Advertisement
ಇದರಿಂದಾಗಿ ಅತ್ತ ಹೆದ್ದಾರಿ ವಿಭಾಗದಿಂದಲೂ ಇತ್ತ ಹೆದ್ದಾರಿ ಪ್ರಾಧಿಕಾರದಿಂದಲೂ ನಿರ್ವಹಣೆ ಆಗದೆ ಹೆದ್ದಾರಿಯ ಈ 45 ಕಿ.ಮೀ. ಭಾಗ ತ್ರಿಶಂಕು ಸ್ಥಿತಿಯಲ್ಲಿದೆ.
Related Articles
Advertisement
ಭೂಸ್ವಾಧೀನ ವಿಳಂಬ: ಕೆಲವು ಗ್ರಾಮಸ್ಥರು ಪರಿಹಾರದಲ್ಲಿ ತಾರತಮ್ಯ ವಾಗಿದೆ ಎಂದು ಹೈಕೋರ್ಟ್‌ಗೆ ದೂರು ನೀಡಿ ಭೂ ಸ್ವಾಧೀನಕ್ಕೆ ತಡೆಯಾಜ್ಞೆ ತಂದಿದ್ದರು. ಸುಮಾರು 15 ಗ್ರಾಮಗಳಿಂದ 212ರಷ್ಟು ರೈತರು ತಡೆಯಾಜ್ಞೆ ತಂದಿದ್ದಾರೆ.
ಇದರ ನಡುವೆ ಹಲವರಿಗೆ ಪರಿಹಾರ ವಿತರಣೆ ನಡೆದಿದೆ. ಇದು ವರೆಗೆ 427 ಮಂದಿಗೆ ಒಟ್ಟು 206 ಕೋ.ರೂ. ಪರಿಹಾರವಾಗಿ ನೀಡಲಾಗಿದೆ. ಇನ್ನೂ 427 ಮಂದಿಗೆ ಪರಿಹಾರ ನೀಡುವುದು ಬಾಕಿ ಇದೆ. ತಡೆಯಾಜ್ಞೆ ತಂದವರನ್ನು ಬಿಟ್ಟು ಉಳಿದವರಿಗೆ ನಿಧಾನಗತಿಯಲ್ಲಿ ಪರಿಹಾರ ದೊರೆಯುತ್ತಿದೆ ಎನ್ನುತ್ತಾರೆ ಹೆದ್ದಾರಿ ಭೂಮಾಲಕರ ಹೋರಾಟ ಸಮಿತಿಯ ಕಾರ್ಯದರ್ಶಿ ಪ್ರಕಾಶ್ಚಂದ್ರ. ಭೂಸ್ವಾಧೀನ ಮುಂದುವರಿದು ಶೇ. 80ರಷ್ಟಾದರೂ ಆಗದೆ ಇದ್ದರೆ ಹೆದ್ದಾರಿ ಹಸ್ತಾಂತರ ಇನ್ನಷ್ಟು ವಿಳಂಬವಾಗುವ ಆತಂಕ ಇದೆ.
ವರ್ಕ್ ಆರ್ಡರ್ ಆಗಿದೆ, ಭೂಸ್ವಾಧೀನ ಆಗಿಲ್ಲ!ದಿಲೀಪ್ ಬಿಲ್ಡ್‌ಕಾನ್ ಕಂಪೆನಿಯು ಕುಲಶೇಖರ-ಸಾಣೂರು ಚತುಷ್ಪಥ ಕಾಮಗಾರಿಯ ಗುತ್ತಿಗೆ ವಹಿಸಿಕೊಂಡಿದೆ. ಯೋಜನಾ ವೆಚ್ಚ ಒಟ್ಟು 1.137 ಕೋ.ರೂ. ಬಿಡ್ ಅಂತಿಮಗೊಂಡು ವರ್ಷವೇ ಕಳೆದಿದೆ. ಇದರ ನಡುವೆ ವರ್ಕ್ ಆರ್ಡರ್ ನೀಡಲಾಗಿದೆ. ಕಂಪೆನಿಯವರು ತೋಡಾರು ಬಳಿ ಸ್ಥಾವರ ಸ್ಥಾಪಿಸಿದ್ದು ಪೂರ್ವಭಾವಿ ಕೆಲಸ ಮಾಡಿದ್ದಾರೆ. ಆದರೆ ಕಾಮಗಾರಿ ಪ್ರಾರಂಭಿಸಬೇಕಾದರೆ ಭೂಸ್ವಾಧೀನ ಆಗಿಲ್ಲ ಎನ್ನುವುದು ತೊಡಕು. ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ. ಅಗತ್ಯವಿರುವಷ್ಟು ಭೂಸ್ವಾಧೀನ ಆದ ಬಳಿಕವಷ್ಟೇ ಹೆದ್ದಾರಿಯನ್ನು ನಮ್ಮ ಸುಪರ್ದಿಗೆ ಪಡೆದುಕೊಳ್ಳುತ್ತೇವೆ.
– ಲಿಂಗೇಗೌಡ,
ಯೋಜನಾ ನಿರ್ದೇಶಕರು,
ಎನ್‌ಎಚ್‌ಎಐ, ಮಂಗಳೂರು -ವೇಣುವಿನೋದ್ ಕೆ.ಎಸ್.