Advertisement

“ಮನರೂಪ’ಕಾಡುವ ಗುಮ್ಮ

10:43 AM Oct 20, 2019 | Lakshmi GovindaRaju |

ಕನ್ನಡದಲ್ಲಿ ಥ್ರಿಲ್ಲರ್‌ ಚಿತ್ರಗಳ ಟ್ರೆಂಡ್‌ ಸದ್ಯಕ್ಕೆ ಜೋರಾಗಿಯೇ ಇದೆ. ಅದರಲ್ಲೂ ಇತ್ತೀಚೆಗೆ ಚಿತ್ರರಂಗಕ್ಕೆ ಬರುತ್ತಿರುವ ಅನೇಕ ಹೊಸಪ್ರತಿಭೆಗಳು ಇಂಥ ಚಿತ್ರಗಳ ಕಡೆಗೆ ಆಸಕ್ತರಾಗುತ್ತಿರುವುದರಿಂದ ಗಾಂಧಿನಗರದಲ್ಲಿ ಗುಮ್ಮನ ಭಯ ಸ್ವಲ್ಪ ಜಾಸ್ತಿಯೇ ಇದೆ. ಈಗ “ಮನರೂಪ’ ಎನ್ನುವ ಅಂಥದ್ದೇ ಮತ್ತೂಂದು ಚಿತ್ರ ತೆರೆಗೆ ಬರೋದಕ್ಕೆ ರೆಡಿಯಾಗುತ್ತಿದೆ.

Advertisement

ದಟ್ಟ ಕಾನನದಲ್ಲಿ ಯಾರೂ ಕಾಲಿಡದ ಜಾಗದಲ್ಲಿ, ತಮ್ಮ ಯೋಚನೆಗಳನ್ನು ಶೋಧಿಸಲು ಹೊರಡುವ ಇಂದಿನ ಹೈಫೈ ಹುಡುಗರಿಗೆ ಏನೇನು ಸವಾಲುಗಳು, ತಲ್ಲಣಗಳನ್ನು ಎದುರಾಗುತ್ತವೆ ಅನ್ನೋದೆ ಮನರೂಪ ಚಿತ್ರದ ಕಥಾಹಂದರ. ಸೈಕಾಲಜಿಕಲ್‌ ಥ್ರಿಲ್ಲರ್‌ ಶೈಲಿಯಲ್ಲಿ ಮೂಡಿಬರುತ್ತಿರುವ ಈ ಚಿತ್ರಕ್ಕೆ ಕಿರಣ್‌ ಹೆಗಡೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.

ಸಿ.ಎಂ.ಸಿ.ಆರ್‌ ಮೂವೀಸ್‌ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ಹೊಸ ಪ್ರತಿಭೆ ದಿಲೀಪ್‌ ಕುಮಾರ್‌, ಅನೂಷಾ ರಾವ್‌, ನಿಶಾ ಬಿ.ಆರ್‌, ಆರ್ಯನ್‌, ಶಿವ ಪ್ರಸಾದ್‌, ಅಮೋಘ್ ಸಿದ್ಧಾರ್ಥ್ ಮುಖ್ಯ ಭೂಮಿಕೆಯಲ್ಲಿ ಅಭಿನಯಸಿದ್ದಾರೆ. ಮನರೂಪದ ವಿಶೇಷತೆಗಳ ಬಗ್ಗೆ ಮಾತನಾಡುವ ಚಿತ್ರತಂಡ, ಚಿತ್ರದ ಶೇಕಡಾ ತೊಂಬತ್ತರಷ್ಟು ಚಿತ್ರೀಕರಣವನ್ನು ದಟ್ಟ ಕಾಡಿನಲ್ಲಿ ನಡೆಸಲಾಗಿದೆ.

ಇಂದಿನ ನಗರ ಪ್ರದೇಶದ ಪ್ರೇಕ್ಷಕರಿಗೆ ಪ್ರಕೃತಿಯ ವಿಸ್ಮಯಗಳನ್ನು ಆಸ್ವಾಧಿಸುವ ಅದ್ಭುತ ಅವಕಾಶವನ್ನು ಚಿತ್ರ ಮಾಡಿಕೊಡುತ್ತದೆ. ಅದೇ ವೇಳೆ, ಪ್ರಕೃತಿಯ ಆಳ-ಅಗಲ ಅರಿಯದೆ ಹೊರಟರೆ ಎದುರಾಗಬಹುದಾದ ಅನಿರೀಕ್ಷಿತ ಅಪಾಯಗಳ ಮೇಲೂ ಇದು ಚಿತ್ರ ಬೆಳಕು ಚೆಲ್ಲುತ್ತದೆ ಎಂಬ ವಿವರಣೆ ಕೊಡುತ್ತದೆ. ಸದ್ಯ ಪ್ರಮೋಶನ್‌ ಕಾರ್ಯಗಳಲ್ಲಿ ನಿರತವಾಗಿರುವ ಮನರೂಪ ಇದೇ ವರ್ಷದ ಕೊನೆಯೊಳಗೆ ತೆರೆಗೆ ಬರುವ ಯೋಚನೆಯಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next