Advertisement

ಮನೆ ಸೇರಿದ ಮದುಮಗ ; ಲಾಕ್‌ಡೌನ್‌ನಿಂದ ಬಂಗಾಲದಲ್ಲಿ ಉಳಿದ ಕುಟುಂಬ

02:11 AM May 22, 2020 | Hari Prasad |

ಶಿಮ್ಲಾ: ಲಾಕ್‌ಡೌನ್‌ ಹಿನ್ನಲೆಯಲ್ಲಿ 56 ದಿನಗಳ ಕಾಲ ಪಶ್ಚಿಮ ಬಂಗಾಲದಲ್ಲಿ ಸಿಲುಕಿದ್ದ ಮದುವೆಯ ದಿಬ್ಬಣ ಹಿಮಾಚಲ ಪ್ರದೇಶಕ್ಕೆ ಮರಳಿದೆ.

Advertisement

ಮಾರ್ಚ್‌ 21ರಂದು 17 ಮಂದಿಯ ಮದುವೆ ದಿಬ್ಬಣ ಗುರ್ಮುಖಿ ಸೂಪರ್‌ಫಾಸ್ಟ್‌ ಎಕ್ಸ್‌ಪ್ರೆಸ್‌ ಮೂಲಕ ಕೊಲ್ಕತ್ತಾಗೆ ಮಾ. 22ರಂದು ಬಂದಿದ್ದರು. 22 ರಂದು ಜನತಾ ಕರ್ಫ್ಯೂ ಘೋಷಣೆಯಾಯಿತು.

ಹೀಗಾಗಿ ನಾವು ಲಾಕ್‌ ಡೌನ್‌ ನಲ್ಲಿ ಸಿಲುಕಿಕೊಂಡೆವು ಎಂದು ಮದುಮಗ ಸುನೀಲ್‌ ಕುಮಾರ್‌ ಹೇಳಿದ್ದಾರೆ.

ಮಾ.25ರಂದು ಪಶ್ಚಿಮ ಬಂಗಾಲದ ಪುರುಲಿಯಾ ಜಿಲ್ಲೆಯ ಕಾಶಿಪುರ ಗ್ರಾಮದಲ್ಲಿ ಸಂಜೋಗಿತಾರ ವಿವಾಹ ಸುನೀಲ್‌ ಕುಮಾರ್‌ ವಿವಾಹವನ್ನು ನಿಗದಿಪಡಿಸಲಾಗಿತ್ತು.

ವಧುವಿನೊಂದಿಗೆ ಮಾ.26 ರಂದು ಹಿಮಾಚಲ ಪ್ರದೇಶಕ್ಕೆ ವಾಪಸಾಗಲು ರೈಲಿಗೆ ಟಿಕೆಟ್‌ ಕಾಯ್ದಿರಿಸಲಾಗಿತ್ತು. ಇದೇ ಸಂದರ್ಭದಲ್ಲಿ ರೈಲು ಸಂಚಾರ ರದ್ದಾಗಿದ್ದ ಕಾರಣ ಧರ್ಮಶಾಲಾದಲ್ಲಿ ಇರಬೇಕಾಗಿತ್ತು.

Advertisement

ಸುನೀಲ್‌ ಕುಮಾರ್‌ ಅವರ ಮಾವ ಕಾಶಿಪುರ ಧರ್ಮಶಾಲಾದಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದು, ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸಿದರು.

ನಾವು ಪಶ್ಚಿಮ ಬಂಗಾಲದ ಸಹಾಯವಾಣಿ ಸಂಖ್ಯೆಗಳನ್ನು ಸಂಪರ್ಕಿಸಿದ್ದೇವೆ ಆದರೆ ಯಾವುದೇ ಪ್ರಯೋಜನವಾಗಿಲ್ಲ. ನಂತರ, ನಾವು ಹಿಮಾಚಲ ಪ್ರದೇಶದ ಸಚಿವ ವೀರೇಂದ್ರ ಕನ್ವರ್‌ ಅವರನ್ನು ಸಂಪರ್ಕಿಸಿದೆವು. ಅವರು ನಮಗೆ ಪಡಿತರ ಸಿಗುವಂತೆ ಮಾಡಿದ್ದರು.

ಮೇ 14ರಂದು ಪಶ್ಚಿಮ ಬಂಗಾಳದ ಮಾಲ್ಡಾದಿಂದ ಹಿಮಾಚಲ ಪ್ರದೇಶದ ಸೋಲನ್‌ ಜಿಲ್ಲೆಗೆ ಹೊರಡುವ ಮೂಲಕ 50 ದಿನಗಳ ವಾಸ್ತವ್ಯ ಮುಕ್ತಾಯವಾಯಿತು. 1,850 ಕಿಮೀ ಪ್ರಯಾಣವನ್ನು 55 ಗಂಟೆಗಳಲ್ಲಿ ಕ್ರಮಿಸಲಾಯಿತು. ಇದೀಗ ಅವರನ್ನೆಲ್ಲ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next