ಮಂಡ್ಯ: ಜಿಲ್ಲೆಯಲ್ಲಿ ಮುಂಬೈ ನಂಜು ದಿನೇದಿನೆ ವ್ಯಾಪಿಸುತ್ತಿದ್ದು, ಸೋಮವಾರ ಮತ್ತೆ 17 ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಕೆ.ಆರ್.ಪೇಟೆ ತಾಲೂಕಿನ 13 ಹಾಗೂ ಮಂಡ್ಯ ತಾಲೂಕಿನ 4 ಮಂದಿಗೆ ಸೋಂಕು ದೃಢಪಟ್ಟಿ ದ್ದು, ಸೋಂಕಿತರ ಸಂಖ್ಯೆ 89ಕ್ಕೇರಿದೆ. ಒಟ್ಟು 17 ಸೋಂಕಿತರಲ್ಲಿ 7 ಮಂದಿ ಪುರುಷರು, ನಾಲ್ವರು ಮಹಿಳೆಯರು, ನಾಲ್ವರು ಬಾಲಕರು ಮತ್ತು ಇಬ್ಬರು ಬಾಲಕಿಯರು. ಇವರಲ್ಲಿ ಕೆ.ಆರ್.ಪೇಟೆ ತಾಲೂಕಿನವರೇ 13 ಮಂದಿ ಇದ್ದರೆ, 4 ಮಂದಿ ಮಂಡ್ಯ ತಾಲೂಕಿನವರೆಂದು ಡೀಸಿ ಡಾ. ವೆಂಕಟೇಶ್ ತಿಳಿಸಿದ್ದಾರೆ.
ವಿವಿಧ ಗ್ರಾಮಸ್ಥರು: ಪಿ.1210, ಪಿ. 1212, ಪಿ. 1213 ರಿಂದ ಪಿ. 1223ರವರೆಗೆ ಎಲ್ಲ 13 ಮಂದಿಯೂ ಕೆ.ಆರ್.ಪೇಟೆ ತಾಲೂಕಿನ ವಿವಿಧ ಗ್ರಾಮದವರು, ಎಲ್ಲರೂ ಮುಂಬೈನ ಸಾಂತಾಕ್ರೂಜ್ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ವಾಸವಾಗಿದ್ದರು. ಸೋಂಕಿತರು ಮೇ 10ರಂದು ಮುಂಬೈನಿಂದ ಹೊರಟು ಪುಣೆ, ಸತಾರ, ನಿಪ್ಪಾಣಿ ಚೆಕ್‌ಪೋಸ್ಟ್ ಮೂಲಕ ಮೇ 12ರಂದು ಆನೆಗೊಳ ಚೆಕ್ ಪೋಸ್ಟ್ ಗೆ ಬಂದಿದ್ದಾಗ ಮೊರಾರ್ಜಿ ಶಾಲೆಯಲ್ಲಿ ಕ್ವಾರಂ ಟೈನ್ ಮಾಡಿದ್ದು, ಮೇ 13ರಂದು ಗಂಟಲ ದ್ರವ ಪರೀಕ್ಷಿಸಿದಾಗ ಪಾಸಿಟಿವ್ ಬಂದಿದೆ ಎಂದರು.
ಒಂದೇ ಕುಟುಂಬದ ಮೂವರಿಗೆ ಸೋಂಕು: ನಾಲ್ಕು ಪ್ರಕರಣಗಳು ಮಂಡ್ಯ ತಾಲೂಕಿನವರಾ ಗಿದ್ದು, ಪಿ.1228ರಿಂದ 1231 ಎಂದು ಗುರುತಿ ಸಲಾಗಿದೆ. ಒಂದೇ ಕುಟುಂಬದ ಮೂವರಿಗೆ ಸೋಂಕು ತಗುಲಿದ್ದು, ಇವರೊಂದಿಗೆ ಮತ್ತೂಬ್ಬ ವ್ಯಕ್ತಿಗೂ ಸೋಂಕು ದೃಢಪಟ್ಟಿದೆ. ಪಿ.1228 ಮಂಡ್ಯ ತಾಲೂಕು ಕೆರಗೋಡು ಹೋಬಳಿಯವ ರಾಗಿದ್ದು, ಮುಂಬೈನಲ್ಲಿ ಹಿಟ್ಟಿನ ಗಿರಣಿಯಲ್ಲಿ ಕೆಲಸ ಮಾಡುತ್ತಿದ್ದರು.
