Advertisement
ಮಂಗಳೂರಿನ ಬಿಜೈ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಿಂದ ಕಾಸರಗೋಡಿಗೆ ಪ್ರತೀ ದಿನ 39 ಶೆಡ್ಯೂಲ್‌ನಲ್ಲಿ ಕೆಎಸ್ಸಾರ್ಟಿಸಿ ಬಸ್ ಸಂಚರಿಸುತ್ತದೆ. ಆದರೆ, ಹರತಾಳ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೆ ತಲಪಾಡಿ ಗಡಿವರೆಗೆ ಮಾತ್ರ ಬಸ್‌ಗಳು ಸಂಚರಿಸಿದವು. ಸಂಜೆ ಬಳಿಕ 10 ಬಸ್‌ಗಳು ಕಾಸರಗೋಡಿಗೆ ಸಂಚರಿಸಿದೆ. ಆದರೆ, ಕಾಸರಗೋಡು ಭಾಗದಿಂದ ಅಲ್ಲಿನ ಕೆಎಸ್ಸಾರ್ಟಿಸಿ ಬಸ್‌ಗಳು ಯಾವುದೇ ಮಂಗಳೂರಿಗೆ ಆಗಮಿಸಿಲ್ಲ ಎಂದು ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.
ಪಿಎಫ್ಐ ಕರೆ ನೀಡಿದ ಹರತಾಳಕ್ಕೆ ಕಾಸರಗೋಡು ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಎಸ್ಸಾರ್ಟಿಸಿ, ಖಾಸಗಿ ಬಸ್‌ಗಳ ಸಂಚಾರ ಸಂಪೂರ್ಣ ಮೊಟಕುಗೊಂಡಿದೆ. ಕೆಲವೆಡೆ ತ್ರಿಚಕ್ರ ವಾಹನಗಳ ಸಹಿತ ಖಾಸಗಿ ವಾಹನಗಳು ಸಂಚರಿಸಿವೆ. ವ್ಯಾಪಾರ ಸಂಸ್ಥೆಗಳು ಆಂಶಿಕವಾಗಿ ತೆರೆದಿವೆ. ಕಾಸರಗೋಡು ನಗರದಲ್ಲಿ ವ್ಯಾಪಾರ ಸಂಸ್ಥೆಗಳು ಬಹುತೇಕ ಮುಚ್ಚಿಕೊಂಡಿತ್ತು. ಸರಕಾರಿ ಕಚೇರಿಗಳಲ್ಲಿ ನೌಕರರ ಸಂಖ್ಯೆ ಕಡಿಮೆಯಿತ್ತು. ಕುಂಬಳೆ, ಉಪ್ಪಳ ಸಹಿತ ವಿವಿಧೆಡೆ ವ್ಯಾಪಾರ ಸಂಸ್ಥೆಗಳು ಮುಚ್ಚಿಕೊಂಡಿತ್ತು. ದ್ವಿಚಕ್ರ ವಾಹನಗಳು ಕೆಲವೆಡೆ ಸಂಚರಿಸಿವೆ. ಹರತಾಳದಿಂದ ಜಿಲ್ಲೆಯಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿತು.
Related Articles
Advertisement