Advertisement

ಮಂಡ್ಯ: ಕೋವಿಡ್‌ 19ನಿಂದ ಓರ್ವನ ಸಾವು

05:46 AM Jul 08, 2020 | Lakshmi GovindaRaj |

ಮದ್ದೂರು: ಪಟ್ಟಣದ ಲೀಲಾವತಿ ಬಡಾವಣೆಯ ನಿವಾಸಿಯೊಬ್ಬರು ಕೋವಿಡ್‌ 19 ಸೋಂಕಿನಿಂದ ಮೃತಪಟ್ಟಿದ್ದು, ಇದು ಮಂಡ್ಯ ಜಿಲ್ಲೆಯಲ್ಲಿಯೇ ಕೋವಿಡ್‌ -19 ಪ್ರಕರಣದ ಮೊದಲ ಬಲಿಯಾಗಿದೆ. ಮದ್ದೂರು ಪಟ್ಟಣದ ಲೀಲಾವತಿ  ಬಡಾವಣೆ ನಿವಾಸಿ 53 ವರ್ಷದ ಮಹಮದ್‌ ಸಲೀಮ್‌ ಕೋವಿಡ್‌ -19ಗೆ ಬಲಿಯಾದ ವ್ಯಕ್ತಿ. ಮೃತರು ಮದ್ದೂರು ಎಪಿಎಂಸಿ ಎಳನೀರು ಮಾರುಕಟ್ಟೆಯ ಸಗಟು ವ್ಯಾಪಾರಿಯಾಗಿದ್ದು, ಕಳೆದ ನಾಲ್ಕು ದಿನಗಳ ಹಿಂದೆ ತೀವ್ರ ಜ್ವರ ಹಾಗೂ  ನರ ರೋಗದ ಹಿನ್ನೆಲೆಯಲ್ಲಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿರುವುದಾಗಿ ತಿಳಿದುಬಂದಿದೆ.

Advertisement

ಸೋಂಕು ಇರುವುದು ದೃಢ: ಇವರು ನರ ರೋಗ ಸಂಬಂಧಿ ಮೂರ್ಚೆ ರೋಗ ವ್ಯಾದಿಯಿಂದ ಬಳಲುತ್ತಿದ್ದರು. ಗಂಟಲಿನ ದ್ರವ ಮಾದರಿ ಸಂಗ್ರಹಿಸಿ, ಪರೀಕ್ಷೆಗೆ ಕಳುಹಿಸಿದ ವೇಳೆ ಕೋವಿಡ್‌ 19 ಸೋಂಕು ಇರುವುದು ಖಾತ್ರಿಯಾದ  ಹಿನ್ನೆಲೆಯಲ್ಲಿ ರೋಗಿಯೂ ಮೂಲತಃ ಮಂಡ್ಯ ಜಿಲ್ಲೆಯಾವರಾಗಿದ್ದರಿಂದ ಅವರನ್ನು ಮೈಸೂರಿನಿಂದ ಮಂಡ್ಯ ಜಿಲ್ಲಾಸ್ಪತ್ರೆ (ಕೋವಿಡ್‌-19) ರವಾನಿಸಲು ಸೂಚಿಸಿದ್ದಾರೆ. ಮೃತ ಸಲೀಮ್‌ ಅವರನ್ನು ಮಂಡ್ಯದ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ  ಎಂದು ಕರೆ ತರುವ ಮಾರ್ಗಮಧ್ಯೆ ಅಸುನೀಗಿರುವು ದ್ದು, ಮೃತರ ಶವವನ್ನು ಮಂಡ್ಯದ ಶವಗಾರದಲ್ಲಿ ಇರಿಸಲಾಗಿದೆ.

ಸಂಪರ್ಕಿತರು ಕ್ವಾರಂಟೈನ್‌: ಮೃತರ ಪತ್ನಿ ಸಹೋದರ ಹಾಗೂ ಅವರ ಸಂಪರ್ಕದಲ್ಲಿದ್ದ ಮದ್ದೂರು ಪಟ್ಟಣದ ವ್ಯಕ್ತಿಯೋರ್ವ ನನ್ನು ಮುಂಜಾಗ್ರತಾ ಕ್ರಮವಾಗಿ ಮಂಡ್ಯದ ಕ್ವಾರಂಟೈನ್‌ ಕೇಂದ್ರದಲ್ಲಿ ಇರಿಸಲಾಗಿದೆ. ಮೃತ ವ್ಯಕ್ತಿಯ  ಮದ್ದೂರು ನಿವಾಸವನ್ನು ಸೀಲ್‌ಡೌನ್‌ ಮಾಡಲು ಸ್ಥಳೀಯ ಅಧಿಕಾರಿಗಳು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next