ಮಂಗಳೂರು: ನಗರದ ಹೊಯ್ಗೆ ಬಜಾರ್ ಎಂಬಲ್ಲಿ ವ್ಯಕ್ತಿಯೊಬ್ಬ ಎರಡು ವರ್ಷದ ಮಗುವಿನ ಮೇಲೆ ಲೈಂಗಿನ ದೌರ್ಜನ್ಯವೆಸಗಿ, ಉಪ್ಪು ನೀರಿನ ಮೀನಿನ ತೊಟ್ಟಿಗೆ ಮಗುವನ್ನು ಎಸೆದ ಘಟನೆ ಭಾನುವಾರ ಸಂಜೆ ನಡೆದಿದೆ.
ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಮಗು ಪ್ರಾಣಾಪಾಯದಿಂದ ಪಾರಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ ಎಂದಿದ್ದಾರೆ.
ಸ್ಥಳೀಯವಾಗಿ ಕೆಲಸ ಮಾಡುವ ಬಿಹಾರ ಮೂಲದ ದಂಪತಿಯ ಮಗು ಇದಾಗಿದ್ದು, ತಂದೆ ತಾಯಿ ಸಂಜೆ ಕೆಲಸ ಮಾಡ ಬಂದಾಗ ಮಗು ನಾಪತ್ತೆಯಾಗಿತ್ತು. ಮಗುವನ್ನು ಹುಡುಕಾಡಿದಾಗ ರಾತ್ರಿ 9 ಗಂಟೆ ಸುಮಾರಿಗೆ ಉಪ್ಪು ನೀರಿನ ಮೀನಿನ ತೊಟ್ಟಿಯಲ್ಲಿ ಮಗು ಪತ್ತೆಯಾಗಿದೆ. ನಂತರ ಮಗುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದರು.
ಇದನ್ನೂ ಓದಿ:ಬಂಟ್ವಾಳ: ರಾ.ಹೆ.75 ರಲ್ಲಿ ಕಂಟೈನರ್ ಹಾಗೂ ಬೈಕ್ ಢಿಕ್ಕಿ ; ಬೈಕ್ ಸವಾರ ಸಾವು
ಪೊಲೀಸ್ ತನಿಖೆಯ ವೇಳೆ ಬಿಹಾರ ಮೂಲದ ವ್ಯಕ್ತಿಯೋರ್ವ ಮಗುವನ್ನು ಕರೆದುಕೊಂಡು ಹೋಗಿರುವುದು ಗೊತ್ತಾಗಿದೆ. ವಶಕ್ಕೆ ಪಡೆದ ವಿಚಾರಣೆ ನಡೆಸಿದಾಗ ಆತ ಲೈಂಗಿಕ ದೌರ್ಜನ್ಯ ಮಾಡಿರುವ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ. ಮಗು ಸದ್ಯ ಚೇತರಿಕೆ ಕಾಣುತ್ತಿದೆ ಎಂದು ಶಶಿಕುಮಾರ್ ಮಾಹಿತಿ ನೀಡಿದರು.
ಪಾಂಡೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.