ಮಂಗಳೂರು: ಕೃಷಿ ವಿರೋಧಿ ಕಾನೂನನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ಎಸ್.ಡಿ.ಪಿ.ಐ ವತಿಯಿಂದ ಮಂಗಳೂರಿನ ಮಹಾನಗರ ಪಾಲಿಕೆ ಎದುರು ಪ್ರತಿಭಟನೆ ನಡೆಯಿತು.
ದೇಶದೆಲ್ಲೆಡೆ ರೈತ ವಿರೋಧಿ ಕಾನೂನನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ಪ್ರತಿಭಟನೆಗಳು ನಡೆಯುತ್ತಿದ್ದು. ಇಂದು ಮಂಗಳೂರಿನಲ್ಲಿ ಕೂಡ ಎಸ್.ಡಿ.ಪಿ.ಐ ವತಿಯಿಂದ ರೈತ ಐಕ್ಯತಾ ಸಂಗಮ ನಡೆಯಿತು. ಪ್ರತಿಭಟನೆಯಲ್ಲಿ ಎಸ್.ಡಿ.ಪಿ.ಐ ನ ಜಿಲ್ಲಾಧ್ಯಕ್ಷರಾದ ಅಥಾವುಲ್ಲಾ ಜೋಕಟ್ಟೆ ಭಾಗಿಯಾಗಿದ್ದರು.
ಇದನ್ನೂ ಓದಿ: ದೆಹಲಿಯಲ್ಲಿ ಹೆಚ್ಚುವರಿ ಅರೆಸೇನಾಪಡೆ ನಿಯೋಜನೆ, ಉನ್ನತ ಮಟ್ಟದ ಸಭೆ; ಇಂಟರ್ನೆಟ್ ಸ್ಥಗಿತ
ಈ ವೇಳೆ ಮಾತನಾಡಿದ ಅಥಾವುಲ್ಲಾ ಜೋಕಟ್ಟೆ, ರೈತ, ಕಾರ್ಮಿಕರಿಗೆ ಹಾಗೂ ಜನಸಾಮಾನ್ಯರಿಗೆ ವಿರುದ್ದವಾದ ಕಾನೂನನ್ನು ಬಿಜೆಪಿ ತರುತ್ತಿದೆ. ರೈತರ ಹೆಸರಲ್ಲಿ ಪ್ರತಿಜ್ಞೆ ಪಡೆದು ಈಗ ಅವರಿಗೆ ಬಿಜೆಪಿ ಸರ್ಕಾರ ಮೋಸ ಮಾಡುತ್ತಿದೆ. ಈ ಹಿಂದೆ ಎನ್.ಆರ್.ಸಿ.ಮತ್ತು ಸಿ..ಎ.ಎ ಪ್ರತಿಭಟನೆ ವೇಳೆ ಆನೇಕ ಮುಸ್ಲಿಮರನ್ನು ಬಂಧಿಸಿದೆ ಎಂದು ಕಿಡಿಕಾರಿದರು.
ಇದನ್ನೂ ಓದಿ: ರಾಜ್ಯ-ಕೇಂದ್ರ ಸರ್ಕಾರಗಳ ಅಂತ್ಯದ ದಿನ ಹತ್ತಿರ ಬರುತ್ತಿದೆ: ಡಿ.ಕೆ ಶಿವಕುಮಾರ್