Advertisement
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೌತಮ್ ಬಗಾದಿ ಭಾನುವಾರ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಅವರಿಂದ ಮೈಸೂರು ಜಿಲ್ಲೆಗೆ ಒಳ್ಳೆಯದಾಗಲಿ. ಜಿಲ್ಲೆಯ ಕೆಲಸಗಳು ಸರಾಗವಾಗಿ ನಡೆಯಲಿ. ಈ ಬಗ್ಗೆ ನಾನು ಹೆಚ್ಚು ಮಾತನಾಡುವುದು ಸರಿಯಲ್ಲ. ಆದರೂ ಪತಿ ಗೌತಮ್ ಜಿಲ್ಲಾಧಿಕಾರಿಯಾಗಿ ಬಂದಿರುವುದರಿಂದ ಅವರಿಂದ ಮೈಸೂರು ಜಿಲ್ಲೆಯ ಜನಕ್ಕೆ ಒಳಿತಾಗಬೇಕೆಂಬುದು ನನ್ನ ಆಶಯ ಎಂದರು.
Related Articles
Advertisement
ಪತಿ-ಪತ್ನಿ ಡಿಸಿ ಆಗಿದ್ದು ಮೊದಲೇನಲ್ಲ: ಮೈಸೂರು ಹಾಗೂ ಮಂಡ್ಯ ಜಿಲ್ಲೆಗೆ ಪತಿ ಹಾಗೂ ಪತ್ನಿ ಜಿಲ್ಲಾಧಿಕಾರಿಯಾಗಿ ಒಟ್ಟಿಗೆ ಕೆಲಸ ನಿರ್ವಹಿಸಿದ್ದು, ಇದು ಮೊದಲೇನಲ್ಲ. ನಾಲ್ಕು ವರ್ಷಗಳ ಹಿಂದೆ ಶಿಖಾ ಮೈಸೂರು ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದರೆ ಅವರ ಪತಿ ಡಾ.ಅಜಯ್ ನಾಗಭೂಷಣ್ ಮಂಡ್ಯ ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದರು. ಆದರೆ ಇದೀಗ ಅಶ್ವಥಿ ಹಾಗೂ ಗೌತಮ್ ಬಗಾದಿ ಪತಿ-ಪತ್ನಿ ಜಿಲ್ಲಾಧಿಕಾರಿಯಾಗಿ ಕೆಲಸ ನಿರ್ವಹಿಸುವ ಅವಕಾಶ ಸಿಕ್ಕಿದೆ.
ಇದರಲ್ಲಿ ಶಿಖಾ ಅವರ ಪತಿ ಡಾ.ಅಜಯ್ ನಾಗಭೂಷಣ್ ಹಾಗೂ ಅಶ್ವಥಿ ಪತಿ ಡಾ.ಗೌತಮ್ ಬಗಾದಿ ಇಬ್ಬರೂ ವೈದ್ಯಕೀಯ ಶಿಕ್ಷಣ ಪಡೆದಿರುವುದು ವಿಶೇಷ.