ಮಂಗಳೂರು: ಕ್ರಿಯಾಶೀಲರಾಗಿ ಆಲೋಚಿಸುವ, ಹೊಸತನ ಕಂಡು ಹಿಡಿಯುವ ತುಡಿತ ಇರುವ ಪ್ರತಿಭಾವಂತರಿಗೆ ವೇದಿಕೆಯೊದಗಿಸಿಕೊಡುವ ನಿಟ್ಟಿನಲ್ಲಿ ಮಂಗಳೂರಿನ ಡಿಎಸ್ ಐ(ಡ್ರಿಮ್ ಸಾಫ್ಟ್ ಇನೋವೇಶನ್ಸ್) ನಗರದಲ್ಲಿ ಬೃಹತ್ ಕೋಡಿಂಗ್ ಹ್ಯಾಕಾಥಾನ್(ಟೆಕ್ ಸ್ಪರ್ಧೆ)ಯನ್ನು ಏಪ್ರಿಲ್ 13ಮತ್ತು 14ರಂದು ಏರ್ಪಡಿಸಿದೆ.
(ಸ್ಪರ್ಧೆಯ ರಿಜಿಸ್ಟ್ರೇಶನ್ ಗೆ ಇಲ್ಲಿ ಕ್ಲಿಕ್ಲಿಸಿ)
ಡ್ರಿಮೋಥಾನ್ 2K19ನಡಿ ಹ್ಯಾಕಥಾನ್, ವರ್ಕ್ ಶಾಪ್, ಕೋಡಿಂಗ್ ಇವೆಂಟ್ಸ್, ಟೆಕ್ನಿಕಲ್ ಸೇರಿದಂತೆ ವಿವಿಧ ಸ್ಪರ್ಧೆ ನಡೆಯಲಿದೆ..ಪ್ರಶಸ್ತಿಯ ಒಟ್ಟು ಮೊತ್ತ ಒಂದು ಲಕ್ಷ ರೂಪಾಯಿ. ಏಪ್ರಿಲ್ 13ರಂದು ಬೆಳಗ್ಗೆಯಿಂದ ಭಾನುವಾರ ಸಂಜೆ 5ಗಂಟೆವರೆಗೆ ಸ್ಪರ್ಧೆ, ವರ್ಕ್ ಶಾಪ್ ನಡೆಯಲಿದೆ.
1)ಹ್ಯಾಕಥಾನ್: 30ಗಂಟೆಗಳ ಕಾಲಾವಧಿಯ ಕೋಡಿಂಗ್ ಸ್ಪರ್ಧೆ ನಡೆಯಲಿದ್ದು, ಸ್ಪರ್ಧಿಗಳು ತಮಗೆ ನೀಡಿರುವ ವಿಷಯದ ಆಧಾರದ ಮೇಲೆ ವೆಬ್ ಅಥವಾ ಮೊಬೈಲ್ ನಲ್ಲಿ ಆ್ಯಪ್ಲಿಕೇಶನ್ ಬಿಲ್ಡ್ ಮಾಡಬೇಕು.
2)ಗೇಮೋಥಾನ್: 30ಗಂಟೆಗಳ ಕಾಲಾವಧಿಯ ಕೋಡಿಂಗ್/ಡಿಸೈನಿಂಗ್ ಸ್ಪರ್ಧೆಯಲ್ಲಿ ಅಭ್ಯರ್ಥಿಗಳು ತಮಗೆ ನೀಡಿರುವ ವಿಷಯದ ಆಧಾರದ ಮೇಲೆ ಮೊಬೈಲ್ ಅಥವಾ ಡೆಸ್ಕ್ ಟಾಪ್ ಗಳಲ್ಲಿ ವಿಡಿಯೋ ಗೇಮ್ ತಯಾರಿಸಬೇಕು.
ವರ್ಕ್ ಶಾಪ್:
1)ವೆಬ್ ಡೆವಲಪ್ ಮೆಂಟ್ 2) ಗೇಮ್ ಡೆವಲಪ್ ಮೆಂಟ್ 3) ಆ್ಯಪ್ ಡೆವಲಪ್ ಮೆಂಟ್ 4) ಇನ್ ಟ್ರಡಕ್ಸನ್ ಟು ಪೇಥಾನ್
ಮಂಗಳೂರಿನ ಅಡ್ಯಾರ್ ನ ಸಹ್ಯಾದ್ರಿ ಕ್ಯಾಂಪಸ್ ನಲ್ಲಿ ಸ್ಪರ್ಧೆ ನಡೆಯಲಿದೆ. ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಿ.
ಕೋಡ್ ಹಂಟ್: ನೀವು ಒಬ್ಬ ಉತ್ತಮ ಟೆಕ್ ಪ್ರಾಬ್ಲಂ ಸೋಲ್ ವರ್ ಅಥವಾ ಪ್ರೋಗ್ರಾಮ್ಮರ್ ಆಗಿದ್ದರೆ ನೀವು ಸ್ಪರ್ಧೆಯಲ್ಲಿ ಭಾಗವಹಿಸಿ. ಪ್ರಶಸ್ತಿ ಮೊತ್ತ 5 ಸಾವಿರ ಮತ್ತು ಇಂಟರ್ನ್ ಶಿಪ್.
