Advertisement
ಇತ್ತೀಚೆಗೆ “ಮನಸಾಗಿದೆ’ ಚಿತ್ರದ ಟೈಟಲ್ ಬಿಡುಗಡೆ ಸಮಾರಂಭ ನಡೆಸಿದ ಚಿತ್ರತಂಡ, ಚಿತ್ರದ ನಾಯಕ ಅಭಯ್ ಮತ್ತು ಚಿತ್ರದ ಕಲಾವಿದರು, ತಂತ್ರಜ್ಞರನ್ನು ಮಾಧ್ಯಮಗಳಿಗೆ ಪರಿಚಯಿಸಿತು.
Related Articles
Advertisement
ಇದೇ ವೇಳೆ ಚಿತ್ರದ ಬಗ್ಗೆ ಮಾತನಾಡಿದ ನಿರ್ಮಾಪಕ ಎಸ್. ಚಂದ್ರಶೇಖರ್, “ಈ ಹಿಂದೆ ಮೂರ್‍ನಾಲ್ಕು ಸಿನಿಮಾಗಳನ್ನು ಮಾಡಿದ ಅನುಭವವಿದ್ದು, ಈ ಬಾರಿ ನಾನೇ ಬರೆದ ಕಥೆಯನ್ನು ಸಿನಿಮಾ ಮಾಡಲು ಹೊರಟಿದ್ದೇನೆ. ಇದೊಂದು ಯೂಥ್ ಸಬೆjಕ್ಟ್. ಕೆಲವರು ಪ್ರೀತಿಯನ್ನ ಹುಡುಕಿಕೊಂಡು ಹೋಗ್ತಾರೆ. ಇನ್ನು ಕೆಲವರನ್ನು ಪ್ರೀತಿಯೇ ಹುಡುಕಿಕೊಂಡು ಬರುತ್ತದೆ. ಹೀಗೆ ಅರಸಿಕೊಂಡು ಬಂದ ಪ್ರೀತಿಯನ್ನು ಹುಡುಗನೊಬ್ಬ ಪಡೆಯುತ್ತಾನಾ ಇಲ್ಲವಾ? ಅನ್ನೋದು ಚಿತ್ರದ ಕಥೆಯ ಒಂದು ಎಳೆ’ ಎಂದು ಕಥೆಯ ಬಗ್ಗೆ ವಿವರಣೆ ನೀಡಿದರು.
ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಶ್ರೀನಿವಾಸ್ ಶಿಡ್ಲಘಟ್ಟ, “ಇದೊಂದು ಕಂಪ್ಲೀಟ್ ಮನರಂಜನೆ ನೀಡುವಂಥ ಸಿನಿಮಾವಾಗಲಿದೆ. ಇಡೀ ಸಿನಿಮಾದಲ್ಲಿ ಇಂದಿನ ಯೂಥ್ಸ್ಗೆ ಹತ್ತಿರವಾಗುವಂಥ ಹತ್ತಾರು ವಿಷಯಗಳಿವೆ’ ಎಂದರು. ಚಿತ್ರದಲ್ಲಿ ತನ್ನ ಪಾತ್ರದ ಬಗ್ಗೆ ಮಾತನಾಡಿದ ಯುವ ನಾಯಕ ನಟ ಅಭಯ್, “ಇಂದಿನ ಕಾಲೇಜ್ ಹುಡುಗರು ಹೇಗಿರುತ್ತಾರೋ, ಅಂಥದ್ದೇ ಪಾತ್ರ ಈ ಸಿನಿಮಾದಲ್ಲಿ ನನಗೆ ಸಿಕ್ಕಿದೆ. ಆ್ಯಕ್ಷನ್, ಲವ್, ಸೆಂಟಿಮೆಂಟ್ ಹೀಗೆ ಎಲ್ಲ ಥರದ ಶೇಡ್ಸ್ ನನ್ನ ಪಾತ್ರದಲ್ಲಿದೆ. ಈಗಾಗಲೇ ಪಾತ್ರಕ್ಕಾಗಿ ಒಂದಷ್ಟು ತಯಾರಿ ಮಾಡಿಕೊಳ್ಳುತ್ತಿದ್ದೇನೆ. ಸ್ಕ್ರೀನ್ ಮೇಲೆ ನನ್ನ ಪಾತ್ರ ಹೇಗೆ ಬರಲಿದೆ ಅನ್ನೋ ಕುತೂಹಲ ನನಗೂ ಇದೆ’ ಎಂದರು.
“ಮನಸಾಗಿದೆ’ ಚಿತ್ರದ ಹಾಡುಗಳಿಗೆ ಮಾನಸ ಹೊಳ್ಳ ಸಂಗೀತ ಸಂಯೋಜಿಸುತ್ತಿದ್ದಾರೆ. ರಘು ನಿಡುವಳ್ಳಿ ಸಂಭಾಷಣೆ ಬರೆಯುತ್ತಿದ್ದಾರೆ. ಚಿತ್ರಕ್ಕೆ ಶಂಕರ್ ಛಾಯಾಗ್ರಹಣ, ಶಿವಪ್ರಸಾದ್ ಯಾದವ್ ಸಂಕಲನವಿದೆ. ಚಿತ್ರದ ಸಾಹಸ ದೃಶ್ಯಗಳಿಗೆ ಥ್ರಿಲ್ಲರ್ ಮಂಜು ಸಾಹಸ ಸಂಯೋಜಿಸುತ್ತಿದ್ದಾರೆ.
ಜಿ.ಎಸ್.ಕಾರ್ತಿಕ ಸುಧನ್