ಮಂಡ್ಯ: ನಾಟಕದ ವೇಳೆ ಪಾತ್ರಧಾರಿಯ ಮೈಮೇಲೆ ಚಾಮುಂಡಿ ದೇವಿಯ ಆವಾಹನೆಯಾಗಿರುವ ಸನ್ನಿವೇಶ ಮಂಡ್ಯದ ಕಲಾಮಂದಿರದಲ್ಲಿ ಫೆ. 6ರಂದು ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ನಗರದ ಕಲಾಮಂದಿರದಲ್ಲಿ ಫೆ. 6ರಂದು ಕೌಂಡಲಿಕನ ವಧೆ ನಾಟಕ ನಡೆಯುತ್ತಿದ್ದ ಸಂದರ್ಭದಲ್ಲಿ ಚಾಮುಂಡಿ ತಾಯಿ ಪಾತ್ರಧಾರಿ ಕೌಂಡಲಿಕ ರಾಕ್ಷಸ ಸಂಸಾರ ಸನ್ನಿವೇಶದ ವೇಳೆ ರಾಕ್ಷಸ ಪಾತ್ರಧಾರಿ ಮೇಲೆ ಹಲ್ಲೆ ಮಾಡಲು ಮುಂದಾಗಿರುವ ದೃಶ್ಯವನ್ನು ಅಲ್ಲೆ ಇದ್ದ ಪ್ರೇಕ್ಷಕರು ಸೆರೆ ಹಿಡಿದಿದ್ದಾರೆ.
ನಟನೆ ವೇಳೆ ಚಾಮುಂಡಿ ಪಾತ್ರಧಾರಿ ಮೇಲೆ ದೇವಿಯ ಆವಾಹನೆ ಯಾಗಿದೆ ಎನ್ನಲಾಗುತ್ತಿದ್ದು, ಕೌಂಡಲಿಕನ ಪಾತ್ರಧಾರಿಯನ್ನು ನಿಜವಾಗಿ ಕೊಲ್ಲಲು ಚಾಮುಂಡಿ ಪಾತ್ರಧಾರಿ ಮುಂದಾದಾಗ ಅಲ್ಲೇ ಇದ್ದ ಪ್ರೇಕ್ಷಕರು ಪಾತ್ರಧಾರಿಯನ್ನ ತಡೆದಿದ್ದಾರೆ.
ಇದನ್ನೂ ಓದಿ:ಆಟೋವೇ ಅರಮನೆ : ಮೊಮ್ಮಕ್ಕಳ ಶಿಕ್ಷಣಕ್ಕಾಗಿ ಆಟೋ ಓಡಿಸಿ ಬದುಕು ಸಾಗಿಸುವ 74 ರ ವೃದ್ಧ
ಪ್ರತೀ ಬಾರಿ ಈ ನಾಟಕ ನಡೆದಾಗಲೆಲ್ಲ ಚಾಮುಂಡಿ ಪಾತ್ರಧಾರಿ ಮೇಲೆ ತಾಯಿಯ ಆವಾಹನೆ ಆಗುತ್ತೆಂಬ ನಂಬಿಕೆ ಇದೆ. ಹಾಗಾಗಿ ರಾಕ್ಷಸನ ವಧೆ ಸನ್ನಿವೇಶ ವೇಳೆ ಚಾಮುಂಡಿ ಪಾತ್ರಧಾರಿಯನ್ನು ಆಯೋಜಕರು ಹಿಡಿದು ಎಳೆದೊಯ್ಯುತ್ತಾರೆ. ಯಾವುದೇ ಕೆಟ್ಟ ಘಟನೆ ಸಂಭವಿಸಬಾರದು ಎಂಬ ಉದ್ದೇಶಕ್ಕೆ ಚಾಮುಂಡಿ ಪಾತ್ರಧಾರಿಯನ್ನು ಕರೆದೊಯ್ಯತ್ತಾರೆ ಎಂದು ತಿಳಿದು ಬಂದಿದೆ. ಈ ನಾಟಕದ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.