Advertisement
30 ವರ್ಷಗಳ ಬಳಿಕ ಮಂಡ್ಯದಲ್ಲಿ ನಡೆಯುತ್ತಿರುವ ಸಾಹಿತ್ಯಸಮ್ಮೇಳನದಲ್ಲಿ ಇದೇ ಮೊದಲ ಬಾರಿಗೆ 18 ದೇಶಗಳ ಸುಮಾರು 200ಕ್ಕೂ ಹೆಚ್ಚು ವಿದೇಶಿ ಮೂಲದ ಕನ್ನಡಿಗರು ಭಾಗವಹಿಸುತ್ತಿರುವುದು ವಿಶೇಷ.
ಸಮ್ಮೇಳನಾಧ್ಯಕ್ಷರಾದ ಗೊ.ರು.ಚನ್ನಬಸಪ್ಪ ಅವರು ಗುರುವಾರ ಸಂಜೆ ಮಂಡ್ಯಕ್ಕೆ ಆಗಮಿಸಲಿದ್ದಾರೆ. ಡಿ. 20ರ ಶುಕ್ರವಾರ ಬೆಳಗ್ಗೆ 6ಕ್ಕೆ ಧ್ವಜಾರೋಹಣ ನೆರವೇರಲಿದ್ದು, 7 ಗಂಟೆಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಆರಂಭವಾಗಲಿದೆ.
Related Articles
Advertisement
ಶಬ್ದಕೋಶ ಕರ್ತೃ ಕಿಟಲ್ ವಂಶಸ್ಥರು ಭಾಗಿಸಮ್ಮೇಳನಕ್ಕೆ ಇದೇ ಮೊದಲ ಬಾರಿಗೆ 18 ದೇಶಗಳ ಸುಮಾರು 200ಕ್ಕೂ ಹೆಚ್ಚು ವಿದೇಶಿ ಮೂಲದ ಕನ್ನಡಿಗರು ಭಾಗವಹಿಸುತ್ತಿರುವುದು ವಿಶೇಷ. ಅಮೆರಿಕ, ಯುರೋಪ್, ಗಲ್ಫ್, ಏಷ್ಯಾ ಪೆಸಿಫಿಕ್, ಆಸ್ಟ್ರೇಲಿಯಾ, ಉಕ್ರೇನ್, ರಷ್ಯಾ ಸೇರಿದಂತೆ ನಾನಾ ದೇಶಗಳ ವಿದೇಶಿ ಕನ್ನಡಿಗರು ಆಗಮಿಸುತ್ತಿದ್ದಾರೆ. ಪುತಿನ ಅವರ ಪುತ್ರಿ ಅಲಮೇಲು, ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪಕರಲ್ಲೊಬ್ಬರಾದ ಕರ್ಪೂರ ಶ್ರೀನಿವಾಸ ರಾವ್ ಅವರ ಮೊಮ್ಮಗಳು ನಿರ್ಮಲಾ ಕರ್ಪೂರ, ಕನ್ನಡದ ಮೊಟ್ಟ ಮೊದಲ ಶಬ್ದಕೋಶದ ಕರ್ತೃ ಫರ್ಡಿನೆಂಡ್ ಕಿಟಲ್ ಅವರ ವಂಶಸ್ಥರು ಬರುತ್ತಿರುವುದು ವಿಶೇಷ. ಈ ವೇಳೆ ವಿದೇಶಿ ನೆಲದಲ್ಲಿ ಕನ್ನಡಕ್ಕಾಗಿ ಶ್ರಮಿಸಿದ 21 ವಿದೇಶಿ ಕನ್ನಡಿಗರನ್ನು ಸಮ್ಮಾನಿಸಲಾಗುತ್ತಿದೆ.