Advertisement

ಮಂಡ್ಯ 14ರಿಂದ ಚಲಿಸು ಕರ್ನಾಟಕ ಸೈಕಲ್‌ ಯಾತ್ರೆ

12:06 PM Sep 09, 2020 | Suhan S |

ಮಂಡ್ಯ: ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಸ್ಥಾಪನೆಯಾಗಿ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಚಲಿಸು ಕರ್ನಾಟಕ ಘೋಷವಾಕ್ಯದೊಂದಿಗೆ ರಾಜ್ಯದಲ್ಲಿ 2700 ಕಿ.ಮೀ ಸೈಕಲ್‌ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಘಟಕದ ಉಪಾಧ್ಯಕ್ಷ ಎಸ್‌. ಎಚ್‌.ಲಿಂಗೇಗೌಡ ತಿಳಿಸಿದರು.

Advertisement

ಕೋವಿಡ್‌-19 ಸಂಕಷ್ಟದಿಂದ ಬಳಲು ತ್ತಿ ರುವ ಸಂದರ್ಭದಲ್ಲಿ ರೋಗಿಗಳ ಹೆಸರಿನಲ್ಲಿ ಸರ್ಕಾರ ಹಣಲೂಟಿ ಮಾಡುತ್ತಿದೆ. ತೈಲ ಬೆಲೆ ಏರಿಕೆ, ಉದ್ಯೋಗ ನಷ್ಟ, ವ್ಯಾಪಾರ- ವಹಿವಾಟು ಕುಂಠಿತವಾ ಗಿದ್ದು, ಜನರ ಕಷ್ಟಕ್ಕೆ ನೆರವಾಗದೆ ತಮ್ಮದೇ ಲೋಕದಲ್ಲಿ ಜನಪ್ರತಿನಿಧಿಗಳು ಇದ್ದಾರೆ. ಈ ವಿಚಾರ ಮುಂದಿಟ್ಟುಕೊಂಡು ಜನರಲ್ಲಿ ಸ್ವತ್ಛ, ಪ್ರಾಮಾಣಿಕ, ಜನಪರ ರಾಜಕಾರ ಣದಅವಶ್ಯಕತೆಯ ಬಗ್ಗೆ ತಿಳಿಸಲು ಸೈಕಲ್‌ ಯಾತ್ರೆ ಆಯೋಜಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಶಿರಾದಲ್ಲಿ ಸಮಾರೋಪ: ರಾಜ್ಯ ಘಟಕದ ಅಧ್ಯಕ್ಷ ರವಿ ಕೃಷ್ಣಾ ರೆಡ್ಡಿ ನೇತೃತ್ವದಲ್ಲಿ ಮೂರು ಹಂತಗಳಲ್ಲಿ ಸೆಪ್ಟೆಂಬರ್‌, ಅಕ್ಟೋಬರ್‌, ನವೆಂಬರ್‌ನಲ್ಲಿ ಸೈಕಲ್‌ ಯಾತ್ರೆ ನಡೆಯಲಿದೆ. ಮೊದಲ ಹಂತದ ಯಾತ್ರೆ ಸೆ.14ರಂದು ಕೋಲಾರದಲ್ಲಿ ಆರಂಭವಾಗಿ ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ರಾಮನಗರ ಜಿಲ್ಲೆಯಲ್ಲಿ ಸಾಗಿ ಸೆ.18ರಂದು ಮದ್ದೂರಿಗೆ ಆಗಮಿಸಲಿದೆ. ಸೆ.19ರಂದು ಮಂಡ್ಯ ನಗರದ ಸಾರ್ವಜನಿಕ ಸ್ಥಳಗಳಲ್ಲಿ ಅರಿವು ಮೂಡಿಸಲಾಗುವುದು. ನಂತರ ಚಾಮರಾಜನಗರ, ಮೈಸೂರು, ಕೊಡಗು, ಚಿತ್ರ  ದುರ್ಗ ಜಿಲ್ಲೆಗಳಲ್ಲಿ ಸಾಗಿ ತುಮಕೂರಿನ ಶಿರಾದಲ್ಲಿ ಸಮಾರೋಪಗೊಳ್ಳಲಿದೆ ಎಂದು ವಿವರಿಸಿದರು.

ಅ.5ರಂದು ಉತ್ತರ ಮತ್ತು ಕಲ್ಯಾಣ ಕರ್ನಾಟಕ ಭಾಗದ ಬಳ್ಳಾರಿ, ಕೊಪ್ಪಳ, ರಾಯಚೂರು, ಯಾದಗಿರಿ, ಕಲಬುರಗಿ, ಬೀದರ್‌, ವಿಜಯಪುರ, ಬಾಗಲಕೋಟೆ, ನ.23ರಿಂದ ಬೆಳಗಾವಿ, ಧಾರವಾಡ,ಹಾವೇರಿ, ದಾವಣಗೆರೆ, ಶಿವಮೊಗ್ಗ, ಚಿಕ್ಕಮ ಗಳೂರು, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಯಾತ್ರೆ ನಡೆಯಲಿದೆ ಎಂದರು.

ಸ್ವಚ್ಛ ರಾಜಕಾರಣಕ್ಕೆ ನೆರವು: ಮುಂದೆ ಬರುವ ಗ್ರಾಪಂ ಚುನಾವಣೆಯಲ್ಲಿ ಪಾಲ್ಗೊಳ್ಳಲು ಇಚ್ಚಿಸುವವರು ನಮ್ಮನ್ನು ಸಂಪರ್ಕಿಸಬಹುದು (ಮೊ. 9449329929/7975625575). ಸ್ವತ್ಛ ರಾಜಕಾರಣಕ್ಕೆ ಸದಾ ನೆರವು ನೀಡಲಾಗುವುದು ಎಂದು ಹೇಳಿದರು.

Advertisement

ಮದ್ದೂರು ತಾಲೂಕಿನ ಕಾಡಕೊತ್ತನಹಳ್ಳಿಯ ನಿವಾಸಿ, ವಕೀಲ ಕಾ.ಮ. ಮಹೇಶ್‌ ಅವರನ್ನು ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ನೇಮಕ ಮಾಡಲಾಯಿತು. ಜಿಲ್ಲಾ ಘಟಕದ ಗೌರವಾಧ್ಯಕ್ಷ ಸಿ.ಎಸ್‌.ವೆಂಕಟೇಶ್‌, ಉಪಾಧ್ಯಕ್ಷ ರಮೇಶ್‌ ಗೌಡ, ರೈತ ಘಟಕದ ಅಧ್ಯಕ್ಷ ಎಸ್‌.ಎಲ್‌.ರಾಮಕೃಷ್ಣ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next