ಇವರೊಂದಿಗೆ ಕೀಲಾರ ಸಮೀಪದ ಗ್ರಾಮದವರೊಬ್ಬರು ಹಿಟ್ಟಿನ ಗಿರಣಿಯಲ್ಲಿ ಕೆಲಸ ಮಾಡುತ್ತಿದ್ದರು. ಪಿ.1228ರ ಕುಟುಂಬದೊಂದಿಗೆ ಮುಂಬೈನಿಂದ ಕಾರಿನಲ್ಲಿ ಹೊರಟು 11ರಂದು ಬೆಳ್ಳೂರು ಕ್ರಾಸ್‌ಗೆ ಬಂದಾಗ ತಪಾಸಣೆ ನಡೆಸಿ ಮೊರಾರ್ಜಿ ಶಾಲೆ ಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಮೇ 13ರಂದು ಅವರ ಗಂಟಲ ದ್ರವ ಪರೀಕ್ಷೆ ನಡೆಸಿ ದಾಗ 4 ಮಂದಿಗೂ ಸೋಂಕು ಕಾಣಿಸಿ ಕೊಂಡಿದೆ. ಎಲ್ಲರನ್ನೂ ಮಿಮ್ಸ್ ಐಸೋಲೇಷ ನ್ ವಾರ್ಡ್‌ಗೆ ದಾಖಲಿಸಲಾಗಿದೆ ಎಂದರು.
ಮಂಡ್ಯ ಜಿಲ್ಲೆಗೆ ಮುಂಬೈ ಕೋವಿಡ್ 19 ಕಾಟ: ಮುಂಬೈನಿಂದ ಬರುವವರಲ್ಲಿ ಹೆಚ್ಚು ಕೋವಿಡ್ 19 ಪ್ರಕರಣಗಳು ಕಂಡುಬರುತ್ತಿದೆ. ಸಮರ್ಥವಾಗಿ ಎದುರಿಸಲು ಜಿಲ್ಲಾಡಳಿತ ಸಜ್ಜಾಗಿದೆ. ಮಿಮ್ಸ್ ಆಸ್ಪತ್ರೆಯಲ್ಲಿ ಉತ್ತಮ ವೈದ್ಯರ ತಂಡ ಕಾರ್ಯ ನಿರ್ವಹಿಸುತ್ತಿದೆ. ಲಾಕ್‌ಡೌನ್ ಸಡಿಲವಾಗುತ್ತಿರುವ ಕಾರಣ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಮಾಸ್ಕನ್ನು ಕಡ್ಡಾಯವಾಗಿ ಉಪಯೋಗಿಸಬೇಕು.
ಅವಶ್ಯಕತೆ ಇದ್ದಾಗ ಮಾತ್ರ ಹೊರಗೆ ಬಂದು ಪ್ರಯಾಣ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಸಲಹೆ ನೀಡಿದರು. ಮುಂಬೈ ಮತ್ತು ಇತರೆ ರಾಜ್ಯಗಳಿಂದ ಬರುವವರನ್ನು ಪರಿಶೀಲಿಸಿ ಕ್ವಾರಂಟೈನ್ ಮಾಡುತ್ತಿದ್ದೇವೆ. ಸಾರ್ವಜನಿಕರು ನಮ್ಮೊಂದಿಗೆ ಸಹಕರಿಸಬೇಕು. ಅವರು ಗ್ರಾಮಗಳಿಗೆ ಬಂದಲ್ಲಿ ಸೋಂಕು ಹೆಚ್ಚಾಗುವ ಸಾಧ್ಯತೆಗಳಿವೆ. ಕ್ವಾರಂಟೈನ್ ಮಾಡಲು ಅಧಿಕಾರಿಗಳು ಗುರುತಿಸುವ ಪ್ರದೇಶಗಳಲ್ಲಿಡಲು ಸಹ ಕಾರ ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ. ವೆಂಕಟೇಶ್ ತಿಳಿಸಿದರು.
ಇಬ್ಬರು ಗುಣಮುಖ: ಮಿಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಇಬ್ಬರು ಸೋಂಕಿತರು ಸಂಪೂರ್ಣ ಗುಣ ಮುಖರಾಗಿದ್ದು, ಸೋಮವಾರ ಆಸ್ಪತ್ರೆಯಿಂ ದ ಬಿಡುಗಡೆ ಮಾಡಲಾಗಿದೆ. ಇವರಲ್ಲಿ ಮುಂಬೈನಿಂದ ಬಂದವರೊಬ್ಬರು ಹಾಗೂ ಮಳವಳ್ಳಿಯ ತಬ್ಲೀಘಿಗಳ ಸಂಪರ್ಕದಿಂದ ಬಂದವರೊಬ್ಬರು. ಒಟ್ಟು 21 ಮಂದಿ ಗುಣಮುಖರಾಗಿ ಬಿಡುಗಡೆ ಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ. ಕೋವಿಡ್ 19 ಡಾ.ವೇಂಕಟೇಶ್ ತಿಳಿಸಿದ್ದಾರೆ.