Advertisement

ಮಂದನಾಗೆ ಐಸಿಸಿ ವರ್ಷದ ಆಟಗಾರ್ತಿ ಗರಿ 

09:39 AM Dec 31, 2018 | |

ದುಬೈ: ಭಾರತೀಯ ಮಹಿಳಾ ಆಟಗಾರ್ತಿ ಸ್ಮೃತಿ ಮಂದನಾ ಐಸಿಸಿ ಕೊಡಮಾಡುವ ವರ್ಷದ ಆಟಗಾರ್ತಿ, ವರ್ಷದ ಏಕದಿನ ಆಟಗಾರ್ತಿ ಮತ್ತು ರಾಚೆಲ್ ಹೆಯ್ಹೋ-ಫ್ಲಿಂಟ್ ಪ್ರಶಸ್ತಿಗೆ ಭಾಜರಾಗಿದ್ದಾರೆ. ಜೂಲನ್ ಗೋಸ್ವಾಮಿ ನಂತರ ಐಸಿಸಿ ಪ್ರಶಸ್ತಿ ಪಡೆದ ಎರಡನೇ ಭಾರತೀಯ  ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಮಂದನಾ ಪಾತ್ರರಾಗಿದ್ದಾರೆ. 

Advertisement

 ಈ ಬಗ್ಗೆ ಪ್ರತಿಕ್ರಿಯಿಸಿರುವ ಮಂದನಾ, ‘ ಪ್ರತಿ ಆಟಗಾರ್ತಿಯರು ತಂಡದ ಗೆಲುವಿಗಾಗಿ ಶ್ರಮ ಪಡುತತ್ತಾರೆ. ನಮ್ಮ ಶ್ರಮದಿಂದ ತಂಡ ಗೆದ್ದಾಗ ಮತ್ತು ನಮ್ಮ ಸಾಧನೆಗೆ ಇಂತಹ ಪ್ರಶಸ್ತಿಗಳು ಬಂದಾಗ ಖುಷಿಯಾಗುತ್ತದೆ, ಮತ್ತು ಇನ್ನಷ್ಟು ಜವಾಬ್ದಾರಿ ಹೆಚ್ಚುತ್ತದೆ’ ಎಂದಿದ್ದಾರೆ. 


ಆಸ್ಟ್ರೇಲಿಯಾದ ವಿಕೆಟ್ ಕೀಪರ್ ಅಲಿಸ್ಸಾ ಹೀಲಿ ವರ್ಷದ ಟಿ 20  ಆಟಗಾರ್ತಿ ಮತ್ತು ಇಂಗ್ಲೆಂಡ್ ನ ಸೋಫಿ ಎಕ್ಲೇಸ್ಟೋನ್ ಐಸಿಸಿ ಎಮರ್ಜಿಂಗ್ ಆಟಗಾರ್ತಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ

ಇದೇ ವೇಳೆ ಹರ್ಮನ್ ಪ್ರೀತ್ ಕೌರ್ ಐಸಿಸಿ ವರ್ಷದ ಟಿ 20 ತಂಡದ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಸ್ಮೃತಿ ಮಂದನಾ ಮತ್ತು ಪೂನಂ ಯಾದವ್  ಈ ತಂಡದಲ್ಲಿ ಆಯ್ಕೆಯಾಗಿರುವ ಇತರ ಇಬ್ಬರು ಭಾರತೀಯರು. 

Advertisement

Udayavani is now on Telegram. Click here to join our channel and stay updated with the latest news.

Next