Advertisement

ಪಣಂಬೂರು ಬೀಚ್‌ನತ್ತ ಜನರ ಒಲವು

12:53 AM Jan 19, 2020 | mahesh |

ಪಣಂಬೂರು: ಒಂದೆಡೆ ಪ್ರಶಾಂತ ಸಮುದ್ರ ತೀರ ಇನ್ನೊಂದೆಡೆ ಮರಳಿನ ಮೇಲೆ ಅಗಾಧ ಜನಸಂದಣಿ. ಇವರ ನಡುವೆ ಗಾಳಿಪಟ, ಚುರುಮುರಿ, ಕಡಲೆ ಮತ್ತಿತರ ಮಾರಾಟ ಮಾಡುವ ಧಾವಂತದ ವ್ಯಾಪಾರಿಗಳು. ಇನ್ನು ಆಹಾರ ಮಳಿಗೆ ಬಳಿ ಖಾದ್ಯ ಪ್ರಿಯರ ದಂಡು. ಇದು ಶನಿವಾರ ಪಣಂಬೂರು ಬೀಚ್‌ನ ದೃಶ್ಯ.

Advertisement

ಪಣಂಬೂರಿನಲ್ಲಿ ಕರಾವಳಿ ಉತ್ಸವದ ಅಂಗವಾಗಿ ಆಯೋಜಿಸಲಾಗಿರುವ ಬೀಚ್‌ ಉತ್ಸವದಲ್ಲಿ ಪ್ರಧಾನ ಆಕರ್ಷಣೆಯೇ ನವನವೀನ ಮಾದರಿಯ ಗಾಳಿಪಟಗಳು. ಗಾಳಿಪಟದ ಹಾರಾಟ ವೀಕ್ಷಣೆಗೆ ವಾರದ ಕಡೆಯ ದಿನ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಣಂಬೂರು ಬೀಚ್‌ನತ್ತ¤ ಮುಖ ಮಾಡಿದ್ದರು. ಮಧ್ಯಾಹ್ನದಿಂದಲೇ ತಂಡೋಪ ತಂಡವಾಗಿ, ಕುಟುಂಬ ಸಮೇತರಾಗಿ ಆಗಮಿಸುತ್ತಿದ್ದ ದೃಶ್ಯ ಕಂಡು ಬಂತು. ವಾರಾಂತ್ಯವಾದ ಕಾರಣ ಮಕ್ಕಳು, ಹಿರಿಯರು, ಮಹಿಳೆಯರು ಸಹಿತ ಎಲ್ಲ ವಯೋಮಾನದವರು ಕೈಯಲ್ಲಿ ದೇಶೀ ಗಾಳಿಪಟ ಹಿಡಿದು ಬರುತ್ತಿದ್ದರು. ಹಿರಿಯರು ಮಕ್ಕಳಿಗೆ ಗಾಳಿಪಟ ಬಿಡಲು ಉತ್ತೇಜಿಸುತ್ತಿದ್ದರು.

ಗಾಳಿಪಟದಲ್ಲಿ ವಿದೇಶಿಯರ ಮೋಡಿ
ಇಂಡೋನೇಷ್ಯಾದ ಪ್ರಜೆಯೊಬ್ಬರು ಹನುಮಾನ್‌ ಗಾಳಿಪಟವನ್ನು ಹಾರಿಸಿ ಗಮನ ಸೆಳೆದರೆ, ಇನ್ನು ಅಮೆರಿಕಾದ ರೋನ್‌ ಸೌ³ಲ್ಡಿಂಗ್‌, ಥೈಲ್ಯಾಂಡಿನ ಬೇವ್‌ ಕೈಟ್‌ ಕಪಲ್‌ ಎಂದೇ ಪ್ರಸಿದ್ಧಿ ಪಡೆದ ದಂಪತಿ ಭಾರತಕ್ಕೆ ಹತ್ತು ಸಲ ಬಂದು ಮಂಗಳೂರಿನಲ್ಲಿ ಎರಡು ಬಾರಿ ಗಾಳಿಪಟ ಹಾರಿಸಿದ್ದಾರೆ. ಇಲ್ಲಿನ ಜನರ ಸಂಸ್ಕೃತಿ, ಸೌಜನ್ಯದ ನಡವಳಿಕೆ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು.

