಿತವಾದ ಜಾಗದಲ್ಲಿ ಮಣ್ಣನ್ನು ಹಿಡಿದಿಡುವಂತೆ ತಡೆ ಯುವ ಕೆಲಸ ನಡೆಯುತ್ತಿದ್ದು, ಕಲ್ಲು ಬಂಡೆ, ಮರಳಿನ ಚೀಲ ಜೋಡಿ ಸಲಾಗುತ್ತದೆ. ಅದಕ್ಕೆ ಕಬ್ಬಿಣದ ನೆಟ್ (ಗೇಬಿಯನ್‌ಮೆಷ್) ಮೂಲಕ ತಡೆಗೋಡೆ ನಿರ್ಮಿಸ ಲಾಗುತ್ತಿದೆ. ಇದೇ ಮಾದ ರಿಯ ದುರಸ್ತಿ ಕಾರ್ಯದಲ್ಲಿ ಪಾಲ್ಗೊಂಡ ತಜ್ಞರ ಅಭಿಪ್ರಾಯವನ್ನು ಪಡೆಯಲಾಗುತ್ತಿದೆ. ರೈಲು ಸೇವೆ: ವ್ಯತ್ಯಯ
ಮಂಗಳೂರು: ನಂ.16511 ಕೆಎಸ್‌ಆರ್ ಬೆಂಗಳೂರು- ಕಣ್ಣೂರು ಎಕ್ಸ್‌ಪ್ರೆಸ್ ರೈಲನ್ನು ಜು.29ರಿಂದ ಆ.3ರ ವರೆಗೆ ಸಂರ್ಪೂವಾಗಿ ರದ್ದು ಮಾಡಲಾಗಿದೆ. ನಂ.16512 ಕಣ್ಣೂರು- ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ ರೈಲನ್ನು ಜು.30ರಿಂದ ಆ.4ರ ವರೆಗೆ ರದ್ದುಪಡಿಸಲಾಗಿದೆ. ನಂ.07378 ಮಂಗಳೂರು ಸೆಂಟ್ರಲ್- ವಿಜಯಪುರ ವಿಶೇಷ ಎಕ್ಸ್‌ಪ್ರೆಸ್ ರೈಲನ್ನು ಜು.30ರಿಂದ ಆ.4 ವರೆಗೆ ಸಂಪೂರ್ಣ ರದ್ದುಪಡಿಸಲಾಗಿದೆ. ನಂ.07377 ವಿಜಯಪುರ- ಮಂಗಳೂರು ಸೆಂಟ್ರಲ್ ರೈಲನ್ನು ಜು. 29ರಿಂದ ಆ. 3ರ ವರೆಗೆ ಸಂಪೂರ್ಣ ರದ್ದುಪಡಿಸಲಾಗಿದೆ. ನಂ.16585 ಎಸ್‌ಎಂವಿಟಿ ಬೆಂಗಳೂರು – ಮುರುಡೇಶ್ವರ ಎಕ್ಸ್‌ಪ್ರೆಸ್ ರೈಲು ಜು. 29ರಿಂದ ಆ. 3ರ ವರೆಗೆ ಸಂಪೂರ್ಣ ರದ್ದಾಗಿದೆ. ನಂ.16586 ಮುರುಡೇಶ್ವರ – ಎಸ್‌ಎಂವಿಟಿ ಬೆಂಗಳೂರು ಎಕ್ಸ್‌ಪ್ರೆಸ್ ರೈಲು ಜು.30ರಿಂದ ಆ. 4ರ ವರೆಗೆ ಸಂಪೂರ್ಣ ರದ್ದಾಗಿದೆ.
ನಂ.16595 ಕೆಎಸ್‌ಆರ್ ಬೆಂಗಳೂರು – ಕಾರವಾರ ವಿಶೇಷ ಎಕ್ಸ್‌ಪ್ರೆಸ್ ರೈಲು ಜು. 29 ರಿಂದ ಆ. 3ರ ವರೆಗೆ ಮತ್ತು ನಂ.16596 ಕಾರವಾರ -ಕೆಎಸ್‌ಆರ್ ಬೆಂಗಳೂರು ವಿಶೇಷ ಎಕ್ಸ್‌ಪ್ರೆಸ್ ರೈಲು ಜು.30ರಿಂದ ಆ.4ರ ವರೆಗೆ ಸಂಪೂರ್ಣ ರದ್ದಾಗಿದೆ. ನಂ.16576 ಮಂಗಳೂರು ಜಂಕ್ಷನ್ – ಯಶವಂತಪುರ ಜಂಕ್ಷನ್ ಎಕ್ಸ್ ಪ್ರಸ್ ರೈಲನ್ನು ಜು. 30 ಮತ್ತು ಆ. 1ರಂದು ನಂ.16575 ಯಶವಂತಪುರ ಜಂಕ್ಷನ್-ಮಂಗಳೂರು ಜಂಕ್ಷನ್ ಆ. 31 ಮತ್ತು ಜು. 2ರಂದು ರದ್ದುಪಡಿಸಲಾಗಿದೆ. ನಂ.16539 ಯಶವಂತಪುರ ಜಂಕ್ಷನ್ – ಮಂಗಳೂರು ಜಂಕ್ಷನ್ ಎಕ್ಸ್ ಪ್ರಸ್ ರೈಲನ್ನು ಆ.3ರಂದು ಮತ್ತು ನಂ.16540 ಮಂಗಳೂರು ಜಂಕ್ಷನ್ – ಯಶವಂತಪುರ ಜಂಕ್ಷನ್ ರೈಲನ್ನು ಆ.4ರಂದು ರದ್ದುಪಡಿಸಲಾಗಿದೆ.
ನಂ.16515 ಯಶವಂತಪುರ ಜಂಕ್ಷನ್- ಕಾರವಾರ ಎಕ್ಸ್‌ಪ್ರೆಸ್ ರೈಲನ್ನು ಜು. 29, 31 ಮತ್ತು ಆ.2ರಂದು ರದ್ದುಪಡಿಸಲಾಗಿದೆ. ನಂ.16516 ಕಾರವಾರ -ಯಶವಂತಪುರ ಜಂಕ್ಷನ್ ರೈಲನ್ನು ಜು. 30, ಆ. 1 ಮತ್ತು ಆ.3ರಂದು ಸಂಪೂರ್ಣ ರದ್ದುಪಡಿಸಲಾಗಿದೆ ಎಂದು ಪಾಲಕ್ಕಾಡ್ ವಿಭಾಗದ ಪ್ರಕಟನೆ ತಿಳಿಸಿದೆ.