Advertisement

ಬದಲಾಗಲಿದೆ ಮಂಗಳೂರು ಏರ್‌ಪೋರ್ಟ್‌ ಗೆಟಪ್‌

10:34 AM Sep 16, 2018 | Team Udayavani |

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 132.24 ಕೋ.ರೂ. ವೆಚ್ಚದಲ್ಲಿ ಟರ್ಮಿನಲ್‌ ವಿಸ್ತರಣೆ ಪ್ರಗತಿಯಲ್ಲಿದ್ದು, 2020ರ ಎಪ್ರಿಲ್‌ಗೆ ಪೂರ್ಣಗೊಳ್ಳಲಿದೆ ಎಂದು ಭಾರತೀಯ ವಿಮಾನನಿಲ್ದಾಣ ಪ್ರಾಧಿಕಾರ ದ. ವಿಭಾಗದ ಕಾರ್ಯ ನಿರ್ವಾಹಕ ನಿರ್ದೇಶಕ ಶ್ರೀಕುಮಾರ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Advertisement

ಈಗಿರುವ ಟರ್ಮಿನಲ್‌ ಕಟ್ಟಡಕ್ಕೆ 10,000 ಚ.ಮೀ. ಸೇರ್ಪಡೆ ಆಗಲಿದೆ. ಯೋಜನೆ ಪೂರ್ಣಗೊಂಡಾಗ ವಿಸ್ತೀರ್ಣ 38,000 ಚ.ಮೀ.ಗೆ ಏರಿಕೆ ಆಗಲಿದೆ. ಹೆಚ್ಚುವರಿಯಾಗಿ 2 ಪ್ರಯಾಣಿಕರ ಬೋರ್ಡಿಂಗ್‌ ಬ್ರಿಜ್‌, ಪ್ರತ್ಯೇಕ ವೀಸಾ ಕೌಂಟರ್‌ ಬರಲಿವೆ. ಕಾರು ಪಾರ್ಕ್‌ ಲೆವೆಲ್‌ನಲ್ಲಿ ಪ್ರಯಾಣಿಕರ ಆಗಮನ ಹಾಲ್‌ ಇರಲಿದೆ. ಮೇಲಿನ ಅಂತಸ್ತು ನಿರ್ಗ ಮನಕ್ಕೆ ಮೀಸಲಿರುತ್ತದೆ ಎಂದರು.

121 ಕೋ.ರೂ. ವೆಚ್ಚದಲ್ಲಿ ರನ್‌ವೇ
ಸುರಕ್ಷತಾ ಬೇಸಿಕ್‌ ಸ್ಟ್ರಿಪ್‌ ಅಗಲ ಗೊಳಿಸುವ ಹಾಗೂ ಪರ್ಯಾಯ ಟ್ಯಾಕ್ಸಿ ಟ್ರಾಕ್‌ ಹಂತ 2 ಯೋಜನೆ ರೂಪಿಸಲಾಗಿದೆ. 2019ರ ಆಗಸ್ಟ್‌ ನಲ್ಲಿ ಪೂರ್ಣಗೊಳಿಸುವ ಗುರಿ ಇದೆ. ಬಳಿಕ ವಿಮಾನಗಳ ನಿರ್ವಹಣೆ ಸಾಮರ್ಥ್ಯ 20ಕ್ಕೆ ಹೆಚ್ಚಲಿದೆ. 7 ಕೋ.ರೂ. ವೆಚ್ಚದಲ್ಲಿ ವಿಮಾನ ನಿಲುಗಡೆ ತಾಣ ವಿಸ್ತರಣೆಯಾಗುತ್ತಿದೆ. ರಾತ್ರಿಯೂ  ನಿಲುಗಡೆ ಸೌಲಭ್ಯ ಸಿಗಲಿದೆ ಎಂದರು. ವಿಮಾನ ನಿಲ್ದಾಣದ ನಿರ್ದೇಶಕ ವಿ.ವಿ. ರಾವ್‌ ಉಪಸ್ಥಿತರಿದ್ದರು.

