Advertisement
ಸುಮಾರು 12 ಮನೆಗಳಿಗೆ ಈ ಹಾದಿ ಸಂಪರ್ಕ ಕಲ್ಪಿಸುತ್ತಿದೆ. ಪ್ರತಿದಿನ ಸಾಕಷ್ಟು ಮಂದಿ ಈ ಹಾದಿಯ ಮೂಲಕವೇ ಆಚೀಚೆ ಒಡಾಡುತ್ತಾರೆ. ಮನೆಯವರ ದ್ವಿಚಕ್ರ ವಾಹನಗಳ ಸಂಚಾರಕ್ಕೂ ಸಮಸ್ಯೆಯಾಗುತ್ತಿದೆ. ಹಿರಿಯ ನಾಗರಿಕರು, ಶಾಲಾ – ಕಾಲೇಜು ವಿದ್ಯಾರ್ಥಿಗಳಿಗೂ ನಡೆಯುವುದು ಕಷ್ಟಕರವಾಗಿದೆ.
ಪಕ್ಕದಲ್ಲಿ ನಡೆಯುತ್ತಿರುವ ನಿರ್ಮಾಣ ಕೆಲಸಗಳಿಗೆ ಸಂಬಂಧಿಸಿದ ಕಾರ್ಮಿಕರು ವಾಸವಾಗಿದ್ದು, ಅವರು ತ್ಯಾಜ್ಯ ನೀರನ್ನು ಕೂಡ ರಸ್ತೆಗೆ ಹರಿಯ ಬಿಡುತ್ತಿದ್ದು, ಚರಂಡಿಯಲ್ಲಿ ಇದು ಸಂಗ್ರಹಗೊಳ್ಳುತ್ತಿದೆ. ಇದರಿಂದ ವಿವಿಧ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಯೂ ಇದೆ. ಮಹಾನಗರ ಪಾಲಿಕೆಯ ಆರೋಗ್ಯ ವಿಭಾಗದ ಅಧಿಕಾರಿಗಳು ಈ ಬಗ್ಗೆ ತತ್‌ಕ್ಷಣ ಕ್ರಮ ವಹಿಸಬೇಕು. ಒಳ ಹಾದಿಯನ್ನು ಸರಿಪಡಿಸಲೂ ಮನಪಾ ಕ್ರಮ ವಹಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.