ಗೌರಿಬಿದನೂರು: ತಾಲೂಕಿನ ಮರಳೂರು ಕೆರೆಗೆಎಚ್.ಎನ್.ವ್ಯಾಲಿ ನೀರು ಹರಿಯುತ್ತಿರುವ ಕಾರಣಮಂಗಳವಾರ ಶಾಸಕ ಎನ್.ಎಚ್.ಶಿವಶಂಕರರೆಡ್ಡಿಹಾಗೂ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು, ಸ್ಥಳೀಯ ಮುಖಂಡರು ಭೇಟಿ ನೀಡಿ ಪೂಜೆಸಲ್ಲಿಸಿದರು.ಬಳಿಕ ಮಾತನಾಡಿದ ಶಾಸಕ ಎನ್.ಎಚ್.ಶಿವಶಂಕರರೆಡ್ಡಿ, ನಾಲ್ಕೈದು ವರ್ಷಗಳ ಸತತ ಪ್ರಯತ್ನದಿಂದ ಈ ಭಾಗದ ಜನತೆಗೆ ನೀಡಿದ್ದ ಭರವಸೆಯಮೇರೆಗೆ ಎಚ್.ಎನ್. ವ್ಯಾಲಿ ನೀರನ್ನು ತಾಲೂಕಿನಕೆರೆಗಳಿಗೆ ಹರಿಸಲು ಸಾಧ್ಯವಾಗಿದೆ.
ಮುಂದಿನ ದಿನಗಳಲ್ಲಿ ಈ ಭಾಗದ ಅಂತರ್ಜಲ ಮಟ್ಟ ವೃದ್ಧಿಯಾಗಿಭಾಗಶಃ ರೈತರ ಕೃಷಿ ಚಟುವಟಿಕೆಗಳಿಗೆ ಮರುಜೀವಬರಲಿದೆ ಎಂದು ಹೇಳಿದರು.
ವೈಜ್ಞಾನಿಕ ಸಂಸ್ಕರಣೆ: ಬೆಂಗಳೂರಿನ ಹೆಬ್ಟಾಳ-ನಾಗವಾರದಿಂದ ಹರಿಯುವ ಸಂಸ್ಕರಿಸಿದ ತ್ಯಾಜ್ಯನೀರು ಎರಡು ಹಂತದಲ್ಲಿ ಸಂಸ್ಕರಣೆಯಾಗಿ ಕಣಿವೆಮೇಲಿನ ಧರ್ಮರಾಯನ ಕೆರೆಗೆ ಹರಿದು ಅಲ್ಲಿಂದನಾಲ್ಕೈದು ಕಿ.ಮೀ.ವರೆಗೆ ಭೂ ಗುರುತ್ವಾಕರ್ಷಣೆಶಕ್ತಿಯಿಂದ ಕಾಲುವೆ ಮೂಲಕ ಹರಿದು ಶ್ರೀನಿವಾಸಸಾಗರ ಸೇರುತ್ತದೆ.
ಅಲ್ಲಿಂದ 22ಕಿ.ಮೀ. ಉತ್ತರಪಿನಾಕಿನಿ ನದಿಯಲ್ಲಿ ಪೈಪ್ ಮೂಲಕ ಹರಿದು ನಗರಕ್ಕೆ ಸಮೀಪವಿರುವ ಕಿಂಡಿ ಅಣೆಕಟ್ಟು ಬಳಿಗೆ ಹರಿಯುತ್ತದೆ. ಅಲ್ಲಿಂದ ಪುನಃ 7 ಕಿ.ಮೀ. ಕಾಲುವೆಮೂಲಕ ಹರಿದು ಮರಳೂರು ಕೆರೆಗೆ ನೀರು ಸೇರುತ್ತಿದೆ. ಇದರಿಂದಾಗಿ ತ್ಯಾಜ್ಯ ನೀರು ಎರಡು ಬಾರಿವೈಜ್ಞಾನಿಕವಾಗಿ ಸಂಸ್ಕರಿಸುವ ಜತೆಗೆ ಭೂಮಿಯಲ್ಲಿಹರಿದು ಬರುವುದರಿಂದ ಯಾವುದೇ ಅಡ್ಡ ಪರಿಣಾಮ ಇರುವುದಿಲ್ಲ ಎಂದು ಹೇಳಿದರು.