6.75 ಕೋ.ರೂ. ಚರಂಡಿ ಕಾಮಗಾರಿಗೆ ಒಪ್ಪಂದ
ಮಂಗಳೂರು:
ಕೊಳಂಬೆ, ಆದ್ಯಪಾಡಿ ಮತ್ತು ಮಳವೂರು ಗ್ರಾಮಗಳಲ್ಲಿ 6.75 ಕೋ.ರೂ. ಅಂದಾಜು ಮೊತ್ತದ ಶಾಶ್ವತ ಚರಂಡಿ ಕಾಮಗಾರಿ ನಡೆಸಲು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಮತ್ತು ಜಿಲ್ಲಾಡಳಿತ ಜಂಟಿ ಒಪ್ಪಂದಕ್ಕೆ ಶುಕ್ರವಾರ ಸಹಿ ಮಾಡಿವೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಮಾನ ನಿಲ್ದಾಣ ಪ್ರಾಧಿಕಾರದ ಪರವಾಗಿ ಪ್ರಾಧಿಕಾರದ ದಕ್ಷಿಣ ಪ್ರಾದೇಶಿಕ ಕಾರ್ಯನಿರ್ವಾಹಕ ನಿರ್ದೇಶಕ ಶ್ರೀಕುಮಾರ್‌ ಮತ್ತು ಅಪರ ಜಿಲ್ಲಾಧಿಕಾರಿ ಕುಮಾರ್‌ ಒಪ್ಪಂದಕ್ಕೆ ಸಹಿ ಮಾಡಿದರು.

Advertisement

ಸಚಿವ ಯು.ಟಿ. ಖಾದರ್‌, ಸಂಸದ ನಳಿನ್‌ ಕುಮಾರ್‌ ಕಟೀಲು, ಶಾಸಕ ಉಮಾನಾಥ ಕೋಟ್ಯಾನ್‌, ದ.ಕ. ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಮಂಗಳೂರು ತಾ.ಪಂ. ಅಧ್ಯಕ್ಷ ಮೊಹಮ್ಮದ್‌ ಮೋನು, ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರದ ನಿರ್ದೇಶಕ ವೆಂಕಟೇಶ್ವರ ರಾವ್‌, ಜಂಟಿ ನಿರ್ದೇಶಕ ಅನುಬಾಷು ಉಪಸ್ಥಿತರಿದ್ದರು.

ಪ್ರಯಾಣಿಕರ ಸಂಖ್ಯೆ 3 ಪಟ್ಟು ಹೆಚ್ಚಳ
ವಿಮಾನ ನಿಲ್ದಾಣದಲ್ಲಿ 2012 ರಲ್ಲಿ ಇದ್ದ 7.5 ಲಕ್ಷ ಪ್ರಯಾಣಿಕರ ಸಂಖ್ಯೆ 2017-18ನೇ ಸಾಲಿನಲ್ಲಿ 23.5 ಲಕ್ಷಕ್ಕೆ – ಮೂರು ಪಟ್ಟು ಏರಿಕೆಯಾಗಿದೆ. 2016-17ರಲ್ಲಿದ್ದ 8.67 ಮೆ. ಟನ್‌ ಕಾರ್ಗೊ ನಿರ್ವ ಹಣೆ 2017-18ರಲ್ಲಿ 2,338 ಮೆ.ಟನ್‌ಗೆ- ನೂರಕ್ಕೂ ಅಧಿಕ ಪಟ್ಟು ಹೆಚ್ಚಳವಾಗಿದೆ. ಪ್ರಸಕ್ತ ಆರ್ಥಿಕ ಸಾಲಿನಲ್ಲಿ ಇದು 4,000 ಮೆ.ಟನ್‌ಗೆàರುವ ನಿರೀಕ್ಷೆ ಇದೆ. ವಿಶ್ವದರ್ಜೆ ರ್‍ಯಾಂಕಿಂಗ್‌ನಲ್ಲಿ ಮಂಗಳೂರು ವಿಮಾನ ನಿಲ್ದಾಣ 30ನೇ ಸ್ಥಾನದಲ್ಲಿದ್ದು, ಇದನ್ನು 10ಕ್ಕೆ ಹಾಗೂ ಭಾರತದಲ್ಲಿ ಒಂದನೇ ಸ್ಥಾನಕ್ಕೇರಿಸುವ ಗುರಿ ಇರಿಸಿಕೊಳ್ಳ ಲಾಗಿದೆ ಎಂದು ಶ್ರೀಕುಮಾರ್‌ ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next