ಕೋಡಿಂಗ್ ಸ್ಕಿಲ್ಸ್ ಅನಾವರಣಗೊಳಿಸಲು ಅವಕಾಶ, ಇಂಡಿವಿಜ್ಯುವಲ್ ಇವೆಂಟ್, ಕಂಪ್ಯೂಟರ್ ಪ್ರೊಗ್ರಾಮ್ಸ್ ರೈಟಿಂಗ್ ಮತ್ತು ನಿಗದಿತ ಸಮಯದೊಳಗೆ ಪ್ರಾಬ್ಲಂ ಸಾಲ್ವೋ ಮಾಡುವುದು.
ಸ್ಪರ್ಧಾ ದಿನಾಂಕ ಏಪ್ರಿಲ್ 13ರ ಮಧ್ಯಾಹ್ನ 3ಗಂಟೆಯಿಂದ 4ರವರೆಗೆ. ಪ್ರವೇಶ ಶುಲ್ಕ: 250 ರೂಪಾಯಿ.
ಹ್ಯಾಕಾಥಾನ್: ನಿಮ್ಮ ಸ್ವಂತ ತಂಡ ಹಾಗೂ ಕನಸನ್ನು ಆಯ್ಕೆ ಮಾಡಿ, ನನಗಾಗಿಸಿ…
30ಗಂಟೆಗಳ ಹ್ಯಾಕಾಥಾನ್ ನಲ್ಲಿ ಅಭ್ಯರ್ಥಿಗಳು ಹೊಸ ಆವಿಷ್ಕಾರದ ಮೂಲಕ ತಮ್ಮ ಪ್ರತಿಭೆ ಅನಾವರಣಗೊಳಿಸಬೇಕು. ಕ್ರಿಯೇಟಿವ್ ಸೊಲ್ಯೂಷನ್ಸ್ ನೊಂದಿಗೆ ವೆಬ್ ಅಥವಾ ಮೊಬೈಲ್ ನಲ್ಲಿ ನೀಡಿರುವ ವಿಷಯದ ಆಧಾರದ ಮೇಲೆ ಆ್ಯಪ್ಲಿಕೇಶನ್ ರಚಿಸಬೇಕು…
ಸ್ಪರ್ಧೆಯ ದಿನಾಂಕ ಏ.13-14. ಪ್ರವೇಶ ಶುಲ್ಕ 600. ಪ್ರಶಸ್ತಿ ಮೊತ್ತ 50 ಸಾವಿರ ರೂಪಾಯಿ.
ಹ್ಯಾಕಾಥಾನ್(ಕಿರಿಯರ ವಿಭಾಗ) 10ರಿಂದ ಪಿಯುಸಿ ವರೆಗಿನ ವಿದ್ಯಾರ್ಥಿಗಳಿಗೆ..
30 ಗಂಟೆಗಳ ಕಾಲಾವಧಿಯಲ್ಲಿ ಸ್ಪರ್ಧಿಗಳು ನೂತನ ಆವಿಷ್ಕಾರದ, ಕ್ರಿಯೇಟಿವ್ ಸೊಲ್ಯೂಷನ್ಸ್ ಮೂಲಕ ವೆಬ್ ಅಥವಾ ಮೊಬೈಲ್ ನಲ್ಲಿ ಆ್ಯಪ್ಲಿಕೇಷನ್ ರಚಿಸಬೇಕು. ಸ್ಪರ್ಧೆಯ ದಿನಾಂಕ ಏ.13-14. ಪ್ರಶಸ್ತಿ ಮೊತ್ತ 5000, ಪ್ರವೇಶ ಶುಲ್ಕ 300.
ಗೇಮಥಾನ್:
30ಗಂಟೆಗಳ ಕಾಲಾವಧಿಯ ಗೇಮ್ ಸ್ಪರ್ಧೆಯಲ್ಲಿ ಆಕಾಂಕ್ಷಿಗಳು ಡಿಸೈನಿಂಗ್ ಮತ್ತು ಕೋಡಿಂಗ್ ಸ್ಪರ್ಧೆಯಲ್ಲಿ ಯುನಿಟಿ 3ಡಿ ಗೇಮ್ ಉಪಯೋಗಿಸಿ ವಿಡಿಯೋ ಗೇಮ್ ತಯಾರಿಸಬೇಕು.
ಸ್ಪರ್ಧಾ ದಿನಾಂಕ ಏ.13-14, ಪ್ರವೇಶ ಶುಲ್ಕ 600, ಬಹುಮಾನ ಮೊತ್ತ 20,000 ಮತ್ತು ಇಂಟರ್ನ್ ಶಿಪ್ಸ್.
ಗೇಮಿಂಗ್: ಪ್ರತಿಭೆ ಆಟವನ್ನು ಗೆಲ್ಲಿಸುತ್ತೆ, ಆದರೆ ತಂಡ ಮತ್ತು ಇಂಟೆಲಿಜೆನ್ಸ್ ಜೊತೆಯಾದರೆ ಚಾಂಪಿಯನ್ ಆಗಬಹುದು!
ಕೌಂಟರ್ ಸ್ಟ್ರೈಕ್ 1.6: ಪ್ರಶಸ್ತಿ ಮೊತ್ತ 5 ಸಾವಿರ
PUBG: ಪ್ರಶಸ್ತಿ ಮೊತ್ತ 5 ಸಾವಿರ.
ಏಪ್ರಿಲ್ 13ರ ಮಧ್ಯಾಹ್ನ 2ಗಂಟೆಯಿಂದ ಸಂಜೆ 5ಗಂಟೆವರೆಗೆ ಸ್ಪರ್ಧೆ ನಡೆಯಲಿದೆ. ಪ್ರವೇಶ ಶುಲ್ಕ 200 ರೂಪಾಯಿ.