ಮಾನಂಪಾಡಿ, ಕಾರ್ನಾಡು, ಬಪ್ಪನಾಡು ಮತ್ತು ಚಿತ್ರಾಪು ಗ್ರಾಮಗಳ ಪರಿಮಿತಿಯಲ್ಲಿ ಸಮಸ್ಯೆ ಇದೆ. ಇಲ್ಲಿಯ ಎರಡು ನೀರಿನ ಸಂಪುಗಳಿಗೆ ಮತ್ತು ಎರಡು ನೀರು ಸಂಗ್ರಹಣಾ ಓವರ್ ಹೆಡ್ ಟ್ಯಾಂಕ್‌ಗಳಿಗೆ ನಗರ ಪಂಚಾಯತ್ ಖಾಸಗಿ ಗುತ್ತಿಗೆದಾರರ ಮೂಲಕ ಟ್ಯಾಂಕರ್ ಮೂಲಕ ನೀರನ್ನು ತಂದು ಪೈಪ್ ಲೈನ್ ಮೂಲಕ ವಿತರಿಸುತ್ತಿದೆ.
Advertisement
ಪಂಚಾಯತ್ ವ್ಯಾಪ್ತಿಗೆ ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಿಂದ ದಿನಕ್ಕೆ 2 ಗಂಟೆಗಳ ಕಾಲ ಬರುತ್ತಿದ್ದ ನೀರಿನ ಪೂರೈಕೆ ಈಗ ಎರಡು ದಿನಕ್ಕೊಮ್ಮೆ ನಿಗದಿಪಡಿಸಲಾಗಿರುವ ಹಿನ್ನೆಲೆಯಲ್ಲಿ ಈ ಸಮಸ್ಯೆ ಉದ್ಭವಿಸಿದೆ. ನ.ಪಂ ವ್ಯಾಪ್ತಿಯ ಶ್ರೀ ವೆಂಕಟರಮಣ ದೇಗುಲದ ಮುಖ್ಯ ದ್ವಾರದ ಬಳಿ ಮತ್ತು ಮಾತಾ ಅಮೃತಾನಂದಮಯಿ ನಗರ- ಹೀಗೆ ಎರಡು ಕಡೆ ಬೋರ್‌ವೆಲ್‌ಗಳನ್ನು ತಲಾ ಎರಡೂವರೆ ಲಕ್ಷ ರೂ. ವೆಚ್ಚದಲ್ಲಿ ಕೊರೆಯಲಾಗಿದ್ದರೂ ಸಾಕಷ್ಟು ನೀರಿಲ್ಲದೇ ಪ್ರಯೋಜನವಿಲ್ಲದಂತಾಗಿದೆ. ಮೂಲ್ಕಿ ಮತ್ತು ಪರಿಸರದ ಹಲವೆಡೆ ಸರಕಾರ ಬೋರ್‌ವೆಲ್ ಕೊರೆಯಲು ಆನುಮತಿ ನೀಡಿದಾ ಕ್ಷಣ ಕೆಲವು ಪಂಚಾಯತ್ ಮತ್ತು ಖಾಸಗಿ ವ್ಯಕ್ತಿಗಳು ಬೋರ್‌ವೆಲ್ ಕೊರೆಯಲು ತೊಡಗಿದ್ದರಿಂದ ಬಾವಿಯ ಒರತೆಗೆ ಹಾನಿಯಾಗಿದೆ ಎಂಬ ದೂರೂ ವ್ಯಕ್ತವಾಗಿದೆ.
ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವ ಖಾಸಗಿ ಪೂರೈಕೆದಾರರಿಗೆ ಬೇಕದಾಷ್ಟು ನೀರು ಸಿಕ್ಕರೆ ನಮ್ಮ ಪಂಚಾಯತ್ ವ್ಯಾಪ್ತಿಯಲ್ಲಿ ಏನೂ ಸಮಸ್ಯೆಯಾಗದು. ಮಹಾನಗರ ಪಾಲಿಕೆಯ ಸರಬರಾಜು ವ್ಯವಸ್ಥೆಯಿಂದ ನಿತ್ಯವೂ ನಮಗೆ ಎರಡು ಗಂಟೆ ಬರುತ್ತಿದ್ದ ನೀರು ಈಗ ಎರಡು ದಿನಗಳಿಗೊಮ್ಮೆ ಬರುವುದರಿಂದ ತೊಂದರೆಯಾಗಿದೆ. ಅದನ್ನು ಟ್ಯಾಂಕರ್ ಮೂಲಕ ನೀರು ಪೂರೈಸಿ ನಿರ್ವಹಿಸಲಾಗುತ್ತಿದೆ. ಸಾರ್ವಜನಿಕರೂ ನೀರಿನ ಮಿತ ಬಳಕೆಗೆ ಮುಂದಾಗಬೇಕಿದೆ.
ಸುನೀಲ್ ಆಳ್ವ, ಅಧ್ಯಕ್ಷರು ನಗರ ಪಂಚಾಯತ್ ಮೂಲ್ಕಿ