Advertisement
ಉಕ್ರೇನ್‌ನಲ್ಲಿ ಇರುವ ತಮ್ಮ ಮಕ್ಕಳ ಬಗ್ಗೆ ದ.ಕ. ಜಿಲ್ಲಾಡಳಿತಕ್ಕೆ ಹೆತ್ತವರು ಕರೆ ಮಾಡಿ ವಿಚಾರಿಸು ತ್ತಿದ್ದಾರೆ. ಜಿಲ್ಲಾಡಳಿತವೂ ಸಂತ್ರಸ್ತ ಮಕ್ಕಳ ಹೆತ್ತವರ ವಾಟ್ಸ್‌ಆ್ಯಪ್ ಗುಂಪು ರಚಿಸಿದ್ದು, ಅದರಲ್ಲಿ ಎಲ್ಲ ಮಾಹಿತಿಗಳನ್ನು ರವಾನಿ ಸುತ್ತಿದೆ. ಸ್ವತಃ ಜಿಲ್ಲಾಧಿಕಾರಿ ಕೂಡ ದಿನದಲ್ಲಿ ಹಲವು ಬಾರಿ ಮಕ್ಕಳ ಕುಟುಂಬಸ್ಥರ ಜತೆ ಮಾತುಕತೆ ನಡೆಸುತ್ತಿದ್ದಾರೆ. ವಿದೇ ಶಾಂಗ ಸಚಿವಾಲಯದ ಅಧಿಕಾರಿಗಳ ಜತೆ ಸಂಪರ್ಕದಲ್ಲಿದ್ದಾರೆ.
ಪಶ್ಚಿಮ ಉಕ್ರೇನ್‌ನ ಖಾರ್ಕಿವ್ ನಗರದಲ್ಲಿರುವ ದೇರೆಬೈಲಿನ ಅನೈನಾ ಅನಾ ಸಂಗಡಿಗರೊಂದಿಗೆ ಶನಿವಾರ ಮಧ್ಯಾಹ್ನ ವೇಳೆಗೆ ಮೆಟ್ರೋ ಅಂಡರ್ ಗ್ರೌಂಡ್‌ನಿಂದ ಹೊರಬಂದಿದ್ದು, ಹಾಸ್ಟೆಲ್‌ಗೆ ಸ್ಥಳಾಂತರಗೊಂಡಿದ್ದಾರೆ.
ಕೀವ್‌ನಲ್ಲಿರುವ ಪಡೀಲಿನ ಕ್ಲೇಟನ್ ಡಿ’ಸೋಜಾ ಕೂಡ ಕಾಲೇಜು ಬಂಕರಿನಿಂದ ಹಾಸ್ಟೆಲ್ ಸೇರಿದ್ದಾರೆಂದು ಮನೆಯವರು ತಿಳಿಸಿದ್ದಾರೆ.
Related Articles
ಉಕ್ರೇನ್‌ನಲ್ಲಿರುವ ವಿದ್ಯಾರ್ಥಿಗಳ ಪೈಕಿ ಓರ್ವನನ್ನು ಹೊರತುಪಡಿಸಿದರೆ ಉಳಿದ ಎಲ್ಲರೂ ಕುಟುಂಬದ ಜತೆ ಸಂಪರ್ಕದಲ್ಲಿದ್ದಾರೆ. ಒಬ್ಟಾತ ಶುಕ್ರವಾರ ವರೆಗೆ ಕುಟುಂಬದ ಸಂಪರ್ಕದಲ್ಲಿ ಇದ್ದ. ಶನಿವಾರ ಸಂಪರ್ಕಕ್ಕೆ ಸಿಗುತ್ತಿಲ್ಲ. ಆತನ ಮಾಹಿತಿ ಇಲ್ಲದೆ ಮನೆ ಮಂದಿ ಆತಂಕಕ್ಕೆ ಒಳಗಾಗಿದ್ದಾರೆ. ಜಿಲ್ಲಾಡಳಿತ ಅವರಿಗೆ ಧೈರ್ಯ ಹೇಳಿದೆ.
Advertisement
ಖಾರ್ಕಿವ್ ಮಾರ್ಕೆಟ್ ಓಪನ್ರಷ್ಯಾ ಗಡಿಯಿಂದ 40 ಕಿ.ಮೀ. ದೂರದ ಖಾರ್ಕಿವ್‌ನ ಕಾಲೇ ಜಿನಲ್ಲಿ 3ನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಅನೈನಾ ಅನಾ ತಾಯ್ನಾಡಿಗೆ ಬರಬೇಕಾದರೆ ಪೋಲೆಂಡ್, ಹಂಗೇರಿ ಮೂಲಕ ಪಶ್ಚಿಮದಿಂದ ಪೂರ್ವ ಉಕ್ರೇನ್ ಕಡೆಗೆ ಬರಬೇಕು. ಇಡೀ ಉಕ್ರೇನ್‌ಗೆ ಒಂದು ಸುತ್ತು ಹಾಕ ಬೇಕಾಗುತ್ತದೆ. ಯಾವುದೇ ಸಂದರ್ಭ ಕ್ಷಿಪಣಿ ದಾಳಿಗೆ ಒಳಗಾಗುವ ಅಪಾಯ ಇರುವುದರಿಂದ ಆಕೆಯನ್ನು ಏರ್ ಲಿಫ್ಟ್ ಮಾಡುವುದೂ ಸುಲಭವಲ್ಲ. ಮೆಟ್ರೋ ಸುರಂಗದಲ್ಲಿ ಆಶ್ರಯ ಪಡೆದಿರುವ ಆಕೆಗೆ ಆಹಾರ ಸಮಸ್ಯೆ ಎದುರಾಗಿತ್ತು. ಶನಿವಾರ ಬೆಳಗ್ಗೆ ಇಲ್ಲಿನ ಕಾಲಮಾನ 11 ಗಂಟೆ ಸುಮಾರಿಗೆ ಮಾರ್ಕೆಟ್ ತೆರೆಯಲಾಗಿದೆ. ವಿದ್ಯಾರ್ಥಿಗಳನ್ನು ಹಾಸ್ಟೆಲ್‌ಗೆ ಕಳುಹಿಸಲಾಗಿದೆ. ಮಾರ್ಕೆಟ್‌ಗೆ ತೆರಳಿದರೂ ನಗದು ವಹಿವಾಟಿಗೆ ಅವಕಾಶ, ಕ್ಯಾಶ್‌ಲೆಸ್‌ಗೆ ಆಸ್ಪದ ಇಲ್ಲ ಎಂದಿದ್ದಾರಂತೆ. ನಗದು ಬೇಕಾದರೆ ಎಟಿಎಂಗಳಲ್ಲಿ ಉದ್ದದ ಸರತಿ ಸಾಲು ಇದೆ. ನಾನೀಗ ಸಾಲಿನಲ್ಲಿ ನಿಂತುಕೊಂಡಿದ್ದೇನೆ ಎಂದು ಅನೈನಾ ತಿಳಿಸಿರುವುದಾಗಿ ಅವರ ತಾಯಿ ಸಂಧ್ಯಾ ಹೇಳಿದ್ದಾರೆ. ರಾತ್ರಿ ಮತ್ತೆ ಬಂಕರ್‌ಗೆೆ
ನನ್ನ ಮಗ ಕ್ಲೇಟನ್ ಇರುವ ಕಾಲೇಜು ಹಾಸ್ಟೆಲ್‌ನಲ್ಲಿ ಶುಕ್ರವಾರ ರಾತ್ರಿ ಇದ್ದಾಗ ಇಲ್ಲಿನ ಕಾಲಮಾನ 11.30ರ ಸುಮಾರಿಗೆ ಅಪಾಯದ ಸೈರನ್ ಮೊಳಗಿತ್ತು. ಕೂಡಲೇ ಎಲ್ಲ ವಿದ್ಯಾರ್ಥಿಗಳನ್ನು ಹಾಸ್ಟೆಲ್‌ನ ಬಂಕರಿಗೆ ಕಳುಹಿಸಿದ್ದರು. ರಾತ್ರಿ ಇಡೀ ಬಂಕರ್‌ನಲ್ಲಿ ಆತ ಕಳೆದಿದ್ದ. ಶನಿವಾರ ಮಧ್ಯಾಹ್ನ ವೇಳೆಗೆ ಬಂಕರಿನಿಂದ ಮತ್ತೆ ಹಾಸ್ಟೆಲ್‌ಗೆ ಕರೆಸಿಕೊಂಡಿದ್ದಾರೆ. ಸ್ನಾನ, ಊಟಕ್ಕೆ ಅವಕಾಶ ನೀಡಿದ್ದಾರೆ ಎನ್ನುತ್ತಾರೆ ಕ್ಲೇಟನ್‌ನ ತಾಯಿ ಒಲಿನ್. ಉಡುಪಿಯ ಏಳು ವಿದ್ಯಾರ್ಥಿಗಳು
ಉಡುಪಿ: ಉಕ್ರೇನ್‌ನಲ್ಲಿ ಓದುತ್ತಿರುವ ಉಡುಪಿ ಜಿಲ್ಲೆಯ 7 ವಿದ್ಯಾರ್ಥಿಗಳ ಬಗ್ಗೆ ಅವರ ಕುಟುಂ ಬಸ್ಥರು ಈಗಾಗಲೇ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದಾರೆ. ಜಿಲ್ಲಾಡಳಿತದಿಂದ ವಿದ್ಯಾರ್ಥಿಗಳ ಮಾಹಿತಿಯನ್ನು ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೂ ಕಳುಹಿಸಲಾಗಿದೆ. ಒಡೆಸ್ಸಾ ನ್ಯಾಶನಲ್ ಮೆಡಿಕಲ್ ವಿವಿಯಲ್ಲಿ ಎಂಬಿಬಿಎಸ್ ಓದುತ್ತಿರುವ ನಂದಿನಿ ಅರುಣ್, ವಿ.ಎನ್. ಕರಝೀನ್ ಖಾರ್ಕಿವ್ ನ್ಯಾಷನಲ್ ಮೆಡಿಕಲ್ ವಿವಿಯಲ್ಲಿ ಎಂಬಿಬಿಎಸ್ ಓದುತ್ತಿರುವ ಅಂಕಿತಾ ಜಗದೀಶ್ ಪೂಜಾರಿ ಯವರ ಮಾಹಿತಿ ಶನಿವಾರ ಜಿಲ್ಲಾಡಳಿತಕ್ಕೆ ಲಭಿಸಿದೆ ಎಂದು ಪ್ರಕಟನೆ ತಿಳಿಸಿದೆ. ಎಂಬಿಬಿಎಸ್ ವಿದ್ಯಾರ್ಥಿ ನಿಯಮ್ ಅವರ ತಂದೆ ಬಿ.ವಿ. ರಾಘವೇಂದ್ರ ಅವರು ಮಾತನಾಡಿ, ಮಗನೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಸದ್ಯ ಪೋಲೆಂಡ್ ಮೂಲಕ ಭಾರತಕ್ಕೆ ಕರೆ ತರುವ ಪ್ರಯತ್ನವನ್ನು ಸರಕಾರ ಮಾಡುತ್ತಿದೆ. ಎಲ್ಲರೂ ಸುರಕ್ಷಿತವಾಗಿ ತಾಯ್ನಾಡಿಗೆ ಬರಲಿದ್ದಾರೆ ಎಂದರು.