Advertisement

ಮಂಗಳೂರು ಪ್ರಕರಣ; ಅಸಲಿ ವ್ಯಕ್ತಿ ತುಮಕೂರಿನಲ್ಲಿ ಪತ್ತೆ

02:39 PM Nov 21, 2022 | Team Udayavani |

ತುಮಕೂರು: ಮಂಗಳೂರಿನಲ್ಲಿ ಆಟೋ ರಿಕ್ಷಾದೊಳಗೆ ಕುಕ್ಕರ್‌ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನಾ ಸ್ಥಳದಲ್ಲಿ ಸಿಕ್ಕಿರುವ ನಕಲಿ ಆಧಾರ್‌ ಕಾರ್ಡ್‌ನ ಅಸಲಿ ವ್ಯಕ್ತಿ ತುಮಕೂರಿನಲ್ಲಿ ಪತ್ತೆಯಾಗಿದ್ದಾನೆ.

Advertisement

ತುಮಕೂರಿನ ರೈಲ್ವೆ ಇಲಾಖೆಯಲ್ಲಿ ಟ್ರ್ಯಾಕ್‌ ಮ್ಯಾನ್‌ ಟ್ರೈನರ್‌ ಆಗಿ ಕೆಲಸ ಮಾಡುತಿದ್ದ ಪ್ರೇಮರಾಜ್‌ ಹುಟಗಿ ಅಸಲಿ ಆಧಾರ್‌ ಕಾರ್ಡ್‌ನ ವ್ಯಕ್ತಿ. ಮೂಲತಃ ಹುಬ್ಬಳಿಯ ಕೇಶವಾಪುರದ ಪ್ರೇಮರಾಜ್‌ ಹುಟಗಿ ತುಮಕೂರಿನಲ್ಲಿ ಕೆಲಸ ಮಾಡುತ್ತಿದ್ದ.

2 ಬಾರಿ ಆಧಾರ್‌ಕಳೆದಿದೆ: ತುಮಕೂರು ಸಮೀಪದ ಹಿರೇಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಪ್ರೇಮರಾಜ್‌ ಹುಟಗಿ, ಕಳೆದ ಎರಡು ವರ್ಷದಲ್ಲಿ 2 ಬಾರಿ ಆಧಾರ್‌ ಕಾರ್ಡ್‌ ಕಳೆದುಕೊಂಡಿರುವುದಾಗಿ ತಿಳಿಸಿದ್ದಾನೆ. ಧಾರವಾಡದಿಂದ ಬೆಳಗಾವಿಗೆ ಬಸ್‌ನಲ್ಲಿ ಬರುವಾಗ ಕಳೆದುಕೊಂಡಿದ್ದ. ಬಳಿಕ ಮತ್ತೂಂದು ಆಧಾರ್‌ ಕಾರ್ಡ್‌ ಪಡೆದಿದ್ದ. ಕಳೆದ ಆರು ತಿಂಗಳ ಹಿಂದೆ ಹುಬ್ಬಳ್ಳಿಯಿಂದ ಬಸ್‌ನಲ್ಲಿ ಬರುವಾಗ ಮತ್ತೂಮ್ಮೆ ಕಳೆದುಕೊಂಡಿರುವುದಾಗಿ ತಿಳಿಸಿದ್ದಾನೆ.

ಶನಿವಾರ ರಾತ್ರಿ ಕಾನೂನು ಸುವ್ಯವಸ್ಥೆ ಎಡಿಜಿಪಿ ಅಲೋಕ್‌ ಕುಮಾರ್‌ ಕರೆ ಮಾಡಿ ಕೂಡಲೇ ತುಮಕೂರು ಎಸ್‌ಪಿ ಸಂಪರ್ಕಿಸುವಂತೆ ಸೂಚನೆ ನೀಡಿದ್ದರು. ಅದರಂತೆ ಭಾನುವಾರ ಎಸ್‌ಪಿ ರಾಹುಲ್‌ ಕುಮಾರ್‌ ಶಹಪುರ್‌ ವಾಡ್‌ ಅವರನ್ನು ಪ್ರೇಮರಾಜ್‌ ಹುಟಗಿ ಸಂಪರ್ಕಿಸಿದ್ದಾನೆ.

