Advertisement
ಕಾರ್ಯಕ್ರಮವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖಾಧಿಕಾರಿ ರಶ್ಮಿ ಉದ್ಘಾಟಿಸಿ, ಎದೆಹಾಲು ಕುಡಿಸುವಂತತಾಯಿಯರಲ್ಲಿ ಬ್ರೆಸ್ಟ್ ಕ್ಯಾನ್ಸರ್ ತುಂಬಾ ಕಡಿಮೆಯಾಗಿರುತ್ತದೆ. ತಾಯಿ ಮಗುವಿನ ಬಾಂಧವ್ಯ ಜಾಸ್ತಿಯಾಗುತ್ತದೆ. ಈಗಿನವರು
ಒಂದು ಕೈಯಲ್ಲಿ ಮೊಬೈಲ್‌ನಲ್ಲಿ ಮಗ್ನರಾಗಿ ಮಗು ಸರಿಯಾಗಿ ಹಾಲು ಕುಡಿಯುತ್ತಿದೆಯೋ ಇಲ್ಲ ಎನ್ನುವುದರ ಗಮನ ಇಲ್ಲದೆ, ಮಗುವಿಗೆ ತಾಯಿಯ ಸ್ಪರ್ಶ ಕಡಿಮೆಯಾಗುತ್ತಿದೆ ಎಂದರು.
ಆಹಾರ ಪದ್ಧತಿ ವಿರಳವಾಗಿದೆ. ಸರಕಾರದ ಎಲ್ಲ ಯೋಜನೆಗಳನ್ನು ತಾಯಿಯಂದಿರು ಸಮರ್ಪಕವಾಗಿ ಬಳಸಿಕೊಳ್ಳಬೇಕು. ತಾಯಿ ಹಾಲು ಉಣಿಸುವಾಗ ಆದಷ್ಟು ಮೊಬೈಲ್ ನಿಂದ ದೂರ ಇದ್ದು ಪುಸ್ತಕಗಳ ಪ್ರೀತಿ ಬೆಳೆಸಬೇಕು. ಆಗ ಮಕ್ಕಳು ಭವಿಷ್ಯದಲ್ಲಿ ಉತ್ತಮ ಪ್ರಜೆಯಾಗಿ ಆರೋಗ್ಯವಂತ ಮನಃ ಸ್ಥಿತಿಯಿಂದ ಬೆಳೆಯಲು ಸಾಧ್ಯ ಎಂದರು. ಎಕ್ಕೂರು ಪ್ರಾಥಮಿಕ ಕೇಂದ್ರದ ವೈದ್ಯೆ ಡಾ| ರೆಹನಾ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಸಿ.ಡಿ.ಪಿ.ಒ. ಶ್ವೇತಾ,
ಕಣ್ಣೂರು ವಲಯ ಅಂಗನವಾಡಿ ಮೇಲ್ವಿಚಾರಕಿ ಅನುಪಮಾ, ಬಜಾಲ್ ಪಕಲಡ್ಕ ಯುವಕ ಮಂಡಲ ಶಿಕ್ಷಕಿ ಆಶಾ, ಸಹಾ
ಯಕಿ ತುಳಸಿ, ಜಪ್ಪಿನಮೊಗರು ಯುವಕ ಮಂಡಲ ಅಂಗನವಾಡಿ ಶಿಕ್ಷಕಿ ಪವಿತ್ರಾ, ಇತರ ಅಂಗನವಾಡಿ ಶಿಕ್ಷಕರು ಮೊದ ಲಾ ದವರು ಉಪಸ್ಥಿತರಿದ್ದರು. ವಿವಿಧ ಆಟಿಯ ಖಾದ್ಯ ವಿತರಿಸಲಾಯಿತು.