ಚೀನದ ತೇನ್‌ ಜಿಂಬೋ ಮಾತನಾಡಿ, ಇಂತಹ ಉತ್ಸವಗಳಿಂದ ದೇಶಗಳ ನಡುವೆ ಬಾಂಧವ್ಯ ವೃದ್ಧಿಗೆ ಸಾಧ್ಯವಿದೆ ಎಂದರು. ವಿದೇಶದ ಒಟ್ಟು 20 ತಂಡಗಳು ರವಿವಾರದವರೆಗೆ ಗಾಳಿಪಟ ಪ್ರದರ್ಶನ ನೀಡಲಿವೆ.

ಸಮುದ್ರದಲ್ಲಿ ಬೋಟಿಂಗ್‌ ಸಾಹಸ
ಸಮುದ್ರದಲ್ಲಿ ಬೋಟಿಂಗ್‌, ಹೈ ಸ್ಪೀಡ್‌ ಬೋಟ್‌ನಲ್ಲಿ ಕುಳಿತು ಜನತೆ ಸಂತಸ ಅನುಭವಿಸಿದರೆ, ಜೆಟ್‌ ಕಿಂಗ್‌ ನಲ್ಲಿ ಕುಳಿತು ಯುವಕರು ಸಾಹಸ ಪ್ರದರ್ಶಿಸುತ್ತಿದ್ದರು. ಇನ್ನು ಕುದುರೆ ಗಾಡಿಯಲ್ಲಿ ಕುಳಿತು ಸಮುದ್ರ ತೀರದುದ್ದಕ್ಕೂ ಸವಾರಿ ಮಾಡಿ ಸಂತಸಪಟ್ಟರು.

Advertisement

ಆಹಾರ ಮೇಳದ ಜತೆಗೆ ಮನೋರಂಜನ ಕ್ರೀಡೆಗಳಿದ್ದವು. ಲಕ್ಕಿ ಡ್ರಾ, ಬಾಲ್‌ಗ‌ಳ ಮೂಲಕ ಲೋಟ ಕೆಡಗುವುದು, ದಾರದ ಮೂಲಕ ಪೆಪ್ಸಿ ಬಾಟಲ್‌ ಎತ್ತುವ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು, ಹಿರಿಯರು ಹಣ ನೀಡಿ ಬಹುಮಾನ ಬರಬಹುದೆ ಎಂದು ಪರೀಕ್ಷಿಸಿದರು.

ಕರಾವಳಿ ಉತ್ಸವಕ್ಕೆ ಇಂದು ತೆರೆ
ಕರಾವಳಿ ಉತ್ಸವದ ಅಂಗವಾಗಿ ಒಂದು ವಾರದಿಂದ ಕದ್ರಿ ಉದ್ಯಾನವನ, ಕರಾವಳಿ ಉತ್ಸವ ಮೈದಾನ ಮತ್ತು ಪಣಂಬೂರ್‌ ಬೀಚ್‌ನಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಸ್ಪರ್ಧೆಗಳು ನಡೆಯುತ್ತಿದ್ದು, ಕರಾವಳಿ ಉತ್ಸವಕ್ಕೆ ಜ.

19ರಂದು ತೆರೆ ಬೀಳಲಿದೆ.
ಜ. 19ರಂದು ಕದ್ರಿ ಉದ್ಯಾನವನದಲ್ಲಿ ಬೆಳಗ್ಗೆ 6 ಗಂಟೆಯಿಂದ 7.30ರ ವರೆಗೆ ದೇವಿಕಾ ಯೋಗ ಕೇಂದ್ರ ಮಂಗಳೂರು ಆಶ್ರಯದಲ್ಲಿ ಯೋಗ ಪ್ರದರ್ಶನ, ಬೆಳಗ್ಗೆ 7ರಿಂದ 8 ಗಂಟೆವರೆಗೆ ವಿಭಾ ನಾಯಕ್‌ ಮಂಗಳೂರು ಮತ್ತು ತಂಡದಿಂದ ಉದಯರಾಗ ಕಾರ್ಯಕ್ರಮ, ಸಂಜೆ 6ರಿಂದ 7.30ರ ವರೆಗೆ ಅಮಿತ್‌ ಕುಮಾರ್‌ ಮತ್ತು ತಂಡ ಮಂಗಳೂರು ಅವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ಹಾಗೂ ದಾಸವಾಣಿ, ಸಂಜೆ 7.30ಯಿಂದ 9 ಗಂಟೆಯವರೆಗೆ ಆರಾಧನ ಡ್ಯಾನ್ಸ್‌ ಅಕಾಡೆಮಿ ಭುವನೇಶ್ವರ ಅವರಿಂದ ಗೋಟಿಪುರ ಸಮೂಹ ನೃತ್ಯ ನಡೆಯಲಿದೆ.

