Advertisement

ಅಂಚೆ ಮೂಲಕ ವಿದ್ಯುತ್‌ ಕಾರ್ಮಿಕರ ಬೇಡಿಕೆ ರವಾನೆ

06:35 AM Aug 22, 2017 | |

ಬೆಳ್ತಂಗಡಿ: ಮಂಗಳೂರು ವಿದ್ಯುತ್ಛಕ್ತಿ ಸರಬರಾಜು ಕಂಪೆನಿಯ ಗುತ್ತಿಗೆ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ರಾಜ್ಯದ ಮುಖ್ಯಮಂತ್ರಿ, ಇಂಧನ ಸಚಿವ ಹಾಗೂ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಅಂಚೆ ಮೂಲಕ ರವಾನಿಸುವ ಕಾರ್ಯಕ್ರಮ ನಡೆಯಿತು.

Advertisement

ಕರ್ನಾಟಕ ರಾಜ್ಯ ವಿದ್ಯುತ್‌ ಕಾರ್ಮಿಕರ ಫೆಡರೇಶನ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವ ಕುಮಾರ್‌ ಎಸ್‌.ಎಂ., ಮುಖಂಡರಾದ ಪ್ರಕಾಶ್‌ ಧರ್ಮಸ್ಥಳ, ಲೋಕೇಶ ಹೆಬ್ಟಾರ್‌ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.

ಇಂಧನ ಇಲಾಖೆಯಲ್ಲಿ 5 ರಿಂದ 20 ವರ್ಷಗಳಿಂದ ದುಡಿಯುತ್ತಿರುವ ಗುತ್ತಿಗೆ ಕಾರ್ಮಿಕರನ್ನು ಖಾಯಂ ಮಾಡಲು ಆ.26ರಂದು ಶಾಸಕರಿಗೆ ಮನವಿ ನೀಡಲಾಗುವುದು. ಸೆ.4 ರಂದು ಮಂಗಳೂರಿನ ಮೆಸ್ಕಾಂ ಪ್ರಧಾನ ಕಚೇರಿಯ ಎದುರು 24 ಗಂಟೆಗಳ ನಿರಶನ ಸತ್ಯಾಗ್ರಹ ನಡೆಯಲಿದೆ. 3 ಹಂತದ ಚಳವಳಿಯ ಭಾಗವಾಗಿ ಸೆ.14ರಂದು ವಿಧಾನ ಸೌಧ ಮುತ್ತಿಗೆ ಕಾರ್ಯಕ್ರಮ ನಡೆಯಲಿದೆ ಎಂದು ಮುಖಂಡರಾದ ಪ್ರಕಾಶ್‌ ಧರ್ಮಸ್ಥಳ, ಲೋಕೇಶ ಹೆಬ್ಟಾರ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next