Advertisement

ಬಿಳಿಪರದೆ ಮೇಲೆ ಮನರೂಪ ಚಿತ್ರಣ  

11:20 AM Nov 20, 2018 | Team Udayavani |

ಕನ್ನಡದಲ್ಲಿ ಇತ್ತೀಚೆಗೆ ಸೈಕಲಾಜಿಕಲ್‌ ಕ್ರೈಮ್‌ ಥಿಲ್ಲರ್‌ ಚಿತ್ರಗಳ ಕಡೆಗೆ ಒಲವು ಹೆಚ್ಚಾಗುತ್ತಿದೆ. ಇದೇ ಕಾರಣಕ್ಕಾಗಿಯೋ, ಏನೋ, ಚಿತ್ರರಂಗದ ಕದ ತಟ್ಟುತ್ತಿರುವ ಹೊಸ ಪ್ರತಿಭೆಗಳು ಕೂಡ ಇಂತಹ ಚಿತ್ರಗಳ ನಿರ್ಮಾಣದತ್ತ ಆಸಕ್ತರಾಗುತ್ತಿದ್ದಾರೆ. ಆ ಸಾಲಿಗೆ ಈಗ “ಮನರೂಪ’ಚಿತ್ರ ಸೇರ್ಪಡೆಯಾಗುತ್ತಿದೆ. ಮಾಸ್ಕ್ ಫೋಭಿಯಾ (ಮುಖವಾಡದ ಭಯ) ಪರಿಕಲ್ಪನೆಯನ್ನು ಇಟ್ಟುಕೊಂಡು ಕಿರಣ್‌ ಹೆಗಡೆ ಈ ಚಿತ್ರವನ್ನು ನಿರ್ದೇಶಿಸಿ ತೆರೆಗೆ ತರುತ್ತಿದ್ದಾರೆ.

Advertisement

ಯುವ ಮನಸ್ಸುಗಳು ಭೌತಿಕವಾದ ಮತ್ತು ಅಸ್ತಿತ್ವವಾದದ ಮಾಯಾ ಕನ್ನಡಿಯಲ್ಲಿ ತಮ್ಮನ್ನು ತಾವು ಹುಡುಕುತ್ತಾ, ಎಳೆದುಕೊಳ್ಳುತ್ತಾ ಕೊನೆಯರಿಯದ ದಾರಿಯಲ್ಲಿ, ಯಾರದೋ ಸಮ್ಮೊಹನಕ್ಕೆ ಸಕ್ಕವರಂತೆ ಸಾಗುತ್ತಾರೆ ಎಂಬ ಒಂದು ಎಳೆಯನ್ನಿಟ್ಟುಕೊಂಡು ಮನರೂಪ ಚಿತ್ರವನ್ನು ನಿರ್ಮಿಸಿದ್ದೇವೆ ಎನ್ನುತ್ತಾರೆ ನಿರ್ದೇಶಕರ ಕಿರಣ್‌ ಹೆಗಡೆ. ಚಿತ್ರದ ತೊಂಬತ್ತರಷ್ಟು ಚಿತ್ರೀಕರಣ ದಟ್ಟ ಅರಣ್ಯದಲ್ಲಿ ನಡೆಸಲಾಗಿದೆ. ಸುಮಾರು ಒಂದೂವರೆ ವರ್ಷಗಳ ಹಿಂದೆ ಪ್ರಾರಂಭವಾದ ಈ ಚಿತ್ರ ಇದೀಗ ತನ್ನೆಲ್ಲಾ ಕೆಲಸಗಳನ್ನು ಪೂರ್ಣಗೊಳಿಸಿ ಮುಂದಿನ ವರ್ಷದ ಆರಂಭದಲ್ಲಿ ತೆರೆಗೆ ಬರುವ ಸಿದ್ಧತೆಯಲ್ಲಿದೆ.

ಮನೋವೈಜ್ಞಾನಿಕ ಕಥಾಹಂದರ ಹೊಂದಿರುವ ಮನರೂಪ ಚಿತ್ರವನ್ನು ಸಿ.ಎಂ.ಸಿ.ಆರ್‌ ಮೂವೀಸ್‌ ಬ್ಯಾನರ್‌ನಲ್ಲಿ ನಿರ್ಮಾಣ ಮಾಡಲಾಗಿದೆ. ಚಿತ್ರದಲ್ಲಿ ರಂಗಭೂಮಿ ಕಲಾವಿದ ದಿಲೀಪ್‌ ಕುಮಾರ್‌, ಕಿರುತೆರೆ ನಟಿ ಅನುಷಾ ರಾವ್‌ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಉಳಿದಂತೆ ನಿಷಾ ಬಿ.ಆರ್‌, ಬಿ. ಸುರೇಶ್‌, ಆರ್ಯನ್‌, ಶಿವ ಪ್ರಸಾದ್‌, ಅಮೋಘ ಸಿದ್ಧಾರ್ಥ, ಗಜ ನೀನಾಸಂ, ಪ್ರಜ್ವಲ್‌ ಗೌಡ ಇತರ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಮಹಾಬಲ ಸೀತಾಳಭಾವಿ ಸಂಭಾಷಣೆ  ಬರೆದಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next