ಕರಾವಳಿ ಉತ್ಸವ ಮೈದಾನದ ವಸ್ತು ಪ್ರದರ್ಶನ ವೇದಿಕೆಯಲ್ಲಿ ಮೂಡುಬಿದಿರೆ ಆರಾಧನ ನೃತ್ಯ ಕೇಂದ್ರದಿಂದ ನೃತ್ಯ ರಂಜಿನಿ, ಸಂಜೆ 7.30ರಿಂದ ಕಾಸರಗೋಡು ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘದಿಂದ ನರಕಾಸುರ ವಧೆ-ಯಕ್ಷಗಾನ ಬೊಂಬೆಯಾಟ ನಡೆಯಲಿದೆ.
ಅದೇ ರೀತಿ ಪಣಂಬೂರು ಬೀಚ್‌ನಲ್ಲಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ, ಬೆಳಗ್ಗೆ 5ಕ್ಕೆ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಯೋಗ ಕಾರ್ಯಕ್ರಮ, ಬೆಳಗ್ಗೆ 6ಕ್ಕೆ ಸ್ವರಾಲಯ ಸಾಧನಾ ಶಿಬಿರ ವಯಲಿನ್‌ ವಾದನ, ಸಂಜೆ 5ಕ್ಕೆ ಕರಾವಳಿ ಉತ್ಸವ ಸಮಾರೋಪ ಮತ್ತು 6 ಗಂಟೆಗೆ ಗಾಯಕಿ ಸುಪ್ರಿಯಾ ಲೋಹಿತ್‌ ಅವರಿಂದ ಲೈವ್‌ ಕಾರ್ಯಕ್ರಮ ನಡೆಯಲಿದೆ.

ಆಹಾರ ಮಳಿಗೆ
ಬೀಚ್‌ನಲ್ಲಿ ವಿವಿಧ ಆಹಾರ ಮಳಿಗೆ ತೆರೆಯಲಾಗಿತ್ತು. ಮಳಿಗೆಗಳಲ್ಲಿ ಚಿಕನ್‌ ಬಿರಿಯಾನಿ, ಚಿಕನ್‌ ಕಬಾಬ್‌, ಎಗ್‌ ಬೊಂಡಾ, ವೆಜ್‌ಪಲಾವ್‌, ಇಡ್ಲಿ, ಸಮೋಸಾ ಸಹಿತ ಬಗೆಬಗೆಯ ಪದಾರ್ಥಗಳನ್ನು ಸಿದ್ಧ ಪಡಿಸಲಾಗಿತ್ತು. ಮತ್ಸé ಪ್ರಿಯರಿಗೆ ಬಗೆ ಬಗೆಯ ಖಾದ್ಯಗಳು, ಸುಕ್ಕ, ಚಿಲ್ಲಿ, ಕೋರಿ ರೊಟ್ಟಿ, ಕರಾವಳಿಯ ವೈವಿಧ್ಯಮಯ ಆಹಾರ, ಉತ್ತರ ಭಾರತದ ಗುಜರಾತಿ ಖಾದ್ಯಗಳು ಗಮನ ಸೆಳೆದವು. ಹೀಗೆ ತರತರದ ಬಿಸಿಬಿಸಿಯಾದ ಖಾದ್ಯ ಪದಾರ್ಥಗಳು, ಸಿಹಿತಿಂಡಿಗಳು, ಖಾರ, ನಮ್‌ಕೀನ್‌ಗಳು, ಮುಂಡಕ್ಕಿ, ಚುರುಮುರಿ, ಮಾವಿನ ಕಾಯಿ ಹೀಗೆ ವಿವಿಧ ಬಗೆಯ ಸ್ಟಾಲ್‌ಗ‌ಳು ಇದ್ದವು. ಇದರ ಜತೆಗೆ ರವಿವಾರದವರೆಗೆ ಸಾಂಸ್ಕೃತಿಕ ಕಾರ್ಯಕ್ರಮವೂ ಇದ್ದು ಸಂಜೆ ಮೂರು ದಿನಗಳ ಪಣಂಬೂರು ಕರಾವಳಿ ಉತ್ಸವಕ್ಕೆ ತೆರೆ ಬೀಳಲಿವೆ.

Advertisement

Udayavani is now on Telegram. Click here to join our channel and stay updated with the latest news.

Next