Advertisement

ಮೂರು ಡೋಸ್ ಫೈಜರ್ ಲಸಿಕೆ ಪಡೆದಾತನಿಗೆ ಒಮಿಕ್ರಾನ್ ಸೋಂಕು ದೃಢ!

09:26 AM Dec 18, 2021 | Team Udayavani |

ಮುಂಬೈ: ಅಮೆರಿಕದ ನ್ಯೂಯಾರ್ಕ್‌ ನಿಂದ ಹಿಂದಿರುಗಿದ 29 ವರ್ಷದ ವ್ಯಕ್ತಿಗೆ ಶುಕ್ರವಾರ ಮುಂಬೈನಲ್ಲಿ ಒಮಿಕ್ರಾನ್ ರೂಪಾಂತರಿ ಸೋಂಕು ತಗುಲಿರುವುದು ಧೃಢವಾಗಿದೆ. ಈ ಬಗ್ಗೆ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಪ್ರಕಟಣೆಯಲ್ಲಿ ತಿಳಿಸಿದೆ.

Advertisement

ಒಮಿಕ್ರಾನ್ ಸೋಂಕಿತ ವ್ಯಕ್ತಿಗೆ ಯಾವುದೇ ರೋಗಲಕ್ಷಣಗಳಿಲ್ಲ. ಈತ ಫೈಜರ್ ಲಸಿಕೆಯ ಮೂರು ಡೋಸ್ ತೆಗೆದುಕೊಂಡಿದ್ದಾನೆ ಎಂದು ಬಿಎಂಸಿ ಹೇಳಿದೆ.

ನವೆಂಬರ್ 9 ರಂದು ವಿಮಾನ ನಿಲ್ದಾಣದಲ್ಲಿ ನಡೆಸಿದ ಪರೀಕ್ಷೆಯಲ್ಲಿ ಅವರು ಕೋವಿಡ್ -19 ಪಾಸಿಟಿವ್ ಪತ್ತೆಯಾಗಿತ್ತು. ನಂತರ ಅವರ ಮಾದರಿಗಳನ್ನು ಜೀನೋಮ್ ಸೀಕ್ವೆನ್ಸಿಂಗ್ ಗೆ ಕಳುಹಿಸಲಾಗಿತ್ತು. ಅವರ ಇಬ್ಬರು ನಿಕಟ ಸಂಪರ್ಕಿತರ ಕೋವಿಡ್ ಪರೀಕ್ಷೆ ನೆಗಟಿವ್ ವರದಿಯಾಗಿದೆ ಎಂದು ಬಿಎಂಸಿ ತಿಳಿಸಿದೆ.

ಇದನ್ನೂ ಓದಿ:ಕೊವೊವ್ಯಾಕ್ಸ್‌ಗೆ ಡಬ್ಲ್ಯುಎಚ್‌ಒ ಮಾನ್ಯತೆ

“ಸೋಂಕಿತರನ್ನು ಮುನ್ನೆಚ್ಚರಿಕೆ ಕ್ರಮವಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು ಅವರಿಗೆ ಯಾವುದೇ ರೋಗಲಕ್ಷಣಗಳಿಲ್ಲ” ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Advertisement

ಈ ಪ್ರಕರಣದೊಂದಿಗೆ ಮುಂಬೈನ ಒಮಿಕ್ರಾನ್ ರೋಗಿಗಳ ಸಂಖ್ಯೆಯನ್ನು 15 ಕ್ಕೆ ಏರಿಕೆಯಾಗಿದೆ. ಇದರಲ್ಲಿ ಐವರು ಮುಂಬೈನ ಹೊರಗಿನವರು ಸೇರಿದ್ದಾರೆ. ಆದರೆ ಈ ಪೈಕಿ 13 ರೋಗಿಗಳು ಈಗಾಗಲೇ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next