ಮತ್ತೆರಡು ಯೋಜನೆಯಡಿ ನೀರು: ತಾಲೂಕಿನಲ್ಲಿಅಂತರ್ಜಲ ಮಟ್ಟ ಪಾತಾಳಕ್ಕಿಳಿದು ರೈತರ ಬದುಕುದುಸ್ತರವಾಗಿದೆ. ಇದಕ್ಕಾಗಿ ಆರಂಭಿಕ ಹಂತವಾಗಿ900 ಕೋಟಿ ರೂ. ಅನುದಾನದಲ್ಲಿ ರೂಪಿಸಲಾಗಿದ್ದಎಚ್.ಎನ್.ವ್ಯಾಲಿ ನೀರನ್ನು ಕೆರೆಗಳಿಗೆ ಹರಿಸುವಪ್ರಯತ್ನ ಯಶಸ್ವಿಯಾಗಿದೆ. ಇದರ ಬೆನ್ನÇÉೆ ವೃಷಭಾವತಿ ನೀರು ತುಮಕೂರು, ಕೊರಟಗೆರೆ, ದೊಡ್ಡಬಳ್ಳಾಪುರ ಮಾರ್ಗವಾಗಿ ತಾಲೂಕಿನ ತೊಂಡೇಭಾವಿ ಹೋಬಳಿ, ಹೊಸೂರು ಹೋಬಳಿಯ ಕೆರೆಗಳಿಗೆ ಹರಿಯಲಿದೆ ಎಂದು ಹೇಳಿದರು.
ಬದುಕು ಹಸನು: ಉಳಿದಂತೆ ಪೈಪ್‌ಲೈನ್ ಕಾಮಗಾರಿ ಪ್ರಗತಿಯಲ್ಲಿರುವ ಎತ್ತಿನಹೊಳೆ ಯೋಜನೆಯ ಮೂಲಕ ಎರಡು ಮೂರು ವರ್ಷದಲ್ಲಿಶಾಶ್ವತ ನೀರಾವರಿ ಯೋಜನೆ ತಾಲೂಕಿಗೆ ಲಭ್ಯವಾಗ ಲಿದೆ. ಇದರಿಂದ ರೈತರ ಬದುಕು ಹಸನಾಗಲಿದೆ ಎಂದು ಶಾಸಕ ಎನ್.ಎಚ್.ಶಿವಶಂಕರರೆಡ್ಡಿತಿಳಿಸಿದರು.
ಮುಖಂಡ ಎಚ್.ಎನ್.ಪ್ರಕಾಶರೆಡ್ಡಿ,ಹನು ಮಂತ ರೆಡ್ಡಿ, ನಾಗರಾಜ್, ವೆಂಕಟರಮಣ,ಮೂರ್ತಿ, ಸೇಟು, ಬಾಬು, ಸಣ್ಣ ನೀರಾವರಿ ಇಲಾಖೆಯ ಎಂಜಿನಿಯರ್ ಶ್ರೀನಿವಾಸರೆಡ್ಡಿ ಇದ್ದರು.
ಗಿಡಗಂಟಿ ತೆರವು ಮಾಡಿಲ್ಲ: ಎಚ್.ಎನ್.ವ್ಯಾಲಿನೀರು ಮರಳೂರು ಕೆರೆಗೆ ಹರಿಯಲಿದೆ ಎಂದುಎರಡೂ ಮೂರು ವರ್ಷಗಳ ಹಿಂದೆಯೇ ಸಣ್ಣ ನೀರಾವರಿಇಲಾಖೆಯಿಂದ ಹೂಳು, ನಿರುಪಯುಕ್ತ ಗಿಡಕೋಟ್ಯಂತರ ರೂ. ವೆಚ್ಚದಲ್ಲಿ ತೆರವುಗೊಳಿಸ ಲಾಗಿತ್ತು. ಇದೀಗ ಮತ್ತೆ ಗಡಿಗಂಟಿ ಬೆಳೆದಿದೆ ಎಂದುಸ್ಥಳೀಯ ರೈತರು ಆರೋಪಿಸಿದರು.