Advertisement

ಗಂಡು ಮಗುವಿನ ನಿರೀಕ್ಷೆ: 7 ದಿನದ ಹೆಣ್ಣು ಮಗುವನ್ನು ಗುಂಡಿಟ್ಟು ಕೊಂದ ತಂದೆ

01:21 PM Mar 08, 2022 | Team Udayavani |

ಪಂಜಾಬ್ : ಮಗನನ್ನು ಪಡೆಯಲು ಹತಾಶನಾಗಿದ್ದ ತಂದೆಯೊಬ್ಬ ತನ್ನ ಏಳು ದಿನದ ಮಗಳನ್ನು ಗುಂಡಿಕ್ಕಿ ಕೊಂದ ಪೈಶಾಚಿಕ ಕೃತ್ಯ ಪಾಕಿಸ್ಥಾನದ ಪಂಜಾಬ್ ಪ್ರಾಂತ್ಯದಲ್ಲಿ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.

Advertisement

ಪಾಕಿಸ್ಥಾನದ ಪ್ರಧಾನಿ ಇಮ್ರಾನ್ ಖಾನ್ ಅವರ ತವರೂರು ಮಿಯಾನ್ವಾಲಿಯಲ್ಲೇ ಭಾನುವಾರ ಈ ಘಟನೆ ನಡೆದಿದ್ದು, ಶಹಜೈಬ್ ಖಾನ್ ಎಂಬಾತ ಹೆಣ್ಣು ಶಿಶುವನ್ನು ಹತ್ಯೆ ಮಾಡಿದ್ದಾನೆ.

ಹಿರಿಯ ಪೊಲೀಸ್ ಅಧಿಕಾರಿ ಇಸ್ಮಾಯಿಲ್ ಖಾರಕ್ ಪ್ರಕಾರ, ಶಂಕಿತ ಶಹಜೈಬ್ ಖಾನ್ ಎಂಬಾತ ಎರಡು ವರ್ಷಗಳ ಹಿಂದೆ ಮಶಾಲ್ ಫಾತಿಮಾಳನ್ನು ಮದುವೆಯಾಗಿದ್ದ ಮತ್ತು ಒಂದು ವಾರದ ಹಿಂದೆ ಆತನ ಪತ್ನಿ ಮಗಳಿಗೆ ಜನ್ಮ ನೀಡಿದ್ದಳು. ಅಜ್ಜಿಯರಿಂದ ಜನ್ನತ್ ಎಂದು ಹೆಸರಿಸಲಾದ ಹುಡುಗಿಯ ಜನನದ ಸುದ್ದಿಯನ್ನು ಕೇಳಿದ ಖಾನ್, ತನ್ನ ಹೆಂಡತಿ ಮತ್ತು ಮಗಳನ್ನು ಶಪಿಸಲು ಪ್ರಾರಂಭಿಸಿ ಕೃತ್ಯ ಎಸಗಿದ್ದಾನೆ.

ಹೆಣ್ಣು ಮಗು ಹುಟ್ಟಿದ ಆಕ್ರೋಶದಲ್ಲಿ ಮನೆ ಬಿಟ್ಟು ಹೋಗಿದ್ದ ಶಹಜೈಬ್ ಖಾನ್ ಭಾನುವಾರ ಮನೆಗೆ ಮರಳಿ ಪಿಸ್ತೂಲ್ ತೆಗೆದುಕೊಂಡು ಗುಂಡು ಹಾರಿಸಿ  ಶಿಶುವನ್ನು ಹತ್ಯೆಗೈದಿದ್ದಾನೆ. ಸದ್ಯ ಶಹಜೈಬ್ ಖಾನ್ ಪರಾರಿಯಾಗಿದ್ದು, ಆತನಿಗಾಗಿ ಪೊಲೀಸರು ಹುಡುಕಾಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next