Advertisement

ಸಿಎಂಗೆ ಪತ್ರ ಬರೆದಿಟ್ಟು ಅರಣ್ಯ ಇಲಾಖೆಯ ಅರೆಕಾಲಿಕ ನೌಕರ ಕಚೇರಿಯಲ್ಲಿ ನೇಣಿಗೆ ಶರಣು

02:11 PM Jan 18, 2021 | Team Udayavani |

ಗಂಗಾವತಿ: ಅರಣ್ಯ ಇಲಾಖೆಯಲ್ಲಿ ಕ್ಷೇಮನಿಧಿ ಯೋಜನೆಯಲ್ಲಿ ಕೆಲಸ ಮಾಡುತ್ತಿರುವ ನೌಕರರನ್ನು ಖಾಯಂಗೊಳಿಸುವಂತೆ ಒತ್ತಾಯಿಸಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರಿಗೆ ಪತ್ರ ಬರೆದಿಟ್ಟು ನಿವೃತ್ತಿ ಅಂಚಿನಲ್ಲಿದ್ದ ಅರಣ್ಯ ಇಲಾಖೆಯ ಅರೆಕಾಲಿಕ ನೌಕರನೊಬ್ಬ ಕಚೇರಿಯಲ್ಲಿ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ಬೆಳಗ್ಗೆ ಜರುಗಿದೆ.

Advertisement

ಮೃತ ನೌಕರನನ್ನು ಟಿ.ಮಲ್ಲಿಕಾರ್ಜುನ (59) ಎಂದು ಗುರುತಿಸಲಾಗಿದೆ. ಕಳೆದ 37 ವರ್ಷಗಳಿಂದ ಅರಣ್ಯ ಇಲಾಖೆಯಲ್ಲಿ ಅರೆಕಾಲಿಕ ನೌಕರನಾಗಿ ಕೆಲಸ ಮಾಡುತ್ತಿದ್ದ ಇವರು ಇದೇ ವರ್ಷ ಮೇ ತಿಂಗಳಲ್ಲಿ ನಿವೃತ್ತಿಯಾಗಲಿದ್ದರು.

ಇದುವರೆಗೂ ಅರಣ್ಯ ಇಲಾಖೆಯಲ್ಲಿ ಕ್ಷೇಮನಿಧಿ ಯೋಜನೆಯಲ್ಲಿ‌ ನೇಮಕಗೊಂಡ ಸಾವಿರಾರು ನೌಕರರಿಗೆ ಖಾಯಂ ಮಾಡಿಲ್ಲ. ಕೆಲವರು ಇದೇ ವರ್ಷ ನಿವೃತ್ತಿಯಾಗಲಿದ್ದು ಮುಂದಿನ ಭವಿಷ್ಯ ಕಷ್ಟವಾಗಿದೆ. ಸರಕಾರ ಕೂಡಲೇ ಕ್ಷೇಮನಿಧಿ ಯೋಜನೆಯಲ್ಲಿ ನೇಮಕಗೊಂಡವರನ್ನು ಖಾಯಂ ಮಾಡುವಂತೆ ಸಿಎಂ ಯಡಿಯೂರಪ್ಪ ಅವರಿಗೆ ಪತ್ರ ಬರೆದ ಮಲ್ಲಿಕಾರ್ಜುನ ನೇಣಿಗೆ ಶರಣಾಗಿದ್ದಾರೆ.

ಇದನ್ನೂ ಓದಿ:ಕನ್ನಡ ಬಳಸದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಮುಂದಾದ ಪ್ರಾಧಿಕಾರ

ಯಾವುದೋ ಕಾರಣಕ್ಕೆ ನನ್ನ ಮಗ ಜೈಲಿಗೆ ಹೋಗಿದ್ದು ಸಿಎಂ ನನ್ನ ಮಗನ ಬಿಡುಗಡೆಗೆ ಕ್ರಮಕೈಗೊಳ್ಳಬೇಕು. ರಾಮಣ್ಣ ಎನ್ನುವವರಿಂದ 20 ಸಾವಿರ ರೂ.ಸಾಲ ಪಡೆದುಕೊಂಡು ಒಂದು ತಿಂಗಳು ಬಡ್ಡಿ ಪಾವತಿಸಿದ್ದು ಉಳಿದ ಹಣ ಕೊಟ್ಟು ದಾಖಲೆಗಳನ್ನು ವಾಪಸ್ ಪಡೆಯುವಂತೆ ಕುಟುಂಬದವರಿಗೆ ಪತ್ರದಲ್ಲಿ ತಿಳಿಸಿದ್ದಾನೆ.

Advertisement

ಇದನ್ನೂ ಓದಿ:ದೇಶದ ಏಕತೆಗೆ ಮಾರಕ: ಉದ್ಧವ್ ಠಾಕ್ರೆ ಮಾತಿಗೆ ಯಡಿಯೂರಪ್ಪ ಖಂಡನೆ

ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಸಾವಿರ ಮುಖ್ಯಮಂತ್ರಿ ಬಂದರೂ ಬೆಳಗಾವಿ ಕರ್ನಾಟದಲ್ಲೇ ಇರುತ್ತದೆ: ಸವದಿ

Advertisement

Udayavani is now on Telegram. Click here to join our channel and stay updated with the latest news.

Next