Advertisement
ಮಲ್ಲಿಕಟ್ಟೆ ಪಾರ್ಕ್ ಬಳಿ ರಸ್ತೆ ಬಹಳಷ್ಟು ಕಿರಿದಾಗಿದ್ದು, ವಾಹನಗಳನ್ನು ಪಾರ್ಕ್ ಮಾಡುವುದರಿಂದ ಅರ್ಧದಷ್ಟು ರಸ್ತೆ ಪಾರ್ಕಿಂಗ್‌ಗೇ ಮಿಸಲು ಎನ್ನುವಂತಾಗಿದೆ. ಇದರಿಂದ ರಸ್ತೆಯಲ್ಲಿ ಸಾಗುವ ಇತರ ವಾಹನಗಳಿಗೆ ಅಡ್ಡಿಯಾಗಿದೆ. ರಸ್ತೆಯಲ್ಲಿ ಬಸ್, ಲಾರಿಗಳು ಸಾಗುವುದರಿಂದ ಕೆಲವೊಮ್ಮೆ ಇಕ್ಕಟ್ಟಿನ ಪರಿಸ್ಥಿತಿಯೂ ಉಂಟಾಗುತ್ತದೆ.
ಈ ರಸ್ತೆಯಲ್ಲಿ ಬಹುತೇಕ ಫುಟ್ ಪಾತ್ ಇಲ್ಲ. ಇದರಿಂದಾಗಿಯೂ ಪಾದಚಾರಿಗಳು ರಸ್ತೆಯಲ್ಲಿ ನಡೆದುಕೊಂಡು ಹೋಗಬೇಕಾದ ಪರಿಸ್ಥಿತಿ ಇದೆ. ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಸೇರಿದಂತೆ ಸಾಕಷ್ಟು ಮಂದಿ ಇದೇ ರಸ್ತೆಯಲ್ಲಿ ನಿತ್ಯ ನಡೆದುಕೊಂಡು ಹೋಗುತ್ತಾರೆ. ಆದ್ದರಿಂದ ಅಪಾಯ ಸಾಧ್ಯತೆ ಹೆಚ್ಚಿದೆ. ಆ್ಯಗ್ನೆಸ್ ಕಡೆಯಿಂದ ಬರುವಾಗ ಮಲ್ಲಿಕಟ್ಟೆ ಜಂಕ್ಷನ್‌ಗಿಂತ ಮೊದಲು ಸಿಗುವ ತಿರುವಿನಲ್ಲಿ ರಸ್ತೆಯ ಅಗಲ ಬಹಳಷ್ಟು ಕಿರಿದಾಗಿದ್ದು, ಒಂದು ಪಾರ್ಶ್ವದಲ್ಲಿ ಮಾತ್ರ ಕಾಂಕ್ರೀಟ್ ಹಾಕಲಾಗಿದ್ದು, ಭೂ ಸ್ವಾಧೀನ ಸಮಸ್ಯೆಯಿಂದ ಇನ್ನೊಂದು ಪಾರ್ಶ್ವ ಹಾಗೇ ಉಳಿದಿದೆ. ಇದು ಪಾದಚಾರಿಗಳಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ.