Advertisement
ಬಹುತೇಕ ಎಲ್ಲ ಸಚಿವಾಲಯ ಹಾಗೂ ಸಚಿವರ ಕಚೇರಿಗಳಲ್ಲಿ ಇ-ಆಫೀಸ್ ಅನುಷ್ಠಾನಗೊಳ್ಳುತ್ತಿದ್ದು, ಆಯುಕ್ತಾಲಯ, ನಿರ್ದೇಶನಾಲಯಗಳಲ್ಲೂ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುತ್ತಿವೆ. ಆದರೆ ಜಿಲ್ಲೆ ಮತ್ತು ತಾಲೂಕು ಮಟ್ಟದ ಸರಕಾರಿ ಕಚೇರಿಗಳು ಹಾಗೂ ನಿಗಮ, ಮಂಡಳಿಗಳ ಕಚೇರಿಗಳು ಈ ವಿಚಾರದಲ್ಲಿ ಹಿಂದೆ ಬಿದ್ದಿವೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಡಿ ಬರುವ 2 ಆಯುಕ್ತಾಲಯದಲ್ಲಿ ಇ-ಆಫೀಸ್ ಅನುಷ್ಠಾನಗೊಂಡಿಲ್ಲ. ಅದೇ ರೀತಿ ಒಳಾಡಳಿತ ಮತ್ತು ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ ಮೂರು ನಿರ್ದೇಶನಾಲಯಗಳಲ್ಲೂ ಜಾರಿಯಾಗಿಲ್ಲ. ರಾಜ್ಯದಲ್ಲಿರುವ 6,240 ಜಿಲ್ಲಾ ಮಟ್ಟದ ಕಚೇರಿಗಳ ಪೈಕಿ 1,145 ಕಚೇರಿಗಳಲ್ಲಿ ಮಾತ್ರ ಇ-ಆಫೀಸ್ ಜಾರಿಯಾಗಿದ್ದು, ಇನ್ನೂ 5,095 ಕಚೇರಿಗಳಲ್ಲಿ ಅನುಷ್ಠಾನ ಆಗಬೇಕಿದೆ. 15,746 ತಾಲೂಕು ಮಟ್ಟದ ಕಚೇರಿಗಳ ಪೈಕಿ 1,425 ಕಚೇರಿಗಳಲ್ಲಿ ಅನುಷ್ಠಾನಗೊಂಡಿದ್ದು, ಬರೋಬ್ಬರಿ 14,321 ಕಚೇರಿಗಳಲ್ಲಿ ಅನುಷ್ಠಾನ ಆಗಿಲ್ಲ. 270 ಸ್ವಾಯತ್ತ ಸಂಸ್ಥೆಗಳ ಕಚೇರಿ ಪೈಕಿ 90ರಲ್ಲಿ ಮಾತ್ರ ಜಾರಿಯಲ್ಲಿದ್ದು, 174 ಕಚೇರಿಯಲ್ಲಿ ಇ-ಆಫೀಸ್ ತಂತ್ರಾಂಶ ಅಳವಡಿಸಿಕೊಂಡಿಲ್ಲ. ಅದೇ ರೀತಿ 862 ಜಿಲ್ಲಾ ಮಟ್ಟದ ನಿಗಮ-ಮಂಡಳಿ ಕಚೇರಿಗಳ ಪೈಕಿ 68ರಲ್ಲಿ ಮಾತ್ರ ಇ-ಆಫೀಸ್ ಅಳವಡಿಸಿಕೊಂಡಿದ್ದು, ಇನ್ನೂ 749 ಕಚೇರಿಗಳಲ್ಲಿ ಬಾಕಿ ಇದೆ. ತುರ್ತಾಗಿ ಇ-ಆಫೀಸ್ ತಂತ್ರಾಂಶ ಅನುಷ್ಠಾನಗೊಳಿಸಿ, ಕಡ್ಡಾಯವಾಗಿ ಕಡತ ನಿರ್ವಹಣೆ ಪ್ರಕ್ರಿಯೆಯನ್ನು ಇ-ಆಫೀಸ್ ತಂತ್ರಾಂಶದ ಮೂಲಕವೇ ನಿರ್ವಹಿಸುವಂತೆ ಸಂಬಂಧಪಟ್ಟ ಅಧಿಕಾರಿ, ಸಿಬಂದಿಗೆ ಸೂಚಿಸಬೇಕೆಂದು ಆದೇಶಿಸಲಾಗಿದೆ. Advertisement
Govt ಕಚೇರಿಗಳಲ್ಲಿ ಇ-ಆಫೀಸ್ ತಂತ್ರಾಂಶ ಕಡ್ಡಾಯಕ್ಕೆ ಆದೇಶ
11:46 PM May 19, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.