Advertisement

ಮಂಗಳೂರು: ಗುಟ್ಕಾ ಜಗಿದ ಚಾಲಕರಿಗೆ ಬಿತ್ತು 5,000 ರೂಪಾಯಿ ದಂಡ ! 

08:54 AM Apr 29, 2022 | Team Udayavani |

ಮಂಗಳೂರು: ಚಾಲನೆ ವೇಳೆ ಗುಟ್ಕಾ ಜಗಿಯುತ್ತಿದ್ದ ಬಸ್‌ ಚಾಲಕರಿಗೆ‌ ಮಂಗಳೂರು ಆರ್‌ಟಿಒ ಅಧಿಕಾರಿಗಳು ದಂಡ ವಿಧಿಸಿದ್ದಾರೆ.

Advertisement

ಬಿಜೈ ಬಳಿ ರಾತ್ರಿ ದಾಖಲೆ ತಪಾಸಣೆ ಸಂದರ್ಭ 2 ಬಸ್‌ಗಳ ಚಾಲಕರು ಗುಟ್ಕಾ  ಜಗಿಯುತ್ತ ಅಧಿಕಾರಿಗಳ ಮುಂದೆ ಬಂದರು. ಇದನ್ನು ಗಮನಿಸಿದ ಆರ್‌ಟಿಒ ಅಧಿಕಾರಿಗಳು ಇಬ್ಬರು ಚಾಲಕರಿಗೂ ತಲಾ 5,000 ರೂ. ದಂಡ ವಿಧಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಆರ್‌ಟಿಒ ಆರ್‌.ಎಂ. ವರ್ಣೇಕರ್‌, “ಮದ್ಯ  ಸೇವಿಸಿ ವಾಹನ ಚಲಾಯಿಸುವವರ ವಿರುದ್ಧ ಮಾತ್ರವಲ್ಲದೆ ಯಾವುದೇ ರೀತಿಯ ಅಮಲು ಪದಾರ್ಥಗಳನ್ನು ಸೇವಿಸಿ ಚಲಾಯಿಸುವವರ ವಿರುದ್ಧ  ಕೂಡ ಪ್ರಕರಣ ದಾಖಲಿಸಿ, ದಂಡ  ವಿಧಿಸಲು ಅವಕಾಶವಿದೆ. ಅದರಂತೆ  ದಂಡ ವಿಧಿಸಲಾಗಿದೆ’ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next