ಮೈಸೂರು: ಮಂಗಳೂರಿನ ನಾಗುರಿ ಬಳಿ ಆಟೋ ರಿಕ್ಷಾ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ತಂಡವು ಮೈಸೂರಿನಲ್ಲಿ ಇಬ್ಬರನ್ನು ವಶಕ್ಕೆ ಪಡೆದಿದೆ.
ಇಬ್ಬರು ಶಂಕಿತರನ್ನು ಸಿಸಿಬಿ ಮತ್ತು ಮೇಟಗಳ್ಳಿ ಠಾಣೆ ಪೊಲೀಸರು ಮೈಸೂರು ನಗರದಲ್ಲಿ ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.
ಮೈಸೂರ್ ಲೋಕನಾಯಕ ನಗರದ ಮನೆಯೊಂದರ ಮೇಲೆ ದಾಳಿ ನಡೆಸಿರುವ ಪೋಲೀಸರು ಮಂಗಳೂರು ಮೂಲದ ಇಬ್ಬರನ್ನು ವಶಕ್ಕೆ ಪಡೆದಿದ್ದು, ನಾಗುರಿ ರಿಕ್ಷಾ ಘಟನೆಗೆ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಶಂಕಿತ ಭಯೋತ್ಪಾದಕನಿಗೆ ಮೊಬೈಲ್ ನೀಡಿದ ವ್ಯಕ್ತಿಯನ್ನು ಪೊಲೀಸರ ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಮಂಗಳೂರು ಪೊಲೀಸರು ತಂಡವು ಮೈಸೂರಿಗೆ ಬಂದಿದ್ದು, ಇಲ್ಲಿ ಜಂಟಿ ಕಾರ್ಯಾಚರಣೆಯಲ್ಲಿ ಶಂಕಿತ ಉಗ್ರನ ಸ್ನೇಹಿತನನ್ನು ವಶಕ್ಕೆ ಪಡೆದಿದೆ. 10 ಕ್ಕೂ ಹೆಚ್ಚು ಮೊಬೈಲ್ ಗಳನ್ನು ಆತ ಶಂಕಿತ ಉಗ್ರನಿಗೆ ನೀಡಿದ್ದಾನೆ ಎನ್ನಲಾಗಿದೆ. ಸದ್ಯ ಪೊಲೀಸರ ತಂಡ ವಿಚಾರಣೆ ನಡೆಸುತ್ತಿದೆ.
ಇದನ್ನೂ ಓದಿ:ಆಸ್ಪತ್ರೆಯ ಐಸಿಯು ವಾರ್ಡ್‌ಗೆ ಬಂದು ಮೆಡಿಕಲ್ ತ್ಯಾಜ್ಯ ತಿಂದ ದನ.! ವಿಡಿಯೋ ವೈರಲ್
ಮಂಗಳೂರು ಕಂಕನಾಡಿ ರೈಲು ನಿಲ್ದಾಣದ ಕಡೆಯಿಂದ ಸಂಜೆ 4.30ರ ಸುಮಾರಿಗೆ ಬರುತ್ತಿದ್ದ ಆಟೋ ರಿಕ್ಷಾಕ್ಕೆ ನಾಗುರಿಯಲ್ಲಿ ಓರ್ವ ಹತ್ತಿದ್ದು ಆತ ಪಂಪ್‌ವೆಲ್ ಕಡೆಗೆ ಹೋಗುವಂತೆ ಚಾಲಕನಿಗೆ ಸೂಚಿಸಿದ್ದ. ಅದರಂತೆ ರಿಕ್ಷಾ ಸಂಚರಿಸುತ್ತಿದ್ದಾಗ ಘಟನೆ ಸಂಭವಿಸಿದೆ. ರಿಕ್ಷಾದಲ್ಲಿ ಸ್ಫೋಟಗೊಂಡ ಸ್ಥಿತಿಯಲ್ಲಿ ಕುಕ್ಕರ್ ಪತ್ತೆಯಾಗಿದೆ. ಆಟೋರಿಕ್ಷಾದ ಒಳಗಿನ ಕೆಲವು ಭಾಗ ಗಳು ಸುಟ್ಟು ಹೋಗಿವೆ.