ಮಂಡ್ಯ: ಭಾನುವಾರ ಮಂಡ್ಯ ಜಿಲ್ಲೆಗೆ ಕರಾಳವಾಗಿದ್ದು, ಕೊರೊನಾ ಸೋಂಕು ತ್ರಿಶತಕ ಬಾರಿಸಿದರೆ, ಸಕ್ರಿಯ ಪ್ರಕರಣಗಳು ಒಂದು ಸಾವಿರದ ಗಡಿ ದಾಟಿದೆ. ಒಂದೇ ದಿನ 338 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಮತ್ತೊಬ್ಬ ವೃದ್ಧ ಸೋಂಕಿನಿoದ ಮೃತಪಟ್ಟಿದ್ದಾರೆ.
65 ವರ್ಷದ ವೃದ್ಧರೊಬ್ಬರು ಕೊರೊನಾ ಸೋಂಕಿನ ಜತೆಗೆ ತೀವ್ರ ಉಸಿರಾಟದ ತೊಂದರೆ, ಕೆಮ್ಮು, ಜ್ವರದಿಂದ ಬಳಲುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇದರಿಂದ ಮೃತರ ಸಂಖ್ಯೆ 167ಕ್ಕೇರಿದೆ.
ಜಿಲ್ಲೆಯಲ್ಲಿ ಭಾನುವಾರ 338 ಮಂದಿಗೆ ಕೊರೊನಾ ಸೋಂಕು ಆವರಿಸಿದೆ. ಮಂಡ್ಯ 157, ಮದ್ದೂರು 52, ಮಳವಳ್ಳಿ 32, ಪಾಂಡವಪುರ 30, ಶ್ರೀರಂಗಪಟ್ಟಣ 29, ಕೆ.ಆರ್.ಪೇಟೆ 3, ನಾಗಮಂಗಲ 29 ಹಾಗೂ ಹೊರ ಜಿಲ್ಲೆಯ 6 ಮಂದಿಗೆ ಸೋಂಕು ದೃಢಪಟ್ಟಿದೆ. ಇದುವರೆಗೂ ಜಿಲ್ಲೆಯಾದ್ಯಂತ 21983 ಪ್ರಕರಣಗಳು ದಾಖಲಾಗಿದೆ. 82 ಮಂದಿ ಸೋಂಕಿನಿoದ ಗುಣಮುಖರಾಗಿ ಬಿಡುಗಡೆಯಾಗಿದ್ದು, ಇದುವರೆಗೂ 20580 ಮಂದಿ ಚೇತರಿಸಿಕೊಂಡಿದ್ದಾರೆ.
ಜಿಲ್ಲೆಯಾದ್ಯಂತ 1236 ಸಕ್ರಿಯ ಪ್ರಕರಣಗಳಿದ್ದು, ಇದರಲ್ಲಿ 305 ಸರ್ಕಾರಿ ಆಸ್ಪತ್ರೆ, 6 ಖಾಸಗಿ ಆಸ್ಪತ್ರೆ, 228 ಮಂದಿ ಕೋವಿಡ್ ಕೇರ್ ಸೆಂಟರ್ ಹಾಗೂ 697 ಮಂದಿ ಮನೆಗಳಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ :ಐಸಿಯು ಬೆಡ್ ಗಾಗಿ ಆಕ್ಸಿಜನ್ ಸಿಲಿಂಡರ್ ನೊಂದಿಗೆ ಆಟೋದಲ್ಲಿ ಆಸ್ಪತ್ರೆಗೆ ಅಲೆದಾಡಿದ ಮಹಿಳೆ
6 ಲಕ್ಷ ದಾಟಿದ ಪರೀಕ್ಷೆ:
ಜಿಲ್ಲೆಯಾದ್ಯಂತ ಕೊರೊನಾ ಸೋಂಕಿನ ಪರೀಕ್ಷೆ 6 ಲಕ್ಷ ದಾಟಿದೆ. ಇದುವರೆಗೂ 6,01,935 ಮಂದಿ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಭಾನುವಾರ 1921 ಮಂದಿಗೆ ಪರೀಕ್ಷೆ ನಡೆಸಲಾಗಿದೆ. ಅದರಲ್ಲಿ 1715 ಆರ್‌ಟಿಪಿಸಿಆರ್ ಹಾಗೂ 206 ಮಂದಿಗೆ ರ‍್ಯಾಪಿಡ್ ಪರೀಕ್ಷೆ ಮಾಡಿಸಿಕೊಂಡಿದ್ದಾರೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.