ಮಂಗಳೂರು: ದರೋಡೆ ಹಾಗೂ ಕೊಲೆಗೆ ಸಂಚು ರೂಪಿಸುತ್ತಿದ್ದ 4 ಮಂದಿ ಆರೋಪಿಗಳನ್ನು ಮಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿ ಅವರಿಂದ ತಲವಾರು, ಮಚ್ಚು, ಚೂರಿ, 40 ಗ್ರಾಂ ಗಾಂಜಾ ಮತ್ತು 3 ಮೊಬೈಲ… ಫೋನ್, ಟಾಟಾ ಸುಮೋ ಕಾರು ಸಹಿತ ಒಟ್ಟು 1,19,000 ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ತೊಕ್ಕೊಟ್ಟು ಒಳಪೇಟೆಯ ಮನೋಜ್ ಕುಮಾರ್ (33), ಮೊಗವೀರಪಟ್ಣ ಬೀಚ್ ಬಳಿಯ ಪ್ರಸಾದ್ ಯಾನೆ ಪಚ್ಚು (28), ಮೊಗವೀರ ಪಟ್ಣ ವ್ಯಾಘ್ರ ಚಾಮುಂಡೇ ಶ್ವರಿ ದೇಗುಲ ಬಳಿಯ ಶ್ರವಣ್ (22) ಹಾಗೂ ತೊಕ್ಕೊಟ್ಟು ಭಟ್ನಗರದ ಸುಜಿತ್ (27) ಬಂಧಿತರು.
ಟಾಟಾ ಸುಮೋ ವಾಹನವೊಂದ ರಲ್ಲಿ ಬಂದ 9-10 ಮಂದಿ ಯುವಕರು ಫಳ್ನೀರ್‌ನಲ್ಲಿ ದರೋಡೆ ಹಾಗೂ ಕೊಲೆ ನಡೆಸಲು ಸಂಚು ರೂಪಿಸಿದ್ದರು. ಖಚಿತ ಮಾಹಿತಿ ದೊರೆತ ಮೇರೆಗೆ ಮಂಗಳೂರು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಮೂಲ್ಕಿ ಚಿತ್ರಾಪು ಬಳಿಯಿಂದ ಬಂಧಿಸಿದರು.
ಹಳೆ ಆರೋಪಿಗಳು
ಆರೋಪಿ ಪ್ರಸಾದ್ ಯಾನೆ ಪಚ್ಚು ವಿರುದ್ಧ ಈ ಹಿಂದೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ 2 ಹÇÉೆ ಪ್ರಕರಣ, 3 ಕೊಲೆ ಯತ್ನ ಪ್ರಕರಣ ಹಾಗೂ ಮಂಗಳೂರು ಉತ್ತರ ಪೊಲೀಸ್ ಠಾಣೆ(ಬಂದರು)ಯಲ್ಲಿ ಕೊಲೆ ಪ್ರಕರಣವೊಂದು ದಾಖಲಾಗಿರುತ್ತದೆ. ಈತನ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್ ತೆರೆಯಲಾಗಿದೆ. ಆರೋಪಿಗಳಾದ ಶ್ರವಣ್ ಹಾಗೂ ಮನೋಜ್ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.
ಸಿಸಿಬಿ ಪೊಲೀಸ್ ಇನ್‌ಸ್ಪೆಕ್ಟರ್ ಶಾಂತಾರಾಮ ಮತ್ತು ಸಿಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿ ದ್ದರು. ಕೃತ್ಯದಲ್ಲಿ ಇನ್ನೂ ಕೆಲವರು ಭಾಗಿ ಯಾಗಿರುವುದು ಗಮನಕ್ಕೆ ಬಂದಿದ್ದು, ಅವರ ಪತ್ತೆ ಕಾರ್ಯ ಮುಂದು ವರಿದಿದೆ ಎಂದು ತಿಳಿಸಿದ್ದಾರೆ.