Advertisement
ಬಜಪೆ ನಿವಾಸಿ ಪಾರ್ಶ್ವನಾಥ್ ಅವರು ರವಿವಾರ ಅಪರಾಹ್ನ ಮಂಗಳೂರು ನಗರದಲ್ಲಿ 3.15ಕ್ಕೆ ಮದುವೆ ಮುಗಿಸಿ ಬಜಪೆಗೆ ವಾಪಸಾಗುವ ಮೊದಲು ಪೆಟ್ರೋಲ್ ಹಾಕಿಸಿಕೊಳ್ಳಲು ಲೇಡಿಹಿಲ್‌ನ ಪೆಟ್ರೋಲ್ ಬಂಕ್‌ಗೆ ಬಂದಿದ್ದರು. ಕಾರಿನಲ್ಲಿ ಅವರ ಇಬ್ಬರು ಸಂಬಂಧಿಕರು ಕೂಡ ಇದ್ದರು. ಅವರ ಕಾರಿನ ಎದುರು ಬೇರೆ ಎರಡು ಕಾರುಗಳಿಗೆ ಪೆಟ್ರೋಲ್ ಹಾಕುತ್ತಿದ್ದ ಕಾರಣ ತಮ್ಮ ಕಾರನ್ನು ಸರತಿ ಸಾಲಿನಲ್ಲಿ ನಿಲ್ಲಿಸಿದ್ದರು. ಆಗ ಏಕಾಏಕಿ ಕಾರಿನ ಮುಂಭಾಗದಲ್ಲಿ ಹೊಗೆ ಮತ್ತು ಬೆಂಕಿ ಕಾಣಿಸಿಕೊಂಡಿತು.
ಕೂಡಲೇ ಪೆಟ್ರೋಲ್ ಬಂಕ್ ಸಿಬಂದಿ ಅಗ್ನಿಶಾಮಕ ಯಂತ್ರ, ಮರಳು, ನೀರು ಬಳಸಿ ಅಗ್ನಿನಂದಿಸುವ ಕಾರ್ಯಾಚರಣೆ ನಡೆಸಿದರು. ಆ ವೇಳೆಗ ಕದ್ರಿ ಅಗ್ನಿಶಾಮಕ ದಳದವರು ಕೂಡ ಆಗಮಿಸಿ ಕಾರ್ಯಾಚರಣೆ ನಡೆಸಿದರು. ಇದರಿಂದಾಗಿ ಬೆಂಕಿ ವ್ಯಾಪಿಸಲಿಲ್ಲ. ಹೆಚ್ಚಿನ ಅನಾಹುತ ಸಂಭವಿಸಿಲ್ಲ. ಆದರೆ ಕಾರು ಸುಟ್ಟು ಹೋಗಿದೆ.