Advertisement
ನಗರದಲ್ಲಿ ಸದಾ ಟ್ರಾಫಿಕ್ ಒತ್ತಡದಿಂದ ಕೂಡಿರುವ ಲಾಲ್ಬಾಗ್ ಜಂಕ್ಷನ್ನಲ್ಲಿ ಈ ರೀತಿಯ ಸಮಸ್ಯೆ ಹೆಚ್ಚಾಗುತ್ತಿದೆ. ಲಾಲ್ಬಾಗ್ನಿಂದ ಬಿಜೈ ಕಡೆಗೆ ಸಂಚರಿಸುವ ಮಾರ್ಗದಲ್ಲಿ ಬಿಗ್ಜಾರ್ ಬಳಿ ಬಸ್ ತಂಗುದಾಣ ಇದೆ. ಲಾಲ್ಬಾಗ್ ಜಂಕ್ಷನ್, ಮಹಾನಗರ ಪಾಲಿಕೆ ಹಾಗೂ ಆಸುಪಾಸಿನಲ್ಲಿ ಕೆಲಸ ಕಾರ್ಯ ಇರುವವರು ಬಿಗ್ಬಜಾರ್ ಬಳಿ ಇಳಿದು ಮತ್ತೆ ನಡೆದುಕೊಂಡು ಹಿಂದಕ್ಕೆ ಬರಬೇಕು. ಈ ಕಾರಣಕ್ಕೆ ಬಹುತೇಕ ಮಂದಿ ಸಿಗ್ನಲ್ನಲ್ಲಿಯೇ ಇಳಿಯುತ್ತಾರೆ.
ನಗರದ ಪಿವಿಎಸ್ ಜಂಕ್ಷನ್ನಲ್ಲಿಯೂ ಇದೇ ರೀತಿ ಅಪಾಯ ವಲಯ ನಿರ್ಮಾಣವಾಗಿದೆ. ಪಿವಿಎಸ್ನಿಂದ ಕೆಲವು ವಾಹನಗಳು ನೇರವಾಗಿ ನವಭಾರತ ವೃತ್ತದತ್ತ ಸಾಗಿದರೆ, ಕೆಲವೊಂದು ವಾಹನ ಎಂ.ಜಿ. ರಸ್ತೆಗೆ ಸಾಗುತ್ತದೆ. ಜಂಕ್ಷನ್ ಬಳಿ ಬಸ್ ನಿಲ್ದಾಣ ಇದ್ದರೂ ಕೆಲವು ಬಸ್ ಅಲ್ಲಿ ನಿಲ್ಲದೆ, ಸಿಗ್ನಲ್ನಲ್ಲೇ ಬಸ್ ನಿಲ್ಲಿಸಿ ಪ್ರಯಾಣಿಕರನ್ನು ಬಸ್ಗೆ ಹತ್ತಿಸಿ, ಇಳಿಸುತ್ತಾರೆ. ಈ ರಸ್ತೆಯಲ್ಲಿ ಸಾಮಾನ್ಯವಾಗಿ ಉಡುಪಿ, ಕುಂದಾಪುರ ಕಡೆಗೆ ಸಾಗುವ ಬಸ್ಗಳಲ್ಲಿ ಪ್ರಯಾಣಿಕರು ಸಿಗ್ನಲ್ಗಳಲ್ಲಿಯೇ ಬಸ್ಗೆ ಹತ್ತುತ್ತಾರೆ. ಸಿಗ್ನಲ್ ತೆರೆದಿದ್ದರೆ ಸಿಗ್ನಲ್ ತಪ್ಪಿಸುವ ಉದ್ದೇಶಕ್ಕೆ ಉಪ್ಪಿನಂಗಡಿ, ಧರ್ಮಸ್ಥಳ, ಚಿಕ್ಕಮಗಳೂರು, ಬೆಂಗಳೂರು ಸಹಿತ ನಗರ ವ್ಯಾಪ್ತಿಯಿಂದ ಆಗಮಿಸುವ ಕೆಲವೊಂದು ಬಸ್ಗಳಲ್ಲಿ ಪಿವಿಎಸ್ ಸಿಗ್ನಲ್ ದಾಟಿ ಎಂ.ಜಿ. ರಸ್ತೆಯಲ್ಲಿ ನಿಲ್ಲಿಸುತ್ತಾರೆ. ಅಚಾನಕ್ ಆಗಿ ಬಸ್ ನಿಲ್ಲಿಸುವ ವೇಳೆ ಪ್ರಯಾಣಿಕರಿಗೆ ಹಿಂದಿನ ವಾಹನಗಳು ಅಪಾಯ ತಂದೊಡ್ಡುವ ಸಾಧ್ಯತೆ ಇದೆ.
Related Articles
ಹಂಪನಕಟ್ಟೆಯಲ್ಲಿ ಜಂಕ್ಷನ್ ಬಳಿ ಪ್ರಯಾಣಿ ಕರನ್ನು ಬಸ್ಗಳಿಗೆ ಹತ್ತಿಸುವ ವ್ಯವಸ್ಥೆ ಈ ಹಿಂದೆ ಇತ್ತು. ವಾಹನ ದಟ್ಟಣೆ ಉದ್ದೇಶಕ್ಕೆ ಕೆಲವು ವರ್ಷಗಳ ಹಿಂದೆ ಇಲ್ಲಿ ಬಸ್ ನಿಲುಗಡೆ ಸ್ಥಗಿತಗೊಳಿಸಲಾಗಿತ್ತು. ಆದರೂ ಸದ್ಯ ಇಲ್ಲಿನ ಜಂಕ್ಷನ್ನಲ್ಲೇ ಪ್ರಯಾಣಿಕರಿಗೆ ಬಸ್ ನಿಲ್ಲಿಸಲಾಗುತ್ತಿದೆ.
Advertisement
ಸ್ಮಾರ್ಟ್ ಸಿಗ್ನಲ್; ಸಮಸ್ಯೆನಗರದ ಹಲವು ಜಂಕ್ಷನ್ಗಳಲ್ಲಿ ಸ್ಮಾರ್ಟ್ ಸಿಗ್ನಲ್ ಅಳವಡಿಸಲಾಗಿದೆ. ಇದರಲ್ಲಿ ಸಿಗ್ನಲ್ ಬದಲಾವಣೆಯ ಸೂಚನೆ ಕೊನೆಯ 5 ಸೆಕೆಂಡ್ ಇರುವಾಗ ಬರುತ್ತದೆ. ಜಂಕ್ಷನ್ಗಳಲ್ಲಿ ನಿಂತ ವಾಹನಗಳು ಸಿದ್ಧಗೊಳ್ಳಲು ಸಮಯ ಇರದ ಕಾರಣ, ಈ ರೀತಿ ಸಿಗ್ನಲ್ನಲ್ಲಿ ಪ್ರಯಾಣಿಕರನ್ನು ಇಳಿಸುವುದರಿಂದ ಅಪಘಾತ ಉಂಟಾಗುವ ಸಾಧ್ಯತೆ ಎದುರಾಗಿದೆ.