Advertisement
ಉರ್ವಸ್ಟೋರ್, ಕೊಟ್ಟಾರ, ಕೊಟ್ಟಾರ ಚೌಕಿ, ಲಾಲ್‌ಬಾಗ್ ಸಹಿತ ವಿವಿಧ ಕಡೆಗಳಲ್ಲಿ ರಸ್ತೆಯುಬ್ಬುಗಳಿಗೆ ಹಾಕಿದ ಬಿಳಿ ಬಣ್ಣಗಳು ಕಾಣದೆ ರಾತ್ರಿ ಹೊತ್ತಿನಲ್ಲಿ ಸಂಚರಿಸುವವರಿಗೆ ಅಪಾಯ ಉಂಟಾಗುವ ಸಂಭವವಿತ್ತು. ಅಲ್ಲದೆ, ಪಿವಿಎಸ್, ಬಂಟ್ಸ್‌ಹಾಸ್ಟೆಲ್, ಜ್ಯೋತಿ ವೃತ್ತ ಸೇರಿದಂತೆ ಪ್ರಮುಖ ಜಂಕ್ಷನ್‌ಗಳಲ್ಲಿ ಝೀಬ್ರಾ ಕ್ರಾಸಿಂಗ್ ಇದ್ದು, ಅವುಗಳಿಗೆ ಬಳಿದ ಬಿಳಿ ಬಣ್ಣವೂ ಮಾಸಿತ್ತು.
ಡಾಮರ್ ರಸ್ತೆಯುಬ್ಬುಗಳ ಬದಲಾಗಿ ನಗರದ ವಿವಿಧೆಡೆ ಹಾಕಿರುವ ರಂಬ್ಲಿರ್ (ರಬ್ಬರ್‌ನಿಂದ ಮಾಡಿರುವ ರಸ್ತೆಯುಬ್ಬು) ಅಲ್ಲಲ್ಲಿ ಎದ್ದು ಹೋಗಿದ್ದು, ಈ ಬಗ್ಗೆ ಸಂಚಾರಿ ಪೊಲೀಸ್ ಇಲಾಖೆ ಗಮನನೀಡುತ್ತಿಲ್ಲ. ರಂಬ್ಲಿರ್‌ಗಳ ಜೋಡಣೆಗೆ ಅಳವಡಿಸಿದ್ದ ಬೋಲ್ಟ್ ಗಳು ರಸ್ತೆಗಳಲ್ಲಿ ಉಳಿದುಕೊಂಡಿವೆ. ಇವುಗಳು ವಾಹನಗಳ ಚಕ್ರಗಳು ಸಿಲುಕಿ ಅಪಾಯ ಒಡ್ಡುವ ಸಂಭವ ಹೆಚ್ಚಿದೆ. ಅಷ್ಟೇ ಅಲ್ಲದೆ, ರೋಡ್ ಉಬ್ಬುಗಳಿಗೆ ಯಾವುದೇ ಅಳತೆಗೋಲು ಇಲ್ಲ ಎಂಬುದುದು ಸಾರ್ವಜನಿಕರ ಅಳಲು.