Advertisement

ಮಂಗಳೂರು-ಬೆಂಗಳೂರು ಗ್ರೀನ್‌ಫೀಲ್ಡ್‌ ಹೈಸ್ಪೀಡ್‌ ಕಾರಿಡಾರ್‌- ಉಸ್ತುವಾರಿ ಸಚಿವರಿಂದ ಚರ್ಚೆ

01:54 AM Nov 10, 2023 | Team Udayavani |

ಮಂಗಳೂರು: ಬೆಂಗಳೂರು- ಮಂಗಳೂರು ಇಂಟಿಗ್ರೇಟೆಡ್‌ ಗ್ರೀನ್‌ ಫೀಲ್ಡ್‌ ಹೈ ಸ್ಪೀಡ್‌ ಕಾರಿಡಾರ್‌ ನಿರ್ಮಾಣ ಕುರಿತಂತೆ ಯುರೋಪಿಯನ್‌ ಬ್ಯುಸಿನೆಸ್‌ ಆ್ಯಂಡ್‌ ಟೆಕ್ನಾಲಜಿ ಸಂಸ್ಥೆಯ ಮುಖ್ಯಸ್ಥರು ಗುರುವಾರ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಅವರೊಂದಿಗೆ ಚರ್ಚೆ ನಡೆಸಿದರು. ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಟಾಳ್ಕರ್‌ ಪಾಲ್ಗೊಂಡಿದ್ದರು.
ಮಂಗಳೂರು-ಬೆಂಗಳೂರು ಹಸುರು ವಲಯ ಹೈ ಸ್ಪೀಡ್‌ ಕಾರಿಡಾರ್‌ ಮಂಗಳೂರು ಅಭಿವೃದ್ಧಿಯ ಜತೆಗೆ ಮಾರ್ಗ ಮಧ್ಯೆ ಬರುವ ಇತರ ನಗರಗಳ ಅಭಿವೃದ್ಧಿಗೆ ಹೆಚ್ಚು ಸಹಕಾರಿಯಾಗಲಿದೆ. 6ರಿಂದ 8 ಲೈನ್‌ ಹೈಸ್ಪೀಡ್‌ ಕಾರಿಡಾರ್‌ ನಿರ್ಮಾಣಕ್ಕೆ ಯೋಜಿಸಲಾಗಿದ್ದ, ಪ್ರಾರಂಭಿಕ ಹಂತವಾಗಿ ಸಚಿವರೊಂದಿಗೆ ಸಂಸ್ಥೆಯ ವರು ಚರ್ಚೆ ನಡೆಸಿದರು.

Advertisement

ಹೈಸ್ಪೀಡ್‌ ಕಾರಿಡಾರ್‌ ಮಂಗಳೂರಿಗೆ ಹೆಚ್ಚಿನ ಬಂಡವಾಳ ತರುವಲ್ಲಿ ಸಹಕಾರಿಯಾಗಲಿದೆ ಎಂದು ದಿನೇಶ್‌ ಗುಂಡೂರಾವ್‌ ಅಭಿಪ್ರಾಯ ವ್ಯಕ್ತಪಡಿಸಿದರು. ಕಾರಿಡಾರ್‌ ಮಂಗಳೂರು ಬಂದರಿಗೂ ಸಂಪರ್ಕ ಕಲ್ಪಿಸುವುದರಿಂದ ವ್ಯಾಪಾರ ಉದ್ಯಮಗಳ ಬೆಳವಣಿಗೂ ನೆರವಾಗಲಿದೆ ಎಂದರು.

ಕಾರಿಡಾರ್‌ ರೂಟ್‌ ಮ್ಯಾಪ್‌ ಸಮೇತ ಹೆಚ್ಚಿನ ಮಾಹಿತಿಯೊಂದಿಗೆ ಚರ್ಚಿಸುವ ಅಗತ್ಯ ಇದೆ. ಈ ನಿಟ್ಟಿನಲ್ಲಿ ಲೋಕೊಪಯೋಗಿ ಸಚಿವರು ಹಾಗೂ ಮುಖ್ಯಮಂತ್ರಿಗಳ ಜತೆ ಮಾತುಕತೆ ನಡೆಸುವುದಾಗಿ ಸಚಿವರು ಭರವಸೆ ನೀಡಿದರು. ಮಂಗಳೂರು ಸುಸ್ಥಿರ ಅಭಿವೃದ್ಧಿಗೆ ಸಹಾಯಕವಾಗುವ ಇಂತಹ ಯೋಜನೆಗಳನ್ನು ರಾಜ್ಯ ಸರಕಾರ ಪ್ರೋತ್ಸಾಹಿಸಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next