Advertisement

ಘನತ್ಯಾಜ್ಯ ವಿಲೇವಾರಿ ಘಟಕ ನಿರ್ವಹಿಸಿ: ನದಾಫ್‌

03:10 PM May 12, 2022 | Team Udayavani |

ಕೊಪ್ಪಳ: ಘನತ್ಯಾಜ್ಯ ವಿಲೇವಾರಿ ಘಟಕಗಳ ನಿರ್ವಹಣೆಯ ತರಬೇತಿ ಅಗತ್ಯವಾಗಿದೆ. ತರಬೇತಿ ಪಡೆದ ನಂತರ ತಮ್ಮ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಘನತ್ಯಾಜ್ಯ ವಿಲೇವಾರಿ ಘಟಕವನ್ನು ಹಸ್ತಾಂತರ ಮಾಡಿಕೊಂಡು ಅತ್ಯುತ್ತಮವಾಗಿ ನಿರ್ವಹಣೆ ಮಾಡಿ ಮಾದರಿ ಗ್ರಾಪಂ ಆಗಿ ಪರಿವರ್ತಿಸಿ ಎಂದು ತಾಪಂ ಪ್ರಭಾರಿ ಇಒ ರಾಜೇಸಾಬ್‌ ನದಾಫ್‌ ಹೇಳಿದರು.

Advertisement

ಗ್ರಾಮೀಣಾಭಿವೃದ್ಧಿ ಇಲಾಖೆ, ಮಹಾತ್ಮಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆ, ತಾಪಂ ಕಚೇರಿ, ಶ್ರೀ ಸುಧಾರಣಾ ಗ್ರಾಮೀಣಾಭಿವೃದ್ಧಿ ಸಂಸ್ಥೆ ಆಶ್ರಯದಲ್ಲಿ ಸಂಜೀವಿನಿ ಗ್ರಾಪಂ ಮಟ್ಟದ ಮಹಿಳಾ ಒಕ್ಕೂಟಗಳ ಸದಸ್ಯರಿಗೆ ನಗರದ ಕೃಷಿ ವಿಸ್ತರಣಾ ಕೇಂದ್ರದಲ್ಲಿ ನಡೆದ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ವಹಣೆ ಕುರಿತ ತರಬೇತಿ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿಯೊಂದು ಗ್ರಾಪಂನಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕವನ್ನು ನಿರ್ವಹಣೆ ಮಾಡಬೇಕಾಗಿದ್ದು, ಘಟಕಗಳ ನಿರ್ವಹಣೆಯನ್ನು ಸಂಜೀವಿನಿ ಸ್ವ-ಸಹಾಯ ಸಂಘಗಳ ಮಹಿಳೆಯರಿಗೆ ವಹಿಸಿಕೊಡಲಾಗುತ್ತದೆ. ಮಹಿಳೆಯರು ಮನೆಯನ್ನು ಸ್ವತ್ಛತೆಯಿಂದ ಅಚ್ಚುಕಟ್ಟಾಗಿ ಇಡುತ್ತಾರೆ. ಹಾಗಾಗಿ ಮಹಿಳೆಯರು ಸಮರ್ಥವಾಗಿ ಇಡೀ ಗ್ರಾಮ ಮತ್ತು ಗ್ರಾಮ ಪಂಚಾಯತಿಯನ್ನು ಸ್ವತ್ಛವಾಗಿ ಇಡಬಲ್ಲರು ಎಂಬ ಕಾರಣಕ್ಕಾಗಿ ಘಟಕಗಳ ನಿರ್ವಹಣೆಯನ್ನು ಮಹಿಳೆಯರಿಗೆ ವಹಿಸಿಕೊಡಲಾಗುತ್ತಿದೆ ಎಂದರು.

ತಾಪಂ ನಿರ್ದೇಶಕ (ಗ್ರಾಮೀಣ) ಕೆ. ಸೌಮ್ಯ, ಸಮಾಲೋಚಕ ಉಮಾಶಂಕರ, ಸಂಜೀವಿನಿ ಯೋಜನೆಯ ತಾಲೂಕ ಕಾರ್ಯಕ್ರಮ ವ್ಯವಸ್ಥಾಪಕ ಸುನೀಲ್‌ ಎಚ್‌.ಕೆ., ವಲಯ ಮೇಲ್ವಿಚಾರಕ ವೆಂಕಪ್ಪ ಶೀಗನಹಳ್ಳಿ, ಸುಧಾರಣಾ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಮಲ್ಲಯ್ಯ, ಸಂಪನ್ಮೂಲ ವ್ಯಕ್ತಿಗಳಾದ ಬಸವರಾಜ ಉಪ್ಪಲದಿನ್ನಿ ಹಾಗೂ ಹಟ್ಟಿ, ಗಿಣಿಗೇರಾ, ಓಜನಹಳ್ಳಿ ಮತ್ತು ಬಹದ್ದೂರ ಬಂಡಿ ಗ್ರಾಪಂ ವ್ಯಾಪ್ತಿಯ ಸ್ವ-ಸಹಾಯ ಸಂಘಗಳ ಸದಸ್ಯರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next