Advertisement
ಕಳೆದ ರವಿವಾರದಂದು ನದಿಗೆ ನೀರು ಹರಿ ಬಿಡುವದನ್ನು ಸ್ಥಗಿತಗೊಳಿಸಿದ್ದರಿಂದ ನದಿಯಲ್ಲಿ ನೀರು ಇಲ್ಲದೆ ಇರುವದನ್ನು ಗಮನಿಸಿದ ಕುರಿಗಾಹಿಗಳಾದ ಟೋಪಣ್ಣ ಹಾಗೂ ಢೀಕಪ್ಪ ಇಬ್ಬರು ಸೇರಿ ತಮ್ಮ ಹಾಗೂ ಇತರರ ಕುರಿಗಳು ಸೇರಿ 165 ಕುರಿಗಳೊಂದಿಗೆ ಶ್ರೀ ಛಾಯಾ ಭಗವತಿ ಬಳಿ ನದಿಯ ಮಧ್ಯದಲ್ಲಿ ಇರುವ ಎಡದನಮಾಳಿ ತಪ್ಪಲಿನಲ್ಲಿ ಕುರಿಗಳನ್ನು ಮೇಯಿಸಲು ನಡುಗಡ್ಡಿಯಲ್ಲಿ ಕುರಿಗಳೊಂದಿಗೆ ಬೀಡು ಬಿಟ್ಟಿದ್ದಾರೆ. ಆದರೆ ಗುರುವಾರ ಬಸವ ಸಾಗರದಿಂದ ನದಿಗೆ 1 ಲಕ್ಷ ಕ್ಯೂಸೆಕ್ ನಷ್ಟು ನೀರು ಬಿಡಲು ಆರಂಭಿಸಿ ಶುಕ್ರವಾರ 1.80 ಲಕ್ಷ ಕ್ಯೂಸೆಕ್ ಏರಿಕೆಯಾಗಿದ್ದರಿಂದ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ.
Related Articles
Advertisement
ಮಾಹಿತಿ ತಿಳಿದು ಶನಿವಾರ ಬೆಳಿಗ್ಗೆ ಕಂದಾಯ ಇಲಾಖೆಯ ಆರ್ ಐ ಬಸವರಾಜ ಬಿರಾದರ ಅಗ್ನಿಶಾಮಕದಳದ ಪಿಎಸ್ ಐ ಪ್ರಮೋದ ವಾಲಿ ಹಾಗೂ ಸ್ಥಳೀಯ ಪೊಲೀಸ್ ಠಾಣೆ ಸಿಬ್ಬಂದಿ ನೇತೃತ್ವದ ತಂಡ ರಕ್ಷಣಾ ಕಾರ್ಯಕ್ಕಾಗಿ ನದಿ ತೀರದಲ್ಲಿ ಬೀಡು ಬಿಟ್ಟಿದ್ದಾರೆ.
ಕಳೆದೆ ಬಾರಿಯು ಇದೆ ರೀತಿ ಪ್ರವಾಹದಲ್ಲಿ ತಪ್ಪಲುಗಡ್ಡಿಯಲ್ಲಿ ಕುರಿಗಳು ಸಿಲುಕಿಕೊಂಡಿದ್ದವು. ನದಿಯಲ್ಲಿ ನೀರು ಕಡಿಮೆಯಾದಾಗ ಮರಳಿ ದಡಕ್ಕೆ ಕರೆತರಲಾಗಿರತ್ತು.