ಉಗ್ರರ ಕೃತ್ಯ: ಸಿಎಂ
ಮಂಗಳೂರು ಬಾಂಬ್‌ ಬ್ಲಾಸ್ಟ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲ ಆಯಾಮಗಳಲ್ಲೂ ತನಿಖೆ ನಡೆಯುತ್ತಿದ್ದು, ಇದೊಂದು ಉಗ್ರರ ಕೃತ್ಯ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಘಟನೆಯಲ್ಲಿ ಗಾಯಗೊಂಡಿದ್ದ ಆಟೋ ಚಾಲಕ, ಪ್ರಯಾಣಿಕ ಇಬ್ಬರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಪೂರ್ಣ ಪ್ರಮಾಣದಲ್ಲಿ ತನಿಖೆ ನಡೆಸುತ್ತಿದ್ದಾರೆ ಎಂದರು.

Advertisement

ಘಟನೆ ಕುರಿತಂತೆ ಪ್ರಾಥಮಿಕ ತನಿಖೆಯಲ್ಲಿ ಅದೊಂದು ಎಲ್‌ಇಡಿ ಇನ್‌ಸ್ಟ್ರೆಮೆಂಟ್‌ ಆಗಿದೆ. ಆ ವ್ಯಕ್ತಿಯನ್ನು ಪರಿಶೋಧನೆ ಮಾಡಿದಾಗ ಆತನ ಆಧಾರ್‌ ಕಾರ್ಡ್‌ ಅವನದಲ್ಲ. ಹುಬ್ಬಳ್ಳಿ ವಿಳಾಸದಲ್ಲಿ ಆಧಾರ್‌ ತೆಗೆದುಕೊಂಡಿದ್ದಾನೆ. ಬೇರೆ ಬೇರೆ ಕಡೆ ಇರುವ ಬಗ್ಗೆ ಮಾಹಿತಿ ಬಂದಿದೆ. ಆತನ ನಿಜ ವಾದ ವಿಳಾಸ ಪಡೆದಾಗ ಹಲವಾರು ಮಾಹಿತಿಗಳು ಸಿಕ್ಕಿರುವುದ ರಿಂದ ಇದೊಂದು ಉಗ್ರರ ಕೃತ್ಯ ಎಂದು ಪ್ರಾಥಮಿಕ ಮಾಹಿತಿ ಯಿಂದ ಸ್ಪಷ್ಟವಾಗಿದೆ. ಈಗಾಗಲೇ ಎನ್‌ಐಎ, ಐಬಿ, ರಾಜ್ಯ ಪೊಲೀಸರು ಸುದೀರ್ಘ‌ವಾಗಿ ತನಿಖೆ ನಡೆಸುತ್ತಿದ್ದಾರೆ ಎಂದರು.

ಪ್ರಯಾಣಿಕನ ಕಾಲಿಗೆ ದೊಡ್ಡ ಪೆಟ್ಟು ಬಿದ್ದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಅವನು ಎಚ್ಚರವಾದ ಬಳಿಕ ಮುಂದಿನ ತನಿಖೆಗೆ ಅನುಕೂಲವಾಗಲಿದೆ. ಈಗಿರುವ ಮಾಹಿತಿಯಲ್ಲಿ ಅವನು ಓಡಾಡಿರುವ ಕೊಯಮತ್ತೂರು ಸೇರಿ ಬೇರೆ ಬೇರೆ ಕಡೆ ಹಲವಾರು ಜಾಗಗಳನ್ನು ನೋಡಿದಾಗ ಉಗ್ರರ ಸಂಪರ್ಕವಿದೆ ಎಂಬ ಸೂಚನೆಯನ್ನು ಪೊಲೀಸರು ನೀಡಿದ್ದಾರೆ. ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next